ಯಾದಗಿರಿ: ಹೆಚ್ಚಿನ ಪರಿಹಾರ ನೀಡದಿದ್ರೆ ಆತ್ಮಹತ್ಯೆ ಮಾಡಿಕೊಳ್ತೇವೆ, ರೈತರ ಆಕ್ರೋಶ

By Girish Goudar  |  First Published Jul 27, 2022, 2:38 PM IST

ಸುಮಾರು 21 ಗ್ರಾಮದ ವ್ಯಾಪ್ತಿಯ ರೈತರು ಭೂಮಿಯನ್ನು ಕಳೆದುಕೊಂಡಿದ್ದಾರೆ. 718 ರೈತರು ಭೂಮಿ ಕಳೆದುಕೊಂಡಿದ್ದಾರೆ. 


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ(ಜು.27):  ಭಾರತೀಯ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರವು ಭೂಮಿ ಕಳೆದು ರೈತರಿಗೆ ಕಡಿಮೆ ಪರಿಹಾರ ನೀಡಲು ಮುಂದಾಗಿದಕ್ಕೆ ರೈತರು ಹೆಚ್ಚಿನ ಪರಿಹಾರ ನೀಡಿದರೆ ಭೂಮಿ ನೀಡುತ್ತೆವೆ ಇಲ್ಲದಿದ್ದರೆ ಜಮೀನು ಕೊಡುವದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೋನಹಳ್ಳಿ,ಬೆಂಡಬೆಂಬಳಿ, ಮನಗನಾಳ, ವಡಗೇರಾ ಸೇರಿದಂತೆ ಮೊದಲಾದ ಗ್ರಾಮಸ್ಥರ ರೈತರು ಪ್ರತಿ ಎಕರೆಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. 

Tap to resize

Latest Videos

undefined

ಯಾದಗಿರಿ ಜಿಲ್ಲೆಯ ರೈತರಿಗೆ ಮಹಾ ಮೋಸ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಕೇಂದ್ರ ಸರಕಾರವು, ಯಾದಗಿರಿ ಜಿಲ್ಲೆಯಲ್ಲಿ ಭಾರತಮಾಲಾ ಪರಿಯೋಜನೆಯ ಅಡಿಯಲ್ಲಿ ಸೂರತ್ -ಚೆನೈ ಎಕಾನಾಮಿಕ್ ಕಾರಿಡಾರ್ ಭಾಗವಾಗಿ, ಹೊಸದಾಗಿ ರಾಷ್ಟ್ರೀಯ ಹೆದ್ದಾರಿ 150 ಸಿ ನಿರ್ಮಾಣಕ್ಕೆ ಮುಂದಾಗಿದೆ. ಈ ಹೆದ್ದಾರಿಯು ಶಹಾಪುರ ಹಾಗೂ ವಡಗೇರಾ ಮಾರ್ಗದ ಮೂಲಕ ಹಾದು ಹೋಗುತ್ತದೆ. ಈಗಾಗಲೇ ವಿಶೇಷ ಭೂಸ್ವಾಧೀನಾಧಿಕಾರಿ ಗಳ ಮೂಲಕ 516 ಹೆಕ್ಟೇರ್ ಪ್ರದೇಶ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸುಮಾರು 21 ಗ್ರಾಮದ ವ್ಯಾಪ್ತಿಯ ರೈತರು ಭೂಮಿಯನ್ನು ಕಳೆದುಕೊಂಡಿದ್ದಾರೆ. 718 ರೈತರು ಭೂಮಿ ಕಳೆದುಕೊಂಡಿದ್ದಾರೆ. ಆದರೆ, ಕೆಲ ರೈತರು ಹಣದ ಅವಶ್ಯ ಕಾರಣ, ಪರಿಹಾರದ ಹಣ ಪಡೆದಿದ್ದು, 150 ಕೋಟಿ ರೂಪಾಯಿ ಸರಕಾರ ಪರಿಹಾರದ ಹಣ ನೀಡಿದೆ. ಆದರೆ, ವಡಗೇರಾ ತಾಲೂಕಿನ ರೈತರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿ ಮಾಡಿದ ಕಡಿಮೆ ಬೆಲೆಗೆ ಭೂಮಿ ನೀಡುವುದಿಲ್ಲ, ಪ್ರತಿ ಎಕರೆಗೆ 50 ಲಕ್ಷ ರೂಪಾಯಿ ಪರಿಹಾರದ ಹಣ ನೀಡಿದರೆ ಭೂಮಿ ನೀಡುತ್ತೆವೆ ಇಲ್ಲದಿದ್ದರೆ ಜೀವ ಹೋದರು ಭೂಮಿ ನೀಡುವದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದಾರೆ. 

