2 ಲಕ್ಷ ಹಣಕ್ಕೆ ಬೇಡಿಕೆ ಆರೋಪ: ಪುನೀತ್‌ ಕೆರೆ​ಹಳ್ಳಿ, ಆತನ ಸಹ​ಚ​ರರ ವಿರುದ್ಧ ಎಫ್‌ಐಆರ್‌

By Kannadaprabha News  |  First Published Apr 3, 2023, 11:07 AM IST

ಗೋವು​ಗ​ಳನ್ನು ಸಾಗಿ​ಸು​ತ್ತಿದ್ದ ಇದ್ರೀಸ್‌ ಪಾಷಾ ಅನು​ಮಾ​ನ​ಸ್ಪದವಾಗಿ ಸಾವ​ನ್ನ​ಪ್ಪಿದ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಸಾತ​ನೂರು ಠಾಣೆ ಪೊಲೀ​ಸರು ಆರೋಪಿಗಳಾದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ ಕೆರೆ​ಹಳ್ಳಿ ಮತ್ತು ಆತನ ಸಹ​ಚ​ರರ ವಿರುದ್ಧ ಎಫ್‌ ಐಆರ್‌ ದಾಖ​ಲಿ​ಸಿ​ದ್ದಾರೆ.


ಕನ​ಕ​ಪುರ (ಏ.3) : ಗೋವು​ಗ​ಳನ್ನು ಸಾಗಿ​ಸು​ತ್ತಿದ್ದ ಇದ್ರೀಸ್‌ ಪಾಷಾ ಅನು​ಮಾ​ನ​ಸ್ಪದವಾಗಿ ಸಾವ​ನ್ನ​ಪ್ಪಿದ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಸಾತ​ನೂರು ಠಾಣೆ ಪೊಲೀ​ಸರು ಆರೋಪಿಗಳಾದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ ಕೆರೆ​ಹಳ್ಳಿ ಮತ್ತು ಆತನ ಸಹ​ಚ​ರರ ವಿರುದ್ಧ ಎಫ್‌ ಐಆರ್‌ ದಾಖ​ಲಿ​ಸಿ​ದ್ದಾರೆ.

ಮಂಡ್ಯ ನಗ​ರದ ಗುತ್ತಲು ಬಡಾ​ವಣೆ ವಾಸಿ ಯೂನಸ್‌ ಪಾಷಾ ನೀಡಿದ ದೂರಿನ ಮೇರೆಗೆ ಪೊಲೀ​ಸರು ಐಪಿಸಿ 1860ರ ಅನ್ವಯ 341, 504, 506, 324, 302 ಸೆಕ್ಷೆನ್‌ ಅಡಿ​ಯಲ್ಲಿ ಆರೋ​ಪಿ​ಗಳ ವಿರುದ್ಧ ಪ್ರಕ​ರಣ ದಾಖಲಿಸಿ​ದ್ದಾರೆ.

Tap to resize

Latest Videos

ಗೋ ಪ್ರೇಮ ಮೆರೆದ ರಕ್ಷಿತ್ ಶೆಟ್ಟಿ: ವಿಡಿಯೋ ವೈರಲ್

ಎಫ್‌ಐಆರ್‌ ನಲ್ಲಿ ಏನಿದೆ?

ಏಪ್ರಿಲ್‌ 1ರಂದು ರಾತ್ರಿ 12.30ರ ಸಮ​ಯ​ದಲ್ಲಿ ಸಾತ​ನೂರು ಗ್ರಾಮದ ಸಂತೆ​ಮಾಳ ಸರ್ಕಲ್‌ ಬಳಿ ಜಾನು​ವಾ​ರು​ಗ​ಳನ್ನು ಸಾಗಿ​ಸು​ತ್ತಿದ್ದ ನಮ್ಮ ವಾಹ​ನ​ವನ್ನು ಅಡ್ಡ ಹಾಕಿದ ಪುನಿತ್‌ ಕೆರೆ​ಹಳ್ಳಿ ಮತ್ತು ಅವನ ಸಹ​ಚ​ರರು ಬಂದು ಗೋಹತ್ಯೆ ನಿಷೇಧ ಕಾಯ್ದೆ ನೆಪ​ದಲ್ಲಿ ಏಕಾ​ಏಕಿ ನಮ್ಮ ಮೇಲೆ ಹಲ್ಲೆ ಮಾಡಿದ​ರು. ನಾವು ರಾಸು​ಗ​ಳನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂ​ಕಿನ ಶಿವ​ಪುರದ ತೆಂಡೆ​ಕೆರೆ ಸಂತೆ​ಯಲ್ಲಿ ಕಾನೂನು ಬದ್ಧ​ವಾಗಿ ಖರೀ​ದಿ ಮಾಡಿದ್ದು, ನಮ್ಮ ಹತ್ತಿರ ಖರೀದಿ ಮಾಡಿದ ರಶೀದಿ ಕೂಡ ಇದೆ​ಯೆಂದು ಹೇಳಿ​ದರೂ ನಮ್ಮ ಮಾತನ್ನು ಪರಿ​ಗ​ಣಿ​ಸದೆ ಮನ​ಬಂದಂತೆ ಥಳಿ​ಸಿದರು. ನೀವು 2 ಲಕ್ಷ ಹಣ ಕೊಟ್ಟರೆ ಮಾತ್ರ ನಿಮ್ಮನ್ನು ಬಿಡು​ತ್ತೇನೆ. ಇಲ್ಲ​ವಾ​ದರೆ ನಿಮ್ಮನ್ನು ಬಿಡು​ವು​ದಿಲ್ಲ. ನಿಮ್ಮನ್ನು ಕೊಲೆ ಮಾಡಿ ಸಾಯಿ​ಸು​ತ್ತೇನೆ ಎಂದು ಅವಾ​ಚ್ಯ​ ಶ​ಬ್ದ​ಗ​ಳಿಂದ ನಿಂದಿ​ಸಿ​ದ್ದ​ಲ್ಲದೆ ಮಾರ​ಕಾ​ಸ್ತ್ರ​ಗ​ಳನ್ನು ತೋರಿಸಿ ಹೆದ​ರಿ​ಸಿ​ದರು.

