ಸರ್ಕಾರದ ಹಣ ಪೋಲು ಮಾಡ್ತಿರೋದಕ್ಕೆ ಸಾರ್ವಜನಿಕರ ಆಕ್ರೋಶ, ಹಾಸ್ಟೆಲ್ ಕಟ್ಟಡಕ್ಕೆ ರಸ್ತೆಯೇ ಇಲ್ಲ!

By Gowthami KFirst Published Oct 7, 2022, 8:13 PM IST
Highlights

 ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸ್ಥಳದಲ್ಲಿ ಕಳೆದ 4 ವರ್ಷದ ಹಿಂದೆ ಪಟ್ಟಣದ ಕೆಆರ್ಐಡಿಎಲ್ ಸಂಸ್ಥೆ ಅಧಿಕಾರಿಗಳು ಅಂದಾಜು 2 ಕೋಟಿ ವೆಚ್ಚದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದಾರೆ. ಕಟ್ಟಡ ನಿರ್ಮಿಸಿ ಮೂರು ವರ್ಷ ಕಳೆದಿದೆ.

ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್  ಸುವರ್ಣ  ನ್ಯೂಸ್ 

ಚಾಮರಾಜನಗರ (ಅ. 7): ಮಕ್ಕಳಿಗೆ ಹಾಸ್ಟೆಲ್ ಗೆಂದು ಸುಮಾರು 2 ಕೋಟಿ ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಾಣವಾಗಿ ಮೂರು ವರ್ಷ ಕಳೆದರೂ ಕೂಡ ಇಲ್ಲಿಯವರೆಗೂ ಲೋಕಾರ್ಪಣೆಗೊಂಡಿಲ್ಲ. ಹಾಸ್ಟೆಲ್ ಗೆ ರಸ್ತೆಯಿಲ್ಲ ಅಂತಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಟ್ಟಡ ವಶಕ್ಕೆ ಪಡೆಯುತ್ತಿಲ್ಲ. ಹಾಗಾದ್ರೆ ರಸ್ತೆ ವ್ಯವಸ್ಥೆ ಇಲ್ಲದೇ ಹಾಸ್ಟೆಲ್ ನಿರ್ಮಾಣ ಮಾಡಿದ್ಯಾಕೆ? ಸರ್ಕಾರದ ಹಣ ಪೋಲು ಮಾಡ್ತಿರೋದ್ಯಾಕೆ ಅಂತಾ ಆಕ್ರೋಶ ವ್ಯಕ್ತವಾಗಿದೆ.  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸ್ಥಳದಲ್ಲಿ ಕಳೆದ 4 ವರ್ಷದ ಹಿಂದೆ ಪಟ್ಟಣದ ಕೆಆರ್ಐಡಿಎಲ್ ಸಂಸ್ಥೆ ಅಧಿಕಾರಿಗಳು ಅಂದಾಜು 2 ಕೋಟಿ ವೆಚ್ಚದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದಾರೆ. ಕಟ್ಟಡ ನಿರ್ಮಿಸಿ ಮೂರು ವರ್ಷ ಕಳೆದಿದೆ. ಮೂರು ವರ್ಷದಿಂದಲೂ ಕಟ್ಟಡ ಮಾತ್ರ ಲೋಕಾರ್ಪಣೆಗೊಂಡಿಲ್ಲ. ಕಟ್ಟಡ ನಿರ್ಮಾಣ ವೇಳೆ ಈ ಪ್ರದೇಶದಲ್ಲಿ ಖಾಲಿ ನಿವೇಶನಗಳಿತ್ತು. ಆ ವೇಳೆ ಕೆಆರ್ಐಡಿಎಲ್ ಅಧಿಕಾರಿಗಳು ಕಟ್ಟಡ ಸಾಮಾಗ್ರಿಗಳನ್ನು ಸಾಗಣೆ ಮಾಡಿ ಸುಸಜ್ಜಿತ ಕಟ್ಟಡ ಕಟ್ಟಿದ್ದಾರೆ. ಆದ್ರೆ ಇದೀಗ ವಿಧ್ಯಾರ್ಥಿಗಳು ಆ ಕಟ್ಟಡಕ್ಕೆ ತೆರಳಲು ರಸ್ತೆ ಸಮಸ್ಯೆ ಉದ್ಬವಾಗಿದೆ. ಕಟ್ಟಡಕ್ಕೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆಯಿಲ್ಲ. ರಸ್ತೆ ವ್ಯವಸ್ಥೆ ಒದಗಿಸಿದ್ರೆ ಸಮಾಜ ಕಲ್ಯಾಣ ಇಲಾಖೆ ಸುಪರ್ದಿಗೆ ಪಡೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

Latest Videos

ಆದ್ರೆ ಕೆಆರ್ಐಡಿಎಲ್ ಅಧಿಕಾರಿಗಳು ಕಟ್ಟಡ ನಿರ್ಮಿಸಿಕೊಡುವುದಷ್ಟೇ ನಮ್ಮ ಜವಾಬ್ದಾರಿ, ರಸ್ತೆ ನಮಗೆ ಬರಲ್ಲ ಅಂತಾರೆ.ಕಳೆದ ಮೂರು ವರ್ಷದಿಂದಲೂ ಕೂಡ ನಾವು ಹಸ್ತಾಂತರ ಮಾಡಲೂ ಸಿದ್ದರಿದ್ದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಟ್ಟಡ ವಶಕ್ಕೆ ಪಡೆಯುತ್ತಿಲ್ಲ ಅಂತಾರೆ ಕೆಆರ್ಐಡಿಎಲ್ ಇಂಜಿನಿಯರ್.

