ವಿಜಯಪುರ: ನೀರಲ್ಲಿ ಕೊಚ್ಚಿ ಹೋದ ರೈತರ ಬದುಕು, ಜಮೀನಿಗೆ ನುಗ್ಗಿದ ಕಾಲುವೆ ನೀರು, ಕಂಗಾಲಾದ ಅನ್ನದಾತ..!

By Girish GoudarFirst Published Aug 27, 2024, 4:43 PM IST
Highlights

ಕೆನಾಲ್‌ ಒಡೆದು ಜಮೀನಿಗೆ ನೀರು ಬಂದಾಗಲೇ ನೀರಾವರಿ ಅಧಿಕಾರಿಗಳ ಗಮನಕ್ಕೆ ರೈತರು ತಂದಿದ್ದಾರೆ. ಆದ್ರೆ ಅಧಿಕಾರಿಯೊಬ್ಬರು ನೀವೆ ಬೇಕಿದ್ರೆ ಕೆನಾಲ್‌ ರಿಪೇರಿ ಮಾಡಿಕೊಳ್ಳಿ ಎಂದು ಹೇಳಿದ್ದಾರಂತೆ. ಇದರಿಂದ ಬಡ ರೈತರು ಕಂಗಾಲಾಗಿದ್ದಾರೆ. 

ವಿಜಯಪುರ(ಆ.27): ಕಳೆದ ಎರಡು ವರ್ಷಗಳ ಕಾಲ ವಿಜಯಪುರ ಜಿಲ್ಲೆಯ ರೈತರು ಬರ ಎದುರಿಸಿದ್ದಾರೆ. ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣದೇವ ಮೋಸವನ್ನೆನು ಮಾಡಿಲ್ಲ. ಆದ್ರೆ ತಿಕೋಟ ತಾಲೂಕಿನ ಆ ಗ್ರಾಮದಲ್ಲಿ ರೈತರು ಇನ್ನೇನು ಫಸಲು ಬರುವ ನಿರೀಕ್ಷೆಯಲ್ಲಿದ್ರು. ಉತ್ತಮ ಮಳೆ, ಉತ್ತಮ ಬೆಳೆ ಕೈಸೇರುವ ನಿರೀಕ್ಷೆಯಲ್ಲಿದ್ದರು. ಆದ್ರೆ ಕೆನಾಲ್‌ ಒಡೆದ ಪರಿಣಾಮ ರೈತರ ಬದುಕೆ ನೀರಲ್ಲಿ ಕೊಚ್ಚೊ ಹೋದಂತಾಗಿದೆ.. ಅಷ್ಟಕ್ಕೂ ಈ ಘಟನೆ ನಡೆದಿರೋದು ಕೋಟ್ಯಾಳ ಗ್ರಾಮದಲ್ಲಿ..

ಒಡೆದ ಕಾಲುವೆ; 30ಕ್ಕೂ ಅಧಿಕ ಎಕರೆ ಜಲಾವೃತ್ತ..!

Latest Videos

ಅದ್ಯಾಕೋ ಗೊತ್ತಿಲ್ಲ, ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದ ರೈತರ ಹಣೆಬರವೇ ಸರಿ ಇದ್ದಂತಿಲ್ಲ. ಎರಡು ವರ್ಷ ಮಳೆ ಇಲ್ಲದೆ ಬರದಿಂದ ರೈತರು ತತ್ತರಿಸಿ ಹೋಗಿದ್ದರು. ಆದ್ರೆ ಈಗ ಮಳೆಯಾಗಿದ್ದು ಉತ್ತಮ ಫಸಲು ಸಹ ಬಂದಿದೆ. ಆದ್ರೆ ಕಾಲುವೆ ಒಡೆದ ಪರಿಣಾಮ ಗ್ರಾಮದ 30ಕ್ಕು ಎಕರೆಗು ಅಧಿಕ ಕೃಷಿ ಭೂಮಿಗೆ ನೀರು ನುಗ್ಗಿದ್ದು ಸಾಲ ಸೋಲ ಮಾಡಿ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ. ಕಳೆದ 20 ದಿನಗಳಿಂದ ಜಮೀನುಗಳಲ್ಲಿ ನೀರು ನಿಂತಿದ್ದ ಅಪಾರ ಪ್ರಮಾಣದ ಬೆಳೆ ಕೊಳೆಯೋದಕ್ಕೆ ಶುರು ಮಾಡಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರೀಗ ಕಣ್ಣಿರು ಹಾಕುವಂತಾಗಿದೆ..

