ಪಶ್ಚಿಮಘಟ್ಟದ ಬಫರ್ ಝೋನ್ ಬೆಟ್ಟ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ?: ಗ್ರಾಮಸ್ಥರ ಮನವಿಯಲ್ಲೇನಿದೆ!

By Govindaraj S  |  First Published Aug 26, 2024, 7:28 PM IST

ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ನಡೆದ ಭೀಕರ ಗುಡ್ಡ ಕುಸಿತದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ, ಅರಣ್ಯ ಹಾಗೂ ಸರ್ಕಾರಿ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಅಕ್ರಮವಾಗಿ ರೆಸಾರ್ಟ್ ಅಥವಾ ಹೋಂಸ್ಟೇ ನಿರ್ಮಿಸಿದ್ದರೆ ಅವುಗಳನ್ನು ಕೂಡಲೇ ತೆರವು ಮಾಡಬೇಕೆಂಬ ಕಟ್ಟುನಿಟ್ಟಿನ ಆದೇಶ ಮಾಡಿದೆ.


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.26): ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ನಡೆದ ಭೀಕರ ಗುಡ್ಡ ಕುಸಿತದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ, ಅರಣ್ಯ ಹಾಗೂ ಸರ್ಕಾರಿ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಅಕ್ರಮವಾಗಿ ರೆಸಾರ್ಟ್ ಅಥವಾ ಹೋಂಸ್ಟೇ ನಿರ್ಮಿಸಿದ್ದರೆ ಅವುಗಳನ್ನು ಕೂಡಲೇ ತೆರವು ಮಾಡಬೇಕೆಂಬ ಕಟ್ಟುನಿಟ್ಟಿನ ಆದೇಶ ಮಾಡಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಸರ್ಕಾರದ ಈ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲವೇ ಎನ್ನುವ ಅನುಮಾನ ಶುರುವಾಗಿದೆ. ಅಥವಾ ಕೊಡಗು ಜಿಲ್ಲೆಗೆ ಈ ಆದೇಶ ಅನ್ವಯ ಆಗುದಿಲ್ಲವೇ ಎನ್ನುವ ಪ್ರಶ್ನೆ ಶುರುವಾಗಿದೆ. ಸರ್ಕಾರದ ಈ ಆದೇಶವನ್ನು ಉಲ್ಲಂಘಿಸಿ ಕೇರಳದ ವಯನಾಡು ಮತ್ತು ಕರ್ನಾಟಕದ ಶಿರೂರು ಭೂಕುಸಿತದಂತಹ ಘಟನೆಗಳಿಗೆ ಕೊಡಗಿನಲ್ಲೂ ಅಡಿಪಾಯ ಹಾಕುತ್ತಿದ್ದಾರೆ.

Latest Videos

undefined

ಕೇರಳದ ಉದ್ಯಮಿಗಳು. ಹೌದು ಮಡಿಕೇರಿ ತಾಲ್ಲೂಕಿನ ಬಲ್ಲಮಾವುಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ಕೃಷಿ ಮಾಡುವುದಕ್ಕಾಗಿ ಕೇರಳದ ಉದ್ಯಮಿಗಳು 6.25 ಎಕರೆ ತೋಟವನ್ನು ಇದೇ ವರ್ಷದ ಫೆಬ್ರುವರಿಯಲ್ಲಿ ಖರೀದಿಸಿದ್ದಾರೆ. ಬೃಹತ್ ಬೆಟ್ಟದ ಮೇಲೆ ಇರುವ ಈ ತೋಟದಲ್ಲಿ ತಮ್ಮ ಖಾಸಗಿ ಆಸ್ತಿ ಜೊತೆಗೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಬೆಟ್ಟ ಪ್ರದೇಶದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸುತ್ತಿರುವ ಆರೋಪ ಕೇಳಿ ಬಂದಿದೆ. ಇದು ಪೇರೂರು ಬೆಟ್ಟದ ತಪ್ಪಲಿನಲ್ಲಿ ಇರುವ ದೊಡ್ಡಪುಲಿಕೋಟು ಗ್ರಾಮದ 250 ಕುಟುಂಬಗಳಿಗೆ ಭೂಕುಸಿತದ ಭಯ ತಂದೊಡ್ಡಿದೆ. 

ಸಾತ್ವಿಕ್‌ ರಕ್ಷಣಾ ಕಾರ್ಯಾಚರಣೆಯ ಬಾಡಿಗೆಯನ್ನೆ ಪಾವತಿಸದ ಇಂಡಿ ಅಧಿಕಾರಿಗಳು: ಡಿಸಿ ಭೂಬಾಲನ್ ಹೇಳಿದ್ದೇನು