ಇನ್ನೂ ಹೇಳಿ ಕೇಳಿ ಚಾಮರಾಜನಗರ ಜಿಲ್ಲೆ ಮೊದಲೆ ಹಿಂದುಳಿದ ಹಣೆ ಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆ ಈ ಜಿಲ್ಲೆ ಸಾಕ್ಷರತೆಯಲ್ಲು ಹಿಂದುಳಿದಿದ್ದು ಗ್ರಾಮೀಣ ಪ್ರದೇಶದಿಂದ ಬರುವ ವಿಧ್ಯಾರ್ಥಿಗಳೆ ಹೆಚ್ಚು ಈ ಜಿಲ್ಲೆಯ ಜನರು ವಿದ್ಯಾಭ್ಯಾಸಕ್ಕಾಗಿ ನೂರಾರು ಕಿ.ಮೀ. ಹೊರ ಜಿಲ್ಲೆಗೆ ತೆರಳಿರುವ ಉದಾಹರಣೆಗಳು ಉಂಟು ಹೀಗಿರುವಾಗ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸದೆ  ಈ ಎರಡು ಇಲಾಖೆಗಳು ಜಟಾಪಟಿಗೆ ಮುಂದಾಗಿದ್ದು  ಲಾಸ್ ಆಗ್ತಿರೋದು ಮಾತ್ರ ವಿದ್ಯಾರ್ಥಿನಿಯರಿಗೆ ಮತ್ತು  ಸಾರ್ವಜನಿಕರಿಗೆ.  ಕೋಟಿ ವೆಚ್ಚ ಮಾಡಿ ಇಂತಾ ಸುಸಜ್ಜಿತ ವಿಧ್ಯಾರ್ಥಿ ನಿಲಯವನ್ನು ಬಾಲಕಿಯರಿಗೆ ನಿರ್ಮಿಸಿದ್ದು ಆದ್ರೆ ಲೋಕಾರ್ಪಣೆ ಮಾಡದೆ  ಸರ್ಕಾರದ ಹಣವನ್ನು ಎರಡು ಇಲಾಖೆಗಳು ನಷ್ಟ ಮಾಡ್ತಿವೆ ಅಂತಾ ಆಕ್ರೋಶ ವ್ಯಕ್ತಪಡಿಸ್ತಾರೆ.

ರಾಜ್ಯಾದ್ಯಂತ 200 ಕೋಟಿ ವೆಚ್ಚದಲ್ಲಿ 117 ಪೊಲೀಸ್ ಠಾಣೆ: ಆರಗ ಜ್ಞಾನೇಂದ್ರ

ರಸ್ತೆಗೆ ಜಾಗ ಇದೆಯೋ ಇಲ್ಲವೋ ತಿಳಿಯದೆ ಕಟ್ಟಡ ನಿರ್ಮಾಣ ಮಾಡಿದ್ದು ಎಷ್ಟು ಸರಿ,  ರಸ್ತೆ ಸೌಲಭ್ಯ ಇಲ್ಲದ ಮೇಲೆ ಕಟ್ಟಡ ಕಟ್ಟಿದ್ಯಾಕೆ, ಮೂರು ವರ್ಷವಾದರೂ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಏಕೆ ಮುಂದಾಗ್ತಿಲ್ಲ ಒಂದು ವೇಳೆ ರಸ್ತೆಗೆ ಜಾಗ ಇಲ್ಲದಿದ್ದರೆ ಖಾಸಗಿ ಜಾಗ ಪಡೆದು ರಸ್ತೆ ನಿರ್ಮಿಸಿ ಹಾಸ್ಟೆಲ್ ಪ್ರಾರಂಭಿಸಲಿ  ಅಂತಾ ಸಾರ್ವಜನಿಕರು  ಪ್ರಶ್ನೆ ಮಾಡ್ತಾರೆ.

Bengaluru: ಮಲ್ಲೇಶ್ವರ ಮಾರುಕಟ್ಟೆ ಕಟ್ಟಡ ಕೆಲಸ ಮತ್ತಷ್ಟು ತಡ

ಒಟ್ಟಾರೆ  ವಿಧ್ಯಾರ್ಥಿಗಳಿಗಾಗಿ ನಿರ್ಮಾಣವಾದ ಸುಸಜ್ಜಿತ ಕಟ್ಟಡ ಅನಾಥವಾಗಿ ಬಿದ್ದಿದ್ದು  ಕಟ್ಟಡಕ್ಕೆ ರಸ್ತೆ ಇಲ್ಲದೇ ಎರಡು ಇಲಾಖೆಗಳ ಜಟಾಪಟಿಗೆ ಬಲಿಯಾಗ್ತಿರೋದು ವಿಪರ್ಯಾಸ. ಇನ್ನಾದ್ರೂ ಅಧಿಕಾರಿಗಳು ಇತ್ತ ಗಮನಹರಿಸಿ ಹಾಸ್ಟೆಲ್ ಲೋಕಾರ್ಪಣೆಗೆ ಮುಂದಾಗಿ ವಿಧ್ಯಾರ್ಥಿಗಳಿಗೆ ಅನೂಕೂಲ ಮಾಡಿಕೊಡ್ತಾರ ಅನ್ನೋದ್ನ ಕಾದುನೋಡಬೇಕಾಗಿದೆ.

click me!