ನಂತರ ನಾವು ಪ್ರಾಣ ಭಯ​ದಿಂದ ಓಡಿ ಹೋಗುವ ಸಂದ​ರ್ಭ​ದಲ್ಲಿ ನಮ್ಮ ಜೊತೆ​ಯಿದ್ದ ಇರ್ಫಾನ್‌ ಮತ್ತು ನನ್ನನ್ನು ಮಾರ​ಣಾಂತಿ​ಕ​ವಾಗಿ ಹಲ್ಲೆ ಮಾಡಿದರು. ನಂತರ ಪೊದೆ​ಯೊ​ಳಗೆ ಅವಿ​ತು​ಕೊಂಡಿದ್ದ ಇದ್ರೀಸ್‌ ಪಾಷಾನನ್ನು ಪುನೀತ್‌ ಕೆರೆ​ಹಳ್ಳಿ ಮತ್ತು ಆತನ ಸಹ​ಚ​ರರು ಹಲ್ಲೆ ನಡೆಸಿ ಕೊಲೆ ಮಾಡಿ ಹೋಗಿ​ದ್ದಾ​ರೆಂದು ನನ್ನ ಸ್ನೇಹಿ​ತ​ನಾದ ಸೈಯದ್‌ ಜಾಹೀರ್‌ ನೀಡಿದ ಮಾಹಿತಿ ಮೇರೆಗೆ ಪ್ರಕ​ರಣ ದಾಖ​ಲಿ​ಸಿ​ರು​ವು​ದಾಗಿ ಯೂನಸ್‌ ಪಾಷಾ ದೂರಿನಲ್ಲಿ ತಿಳಿ​ಸಿ​ದ್ದಾರೆ.

ಅಲ್ಲದೆ, ಸೈಯದ್‌ ಜಾಹೀರ್‌ ನನ್ನು ಠಾಣೆಗೆ ಎಳೆ​ದು​ಕೊಂಡ ಬಂದ ಆರೋ​ಪಿ​ಗಳು ಇದ್ರೀಸ್‌ ಪಾಷಾ ಅವ​ರನ್ನು ಕೊಲೆ ಮಾಡಿ​ರುವ ವಿಚಾ​ರ​ವನ್ನು ಮರೆ​ಮಾ​ಚುವ ಉದ್ದೇ​ಶ​ದಿಂದ ನಮ್ಮ ಮೇಲೆಯೇ ದೂರು ನೀಡಿ​ದ್ದಾರೆ. ನಂತರ ಪೊಲೀಸ್‌ ಠಾಣೆ​ಯಲ್ಲಿ ನಾನು ಇದ್ರೀಸ್‌ ಪಾಷ​ನನ್ನು ಪುನೀತ್‌ ಕೆರೆ​ಹಳ್ಳಿ ಮತ್ತು ಆತನ ಸಹ​ಚ​ರರು ಕೊಲೆ ಮಾಡಿ​ರುವ ವಿಚಾ​ರ​ವನ್ನು ತಿಳಿ​ಸಿ​ರು​ವು​ದಾಗಿ ಉಲ್ಲೇಖಿ​ಸಿ​ದ್ದಾರೆ. ಕೋಮು ಸಂಘ​ರ್ಷಕ್ಕೆ ಕಾರ​ಣ​ವಾ​ಗಿ​ರುವ ಪುನೀತ್‌ ಕೆರೆ​ಹಳ್ಳಿ ಹಾಗೂ ಆತನ ಸಹ​ಚ​ರರ ಮೇಲೆ ಕಾನೂನು ರೀತ್ಯಾ ಕ್ರಮ ಜರು​ಗಿಸಿ ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ನ್ಯಾಯ ದೊರ​ಕಿ​ಸಿ​ಕೊ​ಡ​ಬೇ​ಕೆಂದು ಯೂನಸ್‌ ಪಾಷಾ ದೂರಿ​ನಲ್ಲಿ ಮನವಿ ಮಾಡಿ​ದ್ದಾ​ರೆ.