ಹೌದು ಪೇರೂರಿನ ಈ ಬೆಟ್ಟದಲ್ಲಿ 2020 ರಲ್ಲಿ ಈಗಾಗಲೇ ಭೂಕುಸಿತವಾಗಿದೆ. ಇದೀಗ ಮತ್ತೆ ಬೆಟ್ಟದ ಮೇಲೆ ರೆಸಾರ್ಟ್ ನಿರ್ಮಾಣ ಮಾಡಿದರೆ ಈಡೀ ಬೆಟ್ಟ ಕುಸಿದು ದೊಡ್ಡಪುಲಿಕೋಟು ಊಹಿಸಲು ಸಾಧ್ಯವಾಗದ ಘೋರ ದುರಂತಕ್ಕೆ ತುತ್ತಾಗಲಿದೆ ಎಂದು ಕರವಂಡ ಅಪ್ಪಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ದೊಡ್ಡಪುಲಿಕೋಟು ಗ್ರಾಮಸ್ಥರು ಬೆಟ್ಟದ ಮೇಲೆ ನಡೆಯುತ್ತಿರುವ ರೆಸಾರ್ಟ್ ಕಾಮಗಾರಿಯನ್ನು ಕೂಡಲೇ ಸ್ಥಗಿತ ಮಾಡಿಸುವಂತೆ ಕೊಡಗು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಬರೋಬ್ಬರಿ ಐದು ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಒಂದೆಡೆಯಾದರೆ ಇನ್ನೊಂದೆಡೆ ಬೆಟ್ಟದ ಮೇಲೆ ರೆಸಾರ್ಟ್ ನಿರ್ಮಾಣಕ್ಕೆ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತನೆಯನ್ನೇ ಮಾಡಿಕೊಂಡಿಲ್ಲ. 

ಕಳೆದ 20 ದಿನಗಳ ಹಿಂದೆಯಷ್ಟೇ ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ ಭೂಪರಿವರ್ತನೆ ಮಾಡುವುದಕ್ಕೂ ಮೊದಲೇ ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಕೆಇಬಿ ಅಧಿಕಾರಿಗಳು ಟ್ರಾನ್ಸ್ ಫಾರ್ಮ್ ಪೆಟ್ಟಿಗೆ ಅಳವಡಿಸಿಕೊಟ್ಟಿದ್ದಾರೆ. ಇದೆಲ್ಲವನ್ನು ನೋಡಿದರೆ ಕೆಲವು ಇಲಾಖೆಯ ಅಧಿಕಾರಿಗಳೇ ಶಾಮೀಲಾಗಿ ಅಕ್ರಮ ರೆಸಾರ್ಟ್ ನಿರ್ಮಾಣಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎನ್ನುವ ಅನುಮಾನ ದಟ್ಟವಾಗುತ್ತದೆ. ಪೇರೂರು ಬೆಟ್ಟದಲ್ಲಿ ಕಪ್ಪೊಳೆ ಎಂಬ ಚಿಕ್ಕ ನದಿ ಹುಟ್ಟಿ ಹರಿಯುತ್ತಿದ್ದು ಈ ಬೆಟ್ಟದ ತಪ್ಪಲಿನಲ್ಲಿ ಇರುವ ದೊಡ್ಡಪುಲಿಕೋಟು ಗ್ರಾಮದ 250 ಕುಟುಂಬಗಳು ಇದೇ ನದಿಯ ನೀರನ್ನೇ ಆಶ್ರಯಿಸಿ ಬದುಕುತಿದ್ಧಾರೆ. 

ಜೀವನದಲ್ಲಿ ನೆಮ್ಮದಿಯಾಗಿರಲು ಸರಳವಾಗಿ ಬದುಕಬೇಕು: ಸಿ.ಟಿ.ರವಿ

ಈ ಬೆಟ್ಟದಲ್ಲಿ ರೆಸಾರ್ಟ್ ನಿರ್ಮಾಣವಾದರೆ ಈ ಗ್ರಾಮದ ಜನರಿಗೆ ಕುಡಿಯುವ ನೀರಿನ ಮೂಲಕ್ಕೆ ಧಕ್ಕೆ ಉಂಟಾಗಲಿದೆ. ಈ ಎಲ್ಲಾ ಕಾರಣಗಳಿಂದ ಬೆಟ್ಟದ ಮೇಲೆ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡುವುದಕ್ಕೆ ಕೂಡಲೇ ಬ್ರೇಕ್ ಹಾಕಬೇಕು ಎಂದು ಲವ ನಾಣಯ್ಯ ಒತ್ತಾಯಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ರೆಸಾರ್ಟ್ ನಿರ್ಮಿಸುತ್ತಿರುವ ಈ ಜಾಗ ಪಶ್ಚಿಮಘಟ್ಟದ ಬರ್ಫರ್ ಝೋನ್ ವ್ಯಾಪ್ತಿಯಲ್ಲಿ ಇದೆ. ಜನರ ಮನವಿ ಸ್ವೀಕರಿಸಿರುವ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ಅಲ್ಲಿನ ಪರಿಸರಕ್ಕೆ ತೀವ್ರ ತೊಂದರೆ ಆಗುತ್ತದೆ ಎಂದು ಜನರು ದೂರು ನೀಡಿದ್ದಾರೆ. ಅದನ್ನು ಕೂಡಲೇ ಪರಿಶೀಲನೆ ಮಾಡಿ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

click me!