ವರ್ಷವೀಡಿ ದುಡಿಯುವ ನರೇಗಾ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಹಾಲಿ ಇರುವ ದಿನಕೂಲಿ ಹಣಕ್ಕೆ ಬರೀ 7 ರು, ಮಾತ್ರ ಹೆಚ್ಚಿಸಿ ಹೊರಡಿಸಿರುವ ಆದೇಶ ಇದೀಗ ನರೇಗಾ ಯೋಜನೆಯಡಿ ದುಡಿಯುವ ಅಸಂಘಟಿತ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ : ವರ್ಷವೀಡಿ ದುಡಿಯುವ ನರೇಗಾ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಹಾಲಿ ಇರುವ ದಿನಕೂಲಿ ಹಣಕ್ಕೆ ಬರೀ 7 ರು, ಮಾತ್ರ ಹೆಚ್ಚಿಸಿ ಹೊರಡಿಸಿರುವ ಆದೇಶ ಇದೀಗ ನರೇಗಾ ಯೋಜನೆಯಡಿ ದುಡಿಯುವ ಅಸಂಘಟಿತ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ವರ್ಷಾಂತ್ಯ ಕಳೆಯುತ್ತಿದ್ದಂತೆ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗಿಗಳಿಗೆ ಸಾವಿರಾರು ವೇತನ ಹೆಚ್ಚಳ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಕೂಲಿ ಕಾರ್ಮಿಕರಿಗೆ ಮಾತ್ರ ಕೇಂದ್ರ ಸರ್ಕಾರ ಬರೀ 7 ರು, ಕೂಲಿ ಹಣ ಹೆಚ್ಚಿಸಿ ಇದೀಗ ಟೀಕೆಗೆ ಗುರಿಯಾಗಿದೆ.
ಕಾರ್ಮಿಕರಿಗೆ ತೀವ್ರ ನಿರಾಸೆ
ಪ್ರತಿ ವರ್ಷ ಕೂಡ ಉದ್ಯೋಗಿಯ ವೇತನ ಪರಿಷ್ಕರಣೆ ಮಾಡುವಂತೆ ಕಾರ್ಮಿಕ ಕಾಯ್ದೆ ಪ್ರಕಾರಣ ಕಾರ್ಮಿಕರ ಹಣ ಕೂಡ ಪರಿಷ್ಕರಣೆ ಮಾಡಬೇಕಾಗುತ್ತದೆ. ಆದರೆ ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಅಕುಶಲ ಕಾರ್ಮಿಕರಿಗೆ ಸದ್ಯ 309 ರು, ಮಾತ್ರ ಕೂಲಿ ಹಣ ನೀಡಲಾಗುತ್ತಿದೆ. ಆದರೆ ಬರುವ 2023-24ರ ಆರ್ಥಿಕ ವರ್ಷಕ್ಕೆ ಕೂಲಿ ಹಣ ಹೆಚ್ಚಳ ಆಗುವ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ಕೇಂದ್ರ ಸರ್ಕಾರ ತೀವ್ರ ನಿರಾಸೆ ಮೂಡಿಸಿದೆ. ಇಡೀ ವರ್ಷ ದುಡಿದುಕೊಂಡು ಬರುತ್ತಿರುವ ಕೂಲಿ ಕಾರ್ಮಿಕರಿಗೆ ಬರೀ 7 ರು, ಮಾತ್ರ ಕೂಲಿ ಹಣ ಹೆಚ್ಚಿಸಿ ಆದೇಶಿಸಿದೆ.
309ರ ಬದಲಾಗಿ 316ಕ್ಕೆ ಏರಿಕೆ:
ಅಂದಹಾಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಅಕುಶಲ ಕಾರ್ಮಿಕರ ಕೂಲಿ ದರ ಪ್ರಸ್ತುತ ವರ್ಷದಲ್ಲಿ ನೀಡಲಾಗುತ್ತಿರುವ 309 ರುಗಳಿಂದ 316 ರುಗಳಿಗೆ ಪರಿಷ್ಕರಿಸಿ 2023ರ ಏಪ್ರಿಲ್ 1 ರ ಆರ್ಥಿಕ ವರ್ಷ 2023-24 ನೇ ಸಾಲಿಗೆ ಅನ್ವಯವಾಗುವಂತೆ ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸುವಂತೆ ಉಲ್ಲೇಖದಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ದಿ ಮಂತ್ರಾಲಯದವರು ರಾಜ್ಯ ಪತ್ರದಲ್ಲಿ ಪ್ರಕಟಿಸಿದ ಆಧಿಸೂಚನೆಯಂತೆ ಕ್ರಮ ಕೈಗೊಳ್ಳುವಂತೆ ರಾಜ್ಯ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆಯುಕ್ತರು ರಾಜ್ಯದ ಎಲ್ಲಾ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ರಾಜ್ಯದ ಎಲ್ಲಾ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ನರೇಗಾ ಕಾರ್ಮಿಕರು ಅಸಮಾಧಾನ
ಅಡುಗೆ ಅನಿಲ ಸೇರಿದಂತೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ ವಿಪರೀತವಾಗಿ ಬೆಲೆ ಹೆಚ್ಚಿಸಿಕೊಂಡಿವೆ. ಆದರೆ ನರೇಗಾದಡಿ ದುಡಿಯುವ ಕಾರ್ಮಿಕರಿಗೆ ಮೊದಲೇ ದಿನಗೂಲಿ ಸಾಕಷ್ಟುಕಡಿಮೆ ಇದೆ. ಇತಂಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೇವಲ 7 ರು, ಕೂಲಿ ಹಣ ಮಾತ್ರ ಹೆಚ್ಚಿಸಿರುವುದು ಸರಿಯಲ್ಲ ಎಂದು ನರೇಗಾದಡಿ ಕೆಲಸ ಮಾಡುವ ಅಕುಶಲ ಕಾರ್ಮಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನರೇಗಾ ಕಾರ್ಮಿಕರಿಗೆ ಹೆಚ್ಚಿಸಿದ ಕೂಲಿ ಬರೀ .7
ಕೇಂದ್ರದ ಕ್ರಮಕ್ಕೆ ಕೂಲಿಕಾರರ ಆಕ್ರೋಶ
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಕಾರ್ಮಿಕರಿಗೆ ನಿರಾಸೆ
ಪರಿಷ್ಕೃತ ಕೂಲಿ
.309 ಇದ್ದ ಕೂಲಿ ಹಣ .3016ಕ್ಕೆ ಹೆಚ್ಚಳ
ಏಪ್ರಿಲ್ 1ರಿಂದ ಪರಿಷ್ಕೃತ ಕೂಲಿ ಅನ್ವಯ
ಕೇವಲ .7 ಕೂಲಿ ಹಣ ಹೆಚ್ಚಿಸಿದ ಕೇಂದ್ರ