ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಹೊನ್ನಾವರದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿವರ್ಷವೂ ಜನಜೀವನ ನೆರೆಗೆ ಸಿಲುಕುತ್ತಿದೆ. ಈ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಹೊನ್ನಾವರ (ಜು.27) : ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಪಂ ವ್ಯಾಪ್ತಿಯ ನೆರೆ ಬಾದಿತವಾಗುವ ಪ್ರದೇಶಗಳಾದ ಶಶಿಹಿತ್ಲ, ದೊಡ್ಡಹಿತ್ಲ, ಗೊಳಿಬೈಲು, ಭಾಸ್ಕೇರಿ, ಗಜನಕೇರಿ, ಮಡಿವಾಳಕೇರಿ, ಹೆಬ್ಬಾರ್ತಕೇರಿಯ 114 ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಅಲ್ಲಿನ ನಿವಾಸಿಗಳು ಮನವಿ ಮೂಲಕ ಆಗ್ರಹಿಸಿದರು. ಹೊಸಾಕುಳಿ ಗ್ರಾಪಂಕ್ಕೆ ಮಂಗಳವಾರ ಆಗಮಿಸಿದ ನಿವಾಸಿಗಳು ಗ್ರಾಪಂ ಸದಸ್ಯ ಎಚ್.ಆರ್.ಗಣೇಶ ನೇತೃತ್ವದಲ್ಲಿ ಗ್ರಾಮಲೆಕ್ಕಾಧಿಕಾರಿ ವಿನಯ ಪಂಡಿತ್ ಮೂಲಕ ತಹಸೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕಳೆದ 20 ವರ್ಷಗಳಿಂದಲೂ ನಿರಂತರವಾಗಿ ಭಾಸ್ಕೇರಿ ಹೊಳೆ(Bhaskeri river)ಯಿಂದ ನೆರೆ ಸಂಕಷ್ಟಅನುಭವಿಸುತ್ತಿದ್ದಾರೆ. ಮಳೆಗಾಲ(Monsoon)ದಲ್ಲಿ ಪ್ರವಾಹದಿಂದ ಜನರು ಹಾಗೂ ಜಾನುವಾರು ಸಂಕಷ್ಟಅನುಭವಿಸುವ ಜತೆ ಬೆಳೆ ಹಾನಿಯು ಸಂಭವಿಸುತ್ತಿದೆ. ಪ್ರತಿ ಬಾರಿಯೂ ಸರ್ಕಾರ ನೆರೆ ಬಂದಾಗ ಕಾಳಜಿ ಕೇಂದ್ರ ಹಾಗೂ ಒಂದಿಷ್ಟುಪರಿಹಾರ ನೀಡುವ ಬದಲು ಶಾಶ್ವತವಾಗಿ ಗ್ರಾಮದ 169ಅ/1 ಸರ್ಕಾರಿ ಖರಾಬು 54-07 ಜಾಗವಿದ್ದು, ಇದರಲ್ಲಿ 10 ಎಕರೆಯಷ್ಟುಜಾಗ ಫಾರೆಸ್ಟಖಾತೆಯಿಂದ ರೆವಿನ್ಯೂ ಖಾತೆಗೆ ಬಂದಿದೆ. ನೆರೆ ಬಾದಿತ ಪ್ರದೇಶದ 114 ಕುಟುಂಬಗಳಿಗೆ ತಲಾ 2 ಗುಂಟೆಯಂತೆ ಈ ಸ್ಥಳವನ್ನು ಮಂಜೂರು ಮಾಡಿ ಸರ್ಕಾರದ ಮನೆ ನಿರ್ಮಾಣ ಮಾಡಿದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. 114 ಕುಟುಂಬದಲ್ಲಿ 462 ಜನಸಂಖ್ಯೆ ಇದ್ದು, ಇವರೆಲ್ಲರಿಗೂ ಮಳೆಗಾಲದ ನೆರೆ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಶಾಸಕರು, ಸಚಿವರು ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
undefined
ಕದ್ರಾ ನೆರೆ ಭೀತಿ: ಆತಂಕದಲ್ಲಿ ಜನರು
ಗ್ರಾಮಸ್ಥ ಚಿದಂಬರ ನಾಯ್ಕ, ದಶಕಗಳಿಂದಲೂ ಈ ಸಮಸ್ಯೆ ಅನುಭವಿಸುತ್ತಿದ್ದೇವೆ. 15 ದಿನದ ಹಿಂದೆ ನಾವೆಲ್ಲರು ಕಾಳಜಿ ಕೇಂದ್ರದಲ್ಲಿ ಇದ್ದಾಗ ಸ್ಥಳಕ್ಕೆ ಆಗಮಿಸಿದ ಶಾಸಕ ದಿನಕರ ಶೆಟ್ಟಿಹಾಗೂ ಜಿಲ್ಲಾಧಿಕಾರಿಗಳ ಬಳಿ ವಿಷಯ ತಿಳಿಸಿದಾಗ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಇಂದು ಮನವಿ ನೀಡುವ ಮೂಲಕ ಸ್ಥಳದ ಮಾಹಿತಿ ಹಾಗೂ ಕುಟುಂಬದ ಮಾಹಿತಿ ತಿಳಿಸಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮೂರಿನ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿ ಎಂದು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷೆ ಸುರೇಖಾ ನಾಯ್ಕ, ಉಪಾಧ್ಯಕ್ಷ ಕಿರಣ ಹೆಗಡೆ, ಸದಸ್ಯೆ ಮಾದೇವಿ ಮುಕ್ರಿ, ಕಮಲಾ ಮುಕ್ರಿ, ಪಿಡಿಓ ಬಾಲಕೃಷ್ಣ ನಾಯ್ಕ, ನೂರಾರು ಸಂಖ್ಯೆಯ ಸಾರ್ವಜನಿಕರು ಹಾಜರಿದ್ದರು.
Uttara Kannada; ಆರ್.ವಿ. ದೇಶ್‌ಪಾಂಡೆ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ
ಗ್ರಾಮಸ್ಥರ ಹಕ್ಕೊತ್ತಾಯದಂತೆ ಗ್ರಾಪಂ ಪ್ರತಿನಿಧಿಗಳು ಅವರೊಂದಿಗೆ ಧ್ವನಿಯಾಗಿದ್ದು, 8 ಮಜರೆಯ 114 ಕುಟುಂಬಗಳಿಗೆ ನೆರೆ ಸಮಸ್ಯೆಇದ್ದು,ಅವರನ್ನು ಗ್ರಾಮದ ರೆವಿನ್ಯೂ ಜಾಗಕ್ಕೆ ಸ್ಥಳಾಂತರ ಮಾಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು. ಸ್ಥಳೀಯ ಶಾಸಕರು ಹಾಗೂ ಸಚಿವರು ಮತ್ತು ಅಧಿಕಾರಿಗಳು ನಮ್ಮೂರಿನ ಸಮಸ್ಯೆಯನ್ನು ಖುದ್ದು ಆಲಿಸಿರುವುದರಿಂದ ಈ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.