ಸಾತ್ವಿಕ್‌ ರಕ್ಷಣಾ ಕಾರ್ಯಾಚರಣೆಯ ಬಾಡಿಗೆಯನ್ನೆ ಪಾವತಿಸದ ಇಂಡಿ ಅಧಿಕಾರಿಗಳು: ಡಿಸಿ ಭೂಬಾಲನ್ ಹೇಳಿದ್ದೇನು?

ರೈತರನ್ನ ಖ್ಯಾರೇ ಎನ್ನದ ಅಧಿಕಾರಿಗಳು..!

ಕಳೆದ 20 ದಿನಗಳ ಹಿಂದೆ ಕೋಟ್ಯಾಳ ಗ್ರಾಮದಲ್ಲಿ ಹಾಯ್ದು ಹೋಗಿರುವ ಕೆಬಿಜೆಎನ್‌ಲ್‌ ಕಾಲುವೆ ಒಡೆದು ಹೋಗಿದೆ. ಕೆರೆ ತುಂಬುವುದಕ್ಕಾಗಿ ಕೆರೆಗೆ ನೀರು ಸಹ ಹರಿಸಲಾಗ್ತಿದೆ. ದುರಾದೃಷ್ಟ ಎಂದರೆ ಕಾಲುವೆಗೆ ಬಿಟ್ಟ ನೀರು ಕೋಟ್ಯಾಳ ಗ್ರಾಮದ ಕಾಲುವೆ ಬಳಿಯ 15ಕ್ಕು ಅಧಿಕ ರೈತರ ಜಮೀನುಗಳಲ್ಲಿ ನುಗ್ಗಿ ಬೆಳೆಹಾನಿ ಉಂಟು ಮಾಡಿದೆ.. ಸತತ 20 ದಿನಗಳ ಕಾಲ ನೀರು ನಿಂತಿರುವ ಕಾರಣ ಬೆಳೆಗಳು ಈಗಾಗಲೆ ಕೊಳೆಯಲು ಶುರು ಮಾಡಿವೆ..

ಕಬ್ಬು, ತೊಗರಿ, ಮೆಕ್ಕೆಜೋಳ ಹಾನಿ; ರೈತನ ಕಣ್ಣೀರು..!

ಸುಮಾರು 30 ಎಕರೆ ಪ್ರದೇಶದಲ್ಲಿ ಬೆಳೆಯಲಾದ ಕಬ್ಬು, ತೊಗರಿ, ಮೆಕ್ಕೆಜೋಳ ಬೆಳೆಗಳು ನೀರಲ್ಲೆ ನಿಂತಿವೆ. ಇನ್ನೊಂದೆರೆಡು ವಾರ ಎಂದಿದ್ದರೆ ಬೆಳೆಗಳು ಕೈಗೆ ಬಂದು ರೈತರು ನೆಮ್ಮದಿಯಿಂದ ಇರ್ತಿದ್ರು, ಆದ್ರೆ ಈ ಕೆನಾಲ್‌ ಒಡೆದ ಪರಿಣಾಮ ಬೆಳೆಗಳು ನೀರಲ್ಲೆ ನಿಂತು ಕೊಳೆಯೋದಕ್ಕೆ ಶುರು ಮಾಡಿವೆ. ಈಗಾಗಲೇ ಮೆಕ್ಕೆಜೋಳ ಬೇರುಗಳು ಕೊಳೆತು ಹೋಗಿ ಬೆಳೆ ತಾನಾಗಿಯೆ ನೆಲ ಕಚ್ಚುತ್ತಿದೆ. ಇತ್ತ ತೊಗರಿ ಬೆಳೆ ಈಗಾಗಲೆ ಒಣಗಿ ಹೋಗಿದೆ. ಅತ್ತ ಆಳೆತ್ತರಕ್ಕೆ ಬೆಳೆದು ನಿಂತ ಕಬ್ಬು ಸಹ ಇಂದು ನಾಳೆ ಎನ್ತಿದೆ.