PSI RECRUITMENT SCAM: ಯಾದಗಿರಿ ಪೊಲೀಸ್‌ ಕ್ವಾಟ್ರಸ್‌ನಲ್ಲೇ ಬ್ಲೂಟೂತ್‌ ಟ್ರೇನಿಂಗ್‌..!

ನೀರಾವರಿ ಭೂಮಿಯನ್ನು ಖುಷ್ಠಿ ಭೂಮಿ ಎಂದು ನಮೂದಿಸಿ ಪಂಗನಾಮ

ಅದೇ ರೀತಿ ನೀರಾವರಿ ಭೂಮಿಗೆ ಖುಷ್ಠಿ ಭೂಮಿಯೆಂದು ನಮುದು ಮಾಡಿ ಕಡಿಮೆ ಪರಿಹಾರದ ಹಣ ನಿಗದಿ ಮಾಡಲಾಗಿದೆ. ಪ್ರತಿ ಎಕರೆಗೆ 6 ರಿಂದ 18 ಲಕ್ಷ ರೂಪಾಯಿ ವರಗೆ ನಿಗದಿ ಮಾಡಲಾಗಿದೆ. ನೀರಾವರಿ ಭೂಮಿ ಇದ್ದರು ಖುಷ್ಠಿ ಭೂಮಿಯೆಂದು ಪ್ರತಿ ಎಕರೆಗೆ 6 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ನೀರಾವರಿ ಭೂಮಿಗೆ ಖುಷ್ಠಿ ಭೂಮಿ ನಮುದು ಮಾಡಿ ಸರಕಾರ ರೈತರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದೆ. ಈ ಬಗ್ಗೆ ಭೂಮಿ ಕಳೆದುಕೊಂಡ ವಡಗೇರಾ ಗ್ರಾಮದ ರೈತರು ಮಾತನಾಡಿ, ನಾವು ಮಣ್ಣಿನ ಮಕ್ಕಳು ಜಮೀನು ಇದ್ದರೆ ನಾವು ಬದುಕು ಮಾಡುತ್ತೆವೆ. ಭೂಮಿ ಕಳೆದುಕೊಂಡರೆ ನಾವು ಹೇಗೆ ಬದುಕಬೇಕು ಎಂದು ಎಂದು ಪ್ರಶ್ನಿಸಿದರು. ನೀರಾವರಿ ಭೂಮಿ ಇದ್ದರು ನಮ್ಮ ಭೂಮಿಯು ಖುಷ್ಠಿ ಭೂಮಿಯೆಂದು ಮಾಡಿ ಪ್ರತಿ ಎಕರೆಗೆ 6 ಲಕ್ಷ ರೂಪಾಯಿ ಭೂಮಿ ಬೆಲೆ ನಿಗದಿ ಮಾಡಿ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ನೀರಾವರಿ ಭೂಮಿ ಇದ್ದರು ಮೋಸ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 50 ಲಕ್ಷ ರೂ ಪರಿಹಾರ ನೀಡಬೇಕು, ಒಂದು ವೇಳೆ ಹೆಚ್ಚಿನ ಪರಿಹಾರ ನೀಡದಿದ್ದರೆ  ಆತ್ಮಹತ್ಯೆ ಮಾಡಿಕೊಳ್ಳುತ್ತೆವೆಂದು ಎಚ್ಚರಿಕೆ ನೀಡಿದ್ದಾರೆ.

ಭೂಮಿ ಕಳೆದುಕೊಂಡ್ರು, ಸರಿಯಾಗಿ ಸಿಗದ ಪರಿಹಾರ

ಭೂಮಿ ರೈತರ ಜೀವನಾಡಿ, ಅವರ ಜೀವನವೇ ಆ ಭೂಮಿಯ ಮೇಲೆ ನಿಂತಿದೆ. ಅದನ್ನೆ ಸ್ವಾಧಿನಪಡಿಸಿಕೊಂಡಿರುವ ಸರ್ಕಾರ ಪರಿಹಾರ ನೀಡುವಲ್ಲಿ ಮೋಸ ಮಾಡಿದರೆ ನಾವು ಬದುಕುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಈ ಬಗ್ಗೆ ಸರಕಾರ ಹೆಚ್ಚಿನ ಪರಿಹಾರ ನೀಡುವ ಜೊತೆ ನೀರಾವರಿ ಭೂಮಿಗೆ ಖುಷ್ಠಿ ಭೂಮಿಯೆಂದು ತೆಗೆದು ನೀರಾವರಿ ಭೂಮಿಯೆಂದು ಪರಿಗಣನೆ ಮಾಡಿ ಹೆಚ್ಚಿನ ಪರಿಹಾರ ನೀಡಿ ರೈತರ ಹೀತ ಕಾಪಾಡಬೇಕಿದೆ.
 

click me!