ಮಳೆಯಿಂದ ಬೆಳೆಗೆ ಕುತ್ತು, ರೈತರಿಗೆ ಆಪತ್ತು..!

By Kannadaprabha News  |  First Published Oct 7, 2022, 8:30 PM IST

ರಾಶಿ ಮಾಡುತ್ತಿರುವ ರೈತರ ಪರದಾಟ, ಈರುಳ್ಳಿ, ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ ಸೇರಿದಂತೆ ನಾನಾ ಬೆಳೆ ಕಟಾವಿಗೆ ಸಂಕಷ್ಟ


ಕೊಪ್ಪಳ(ಅ.07):  ಜಿಲ್ಲಾದ್ಯಂತ ಮತ್ತೆ ಮಳೆ ಸುರಿಯುತ್ತಿರುವುದರಿಂದ ರೈತ ಸಮುದಾಯ ತತ್ತರಿಸಿದೆ. ಕಟಾವಿಗೆ ಬಂದಿರುವ ಬೆಳೆ ನೀರುಪಾಲಾಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಕಾಲಕ್ಕೆ ಆಗದಿರುವ ಮಳೆ ಸುರಿದಾಗಲೊಮ್ಮೆ ಧಾರಾಕಾರವಾಗಿ ಬೀಳುತ್ತಿರುವುದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ ಎಂದು ರೈತರು ಗೋಳಿಡುತ್ತಿದ್ದಾರೆ. ಕುಕನೂರು ತಾಲೂಕಿನ ಎಪಿಎಂಸಿ ಯಾರ್ಡ್‌ನಲ್ಲಿ ಒಣಗಲು ಹಾಕಿದ್ದ ನೂರಾರು ಚೀಲ ಮೆಕ್ಕೆಜೋಳ ತೇಲಿಕೊಂಡು ಹೋಗಿದೆ. ಇದರಿಂದ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಗುರುವಾರ ಬೆಳಗ್ಗೆ ಪ್ರಾರಂಭವಾದ ಸಾಧಾರವಾಗಿ ಶುರುವಾದ ಮಳೆಯು ಆಗಾಗ ಸುರಿಯುತ್ತಲೇ ಇತ್ತು. ಮಧ್ಯಾಹ್ನದ ನಂತರ ಧಾರಾಕಾರವಾಗಿ ಮಳೆ ಬಂದಿದೆ. ಆಕಾಶಕ್ಕೆ ತೂತು ಬಿದ್ದಿದೆ ಎಂಬಂತೆ ವರುಣ ಅಬ್ಬರಿಸಿದ. ಎಡೆಬಿಡದೆ ಸುರಿದ ಕಟಾವಿಗೆ ಬಂದಿರುವ ಮೆಕ್ಕೆಜೋಳ, ಈರುಳ್ಳಿ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಬಹುತೇಕ ಬೆಳೆಗಳು ನಾಶವಾಗುತ್ತಿವೆ. ರಾಶಿ ಮಾಡುವುದಕ್ಕೂ ಬಿಡುವಿಲ್ಲದಂತೆ ಮಳೆ ಸುರಿಯುತ್ತಿದೆ. ಕೊಪ್ಪಳ ತಾಲೂಕಿನಾದ್ಯಂತ ವಿಪರೀತ ಮಳೆ ಸುರಿದಿದ್ದು, ರೈತರು ಪರಿತಪಿಸುತ್ತಿದ್ದಾರೆ. ದಾರಿಯುದ್ದಕ್ಕೂ ರಾಶಿ ಮಾಡಲು ಹಾಕಿದ್ದ ಮೆಕ್ಕೆಜೋಳ ಬಹುತೇಕ ನೀರುಪಾಲಾಗುತ್ತಿದ್ದು, ರೈತರು ಅವುಗಳನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ.

Tap to resize

Latest Videos

undefined

ಮಳೆಗೆ ಶಿಥಿಲಗೊಂಡಿದ್ದ ಮನೆ ಕುಸಿದು ವೃದ್ಧೆ ಸಾವು

ಈರುಳ್ಳಿ ನೀರುಪಾಲು:

ಜಿಲ್ಲೆಯಲ್ಲಿ ಈಗಾಗಲೇ ದರ ಇಲ್ಲದಿರುವುದರಿಂದ ನೂರಾರು ಎಕರೆ ಪ್ರದೇಶದಲ್ಲಿನ ಈರುಳ್ಳಿ ಹರಗಲಾಗಿದೆ. ಈಗ ವಿಪರೀತ ಸುರಿಯುತ್ತಿರುವ ಮಳೆಯಿಂದ ಉಳಿದಿದ್ದ ನೂರಾರು ಎಕರೆ ಪ್ರದೇಶದ ಈರುಳ್ಳಿಯೂ ನಾಶವಾಗುತ್ತಿದೆ. ಕಟಾವಿಗೆ ಬಂದಿದ್ದ ಈರುಳ್ಳಿ ಕೊಳೆಯಲಾರಂಭಿಸಿದೆ.

ಹಂದಿ ಹಾವಳಿಯಿಂದ ಬೆಳೆನಾಶ; ಹಂದಿಗಳನ್ನು ನಿಯಂತ್ರಿಸಿ, ಇಲ್ಲ ವಿಷ ಕೊಡಿ ಎಂದು ರೈತರ ಆಕ್ರೋಶ

ಅಲ್ಲಲ್ಲಿ ನುಗ್ಗಿದ ನೀರು:

ಕೊಪ್ಪಳದ ಗಣೇಶ ತಗ್ಗು ಏರಿಯಾದಲ್ಲಿ ನೀರು ಅಲ್ಲಲ್ಲಿ ಮನೆಗಳಿಗೆ ನುಗ್ಗಿದೆ. ಕೆಲವೆಡೆ ದಾರಿಯನ್ನೇ ಬಂದ್‌ ಮಾಡಿದೆ. ಗಂಗಾವತಿ ತಾಲೂಕಿನಲ್ಲಿ ಭತ್ತದ ಬೆಳೆಗೂ ಹಾನಿ ಮಾಡಿದ್ದರೆ ಮಳೆಯಾಶ್ರಿತ ಪ್ರದೇಶದ ಏರಿಯಾದಲ್ಲಿಯೂ ನಷ್ಟ ಉಂಟಾಗಿದೆ.

ಜನಜೀವನ ಅಸ್ತವ್ಯಸ್ತ:

ಮಳೆಗೆ ಕೊಪ್ಪಳದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದರೆ ಬಹುತೇಕ ರಸ್ತೆಯಲ್ಲಿ ನೀರು ನಿಂತುಕೊಂಡಿದೆ. ಇತ್ತೀಚೆಗಷ್ಟೇ ಸುರಿದ ಮಳೆಯಿಂದ ಜಿಲ್ಲೆಯ ಅಲ್ಲಲ್ಲಿ ಮನೆಗಳು ಬಿದ್ದಿರುವ ಬೆನ್ನಲ್ಲೇ ಮತ್ತೆ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಮಣ್ಣಿನ ಮನೆಯಲ್ಲಿ ವಾಸಿಸುವವರು ಆತಂಕಗೊಂಡಿದ್ದಾರೆ.
 

click me!