ಕಾಂಗ್ರೆಸ್‌ ಪಕ್ಷ​ದಿಂದ ಟ್ವೀಟ್‌

40% ಕಮಿಷನ… ಪಡೆದು ಆರಾಮಾಗಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ, ಕಾನೂನು ಪಾಲನೆಯ ಹೊಣೆಯನ್ನು ಪೊಲೀಸರಿಗೆ ಕೊಟ್ಟಿದ್ದೀರೋ, ಕೊಲೆಗಡುಕರಿಗೆ ಕೊಟ್ಟಿದ್ದೀರೋ? ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆಗೆ ನಿಮ್ಮ ವಿಫಲ ಸರ್ಕಾರ ಹೊಣೆಯಲ್ಲವೇ? ಬೀದಿ ಪುಂಡರನ್ನು ಆದರ್ಶ ವ್ಯಕ್ತಿಗಳು ಎಂಬಂತೆ ಮೆರೆಸುವ ಬಿಜೆಪಿ ಈ ಕೊಲೆಯ ಹೊಣೆ ಹೊರಲಿ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಧರ್ಮ ರಕ್ಷಣೆ ಹೆಸ​ರಲ್ಲಿ ಗೂಂಡಾ ಸಂಸ್ಕೃತಿ ಬೆಳೆ​ಸಿದ ಬಿಜೆಪಿ: ಮಾಜಿ ಸಿಎಂ ಸಿದ್ದ​ರಾ​ಮಯ್ಯ ಕಿಡಿ

ರಾಮ​ನ​ಗ​ರ: ಧರ್ಮ ರಕ್ಷಣೆ ಹೆಸರಲ್ಲಿ ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಬೆಳೆಸಿದ ಗೂಂಡಾ ಸಂಸ್ಕೃತಿಗೆ ಸಾತನೂರು ಬಳಿ ನಡೆದ ಯುವಕನ ಹತ್ಯೆ ಸಾಕ್ಷಿ. ಈ ಹತ್ಯೆಯ ಹೊಣೆಯನ್ನು ಆರಗ ಜ್ಞಾನೇಂದ್ರ ಅವರಂತಹ ಅಸಮರ್ಥ ಗೃಹ ಸಚಿವರೇ ಹೊರಬೇಕು ಎಂದು ಮಾಜಿ ಸಿಎಂ ಸಿದ್ದ​ರಾ​ಮಯ್ಯ(Siddaramaiah) ಕಿಡಿ​ಕಾ​ರಿ​ದ್ದಾರೆ.

ಈ ಕುರಿತು ಟ್ವೀಟ್‌ ಮಾಡಿ​ರುವ ಸಿದ್ದ​ರಾ​ಮಯ್ಯ, ಕರ್ನಾಟಕ ಇಂತಹ ಅಸಮರ್ಥ, ಅಧ್ಯಕ್ಷ ಮತ್ತು ಬೇಜವಾಬ್ದಾರಿ ಗೃಹ ಸಚಿವರನ್ನು ಎಂದೂ ನೋಡಿರಲಿಲ್ಲ. ತನ್ನ ಇಲಾಖೆಯ ಮೇಲೆ ನಿಯಂತ್ರಣ ಇಲ್ಲದ ಈ ಸಚಿವರಿಗೆ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವೇ? ಮೊದಲು ಇವರನ್ನು ಸಂಪುಟದಿಂದ ಕಿತ್ತು ಹಾಕಿ ಎಂದಿ​ದ್ದಾ​ರೆ. ಗೋರಕ್ಷಣೆ ಹೆಸರಲ್ಲಿ ನಡೆದ ಹತ್ಯೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮು ದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ ಭಾಗವಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕೂಲಂಕುಷ ತನಿಖೆ ನಡೆಸಬೇಕು.

ಉತ್ತರಕನ್ನಡ: ಅನುದಾನದ ಕೊರತೆಯಿಂದ ಸಂಕಷ್ಟದಲ್ಲಿ ಗೋಶಾಲೆ

ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ನಗರದಲ್ಲಿ ನಿತ್ಯ ಅತ್ಯಾಚಾರ, ಕೊಲೆಗಳು ನಿರ್ಭೀತಿಯಿಂದ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಈ ಸರ್ಕಾರ ಅಸ್ತಿತ್ವದಲ್ಲಿರುವಾಗ ಚುನಾವಣೆ ನ್ಯಾಯಯುತವಾಗಿ ನಡೆಯುವುದು ಅನುಮಾನ. ಚುನಾವಣಾ ಆಯೋಗ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿ​ಸಿ​ದ್ದಾರೆ.

click me!