ಅಫಜಲ್ಪುರ: ಕೈಕೊಟ್ಟ ಮಳೆ, ದೇವರ ನಂಬಿ ಒಣ ಭೂಮಿ​ಯ​ಲ್ಲಿ ಬಿತ್ತನೆ

By Kannadaprabha News  |  First Published Jun 11, 2023, 11:00 PM IST

ಒಣ ನೆಲಕ್ಕೆ ರಾಸಾಯನಿಕ ಗೊಬ್ಬರ ಚೆಲ್ಲಿ ತೊಗರಿ ಹೆಸರು ಬಿತ್ತನೆ ಮಾಡುತ್ತಿದ್ದಾರೆ. ಮಳೆಯಾದರೆ ಮೊಳಕೆ ಬರುತ್ತದೆ ಎಂಬ ನಂಬಿಕೆಯಿಂದ ಒಣ ನೆಲದಲ್ಲಿ ಬಿತ್ತನೆ ಮಾಡಲಾಗುತ್ತಿದೆ.


ಅಫಜಲ್ಪುರ(ಜೂ.11):  ಮಳೆ ಕೊರತೆಯಿಂದ ತಾಲೂಕಿನ ರೈತರು ಹತಾಶರಾಗಿದ್ದಾರೆ. ಮಳೆ ಇಲ್ಲದಿದ್ದರೂ ಒಣ ಭೂಮಿಯಲ್ಲಿ ಬಿತ್ತನೆ ಮಾಡುತ್ತಿದ್ದಾರೆ. ಒಣ ನೆಲಕ್ಕೆ ರಾಸಾಯನಿಕ ಗೊಬ್ಬರ ಚೆಲ್ಲಿ ತೊಗರಿ ಹೆಸರು ಬಿತ್ತನೆ ಮಾಡುತ್ತಿದ್ದಾರೆ. ಮಳೆಯಾದರೆ ಮೊಳಕೆ ಬರುತ್ತದೆ ಎಂಬ ನಂಬಿಕೆಯಿಂದ ಒಣ ನೆಲದಲ್ಲಿ ಬಿತ್ತನೆ ಮಾಡಲಾಗುತ್ತಿದೆ.

ಮಳೆಯಾಗುವುದು ತಡವಾದರೆ ಬಿತ್ತಿದ ತೊಗರಿ ಹೆಸರು ಬೆಳೆ ಹುಳಗಳ ಪಾಲಾಗುತ್ತದೆ. ತಾಲೂಕಿನಲ್ಲಿ ಒಣ ಬಿತ್ತನೆ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಕೆಲವು ಸಲ ಅದು ಫಲ ನೀಡಿದೆ.ಮಳೆಯಾದ ಸಂದರ್ಭದಲ್ಲಿ ಜಮೀನು ಉಳುಮೆ ಮಾಡಿ, ಬಿತ್ತನೆಗೆ ಹದಗೊಳಿಸಿರುವ ರೈತರು ಮಾತ್ರ ಒಣ ಬಿತ್ತನೆ ಮಾಡುತ್ತಿದ್ದಾರೆ. ಉಳಿದವರು ಜಮೀನು ಉಳುಮೆ ಮಾಡಲು ಮಳೆಗಾಗಿ ಕಾದು ಕುಳಿತಿದ್ದಾರೆ. 

Latest Videos

undefined

ಬಿಪೊರ್‌ಜಾಯ್ ಚಂಡಮಾರುತದಿಂದ ಮುಂಗಾರು ಮಳೆ ವಿಳಂಬ: ಕರಾವಳಿಯಲ್ಲಿಯೂ ಆತಂಕ

ಸಮಯಕ್ಕೆ ಸರಿಯಾಗಿ ಮಳೆಯಾಗಿದ್ದರೆ ಹೆಸರು ಉದ್ದು ಬಿತ್ತನೆ ಮುಗಿಯುತ್ತಿತ್ತು. ಆದರೆ ಇನ್ನೂ ಬಿತ್ತನೆಯೇ ಆಗಿಲ್ಲ. ಮಳೆಯಾಗುವುದು ಯಾವಾಗ ಬಿತ್ತನೆ ಮಾಡುವುದು ಯಾವಾಗ ಎಂದು ತಾಲೂಕಿನ ರೈತರು ಹೇಳುತ್ತಿದ್ದಾರೆ.
ದೇವರ ನಂಬಿ ಒಣ ಬಿತ್ತನೆ ಮಾಡುತ್ತಿದ್ದೇವೆ. ಮಳೆರಾಯ ಕರುಣಿಸಿದರೆ ಬಿತ್ತಿದ ಬೀಜ ಮೊಳೆಯುತ್ತದೆ.ಇಲ್ಲವಾದರೆ ನಷ್ಟತಪ್ಪಿದ್ದಲ್ಲ.ಒಂದು ಗಂಟೆಗೆ 700 ರುಪಾಯಿಯಂತೆ ಟ್ರ್ಯಾಕ್ಟರ್‌ ನಿಂದು ಬಿತ್ತನೆ ಮಾಡಿಸುತ್ತಿದ್ದೇನೆ. ಇಷ್ಟಕ್ಕೂ ನಮ್ಮ ಕೈಯಲ್ಲಿ ಏನಿದೆ.ಎಲ್ಲಾ ದೇವರ ಕೈಯಲ್ಲಿದೆ ಅಂತ ಮಣ್ಣೂರ ಗ್ರಾಮದ ರೈತ ಗಣೇಶ ಗುಂಡೇರಾವ ಕುಲಕರ್ಣಿ ತಿಳಿಸಿದ್ದಾರೆ.  

click me!