ಗಂಗಾವತಿ: ಕಡೇಬಾಗಿಲು ಬಳಿ ಎರಡು ಚಿರತೆಗಳು ಪ್ರತ್ಯಕ್ಷ

By Kannadaprabha NewsFirst Published Oct 7, 2022, 8:00 PM IST
Highlights

ಕಡೇಬಾಗಿಲು ಗ್ರಾಮಸ್ಥರು ಮತ್ತು ಹೊಸಪೇಟೆ, ಆನೆಗೊಂದಿಗೆ ರಸ್ತೆ ಮಾರ್ಗ ಹೋಗುತ್ತಿದ್ದ ಜನರು ಬೆಟ್ಟದ ಮೇಲೆ ಇರುವ ಎರಡು ಚಿರತೆಗಳ ಚಲವಲನ ಬಗ್ಗೆ ಮೊಬೈಲ್‌ ಮೂಲಕ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. 

ಗಂಗಾವತಿ(ಅ.07): ತಾಲೂಕಿನ ಕಡೇಬಾಗಿಲು ಬಳಿ ಇರುವ ಗುಡ್ಡದ ಅಂಚಿನಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದು, ರೈತರು ಭಯಭೀತರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಡೇಬಾಗಿಲು ಬಳಿಯ ಹುಲಿಗೆಮ್ಮ ದೇವಸ್ಥಾನದ ಸನಿಹದಲ್ಲಿರುವ ಗುಡ್ಡದ ಮೇಲೆ ಎರಡು ಚಿರತೆಗಳು ಕಾಣಿಸಿಕೊಂಡಿದ್ದರಿಂದ ಹೊಲ- ಗದ್ದೆಗಳಿಗೆ ತೆರಳುವ ರೈತರಿಗೆ ಭಯಭೀತಿ ಉಂಟಾಗಿದೆ.

ಕಳೆದ ವರ್ಷ ಆನೆಗೊಂದಿ ದುರ್ಗಾ ಬೆಟ್ಟಮತ್ತು ವಿರೂಪಾಪುರಗಡ್ಡೆ ಬಳಿ ಇಬ್ಬರನ್ನು ಚಿರತೆ ತಿಂದು ಹಾಕಿರುವ ಘಟನೆ ಬೆನ್ನಲ್ಲೆ ಮತ್ತೆ ಚಿರತೆಗಳು ಕಾಣಿಸಿಕೊಂಡಿದ್ದರಿಂದ ಅರಣ್ಯ ಇಲಾಖೆಯವರು ನಿರ್ಲಕ್ಷ್ಯ ವಹಿಸಿದ್ದಾರೆಂದು ಕಡೇಬಾಗಿಲು ಗ್ರಾಮಸ್ಥರು ಆರೋಪಿಸಿದ್ದಾರೆ.

Latest Videos

ಮಳೆಗೆ ಶಿಥಿಲಗೊಂಡಿದ್ದ ಮನೆ ಕುಸಿದು ವೃದ್ಧೆ ಸಾವು

ವಿಡಿಯೋದಲ್ಲಿ ಚಿರತೆಯ ಚಲನವಲನ:

ಕಡೇಬಾಗಿಲು ಗ್ರಾಮಸ್ಥರು ಮತ್ತು ಹೊಸಪೇಟೆ, ಆನೆಗೊಂದಿಗೆ ರಸ್ತೆ ಮಾರ್ಗ ಹೋಗುತ್ತಿದ್ದ ಜನರು ಬೆಟ್ಟದ ಮೇಲೆ ಇರುವ ಎರಡು ಚಿರತೆಗಳ ಚಲವಲನ ಬಗ್ಗೆ ಮೊಬೈಲ್‌ ಮೂಲಕ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಅರಣ್ಯ ಇಲಾಖೆಯವರಿಗೆ ವಿಡಿಯೋ ಕುರಿತು ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

click me!