ನೂರಾರು ಜೀವ ಉಳಿಸಿದ್ದ ಸ್ಟಾಫ್ ನರ್ಸ್ ಆತ್ಮಹತ್ಯೆ; ಊರಿಗೆ ಊರೇ ಬಂದ್ ಮಾಡಿದ ಜನತೆ!

ಸಾಲ ಮಾಡಿ ಬೆಳೆದ ಬೆಳೆಗಳು ನೀರುಪಾಲು..!

ಕೋಟ್ಯಾಳ ಗ್ರಾಮದಲ್ಲಿ ಜಮೀನು ಜಲಾವತ್ತಗೊಂಡಿರುವ ರೈತರು ದೊಡ್ಡ ರೈತರೆನಲ್ಲ, ಬರೀ 2 ಎಕರೆ, ಮೂರ್ನಾಲ್ಕು ಎಕರೆ ಹೊಂದಿದ ಸಣ್ಣ ರೈತರು. ಕಬ್ಬು ಬೆಳೆಯಲು ಇಲ್ಲಿನ ರೈತರು ಸಾಲ ಮಾಡಿಕೊಂಡಿದ್ದಾರೆ. ಮುದುಕಪ್ಪ ಹಿಪ್ಪರಗಿ ಎನ್ನುವ ರೈತನಂತು ಮನೆಯಲ್ಲಿ ತಾಮ್ರ-ಹಿತ್ತಾಳೆಯ ಹಂಡೆಯನ್ನ ಮಾರಿ ಮೆಕ್ಕೆಜೋಳ ಬೆಳೆದಿದ್ದಾನೆ. ಇನ್ನೊಬ್ಬ ರೈತ 30 ಸಾವಿರ ಸಾಲ ಮಾಡಿ ತೊಗರಿ ಬೆಳೆದಿದ್ದಾನೆ. ಸಧ್ಯ ದಿಢೀರ್‌ ಅಂತ ಕೆನಾಲ್‌ ನೀರು ಜಮೀನಿಗೆ ನುಗ್ಗಿದ್ದು ರೈತರಿಗೆ ದಿಕ್ಕೆ ತೋಚದಂತಾಗಿದೆ.

ಕೆನಾಲ್‌ ರಿಪೇರಿ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯ..!

ಇನ್ನು ಕೆನಾಲ್‌ ಒಡೆದು ಜಮೀನಿಗೆ ನೀರು ಬಂದಾಗಲೇ ನೀರಾವರಿ ಅಧಿಕಾರಿಗಳ ಗಮನಕ್ಕೆ ರೈತರು ತಂದಿದ್ದಾರೆ. ಆದ್ರೆ ಅಧಿಕಾರಿಯೊಬ್ಬರು ನೀವೆ ಬೇಕಿದ್ರೆ ಕೆನಾಲ್‌ ರಿಪೇರಿ ಮಾಡಿಕೊಳ್ಳಿ ಎಂದು ಹೇಳಿದ್ದಾರಂತೆ. ಇದರಿಂದ ಬಡ ರೈತರು ಕಂಗಾಲಾಗಿದ್ದಾರೆ. ಕೇವಲ 2 ರಿಂದ 3ಎಕರೆ ಕೃಷಿ ಭೂಮಿ ಹೊಂದಿರುವ ರೈತರು ಇದ್ದ ಬೆಳೆಯನ್ನು ಕಳೆದುಕೊಂಡು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೆಬಿಜೆಎನ್‌ಎಲ್‌ ನ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಸಹಾಯಕ್ಕೆ ಬರಬೇಕು ಎಂದು ಗೋಗರೆಯುತ್ತಿದ್ದಾರೆ.

click me!