*ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಅಭಿಮಾನಿಗಳಿಂದ ವಿಶೇಷ ಸಂಕಲ್ಪ..!
*101 ತೆಂಗಿನಕಾಯಿ ಒಡೆದ ಹರಕೆ ತೀರಿಸಿದ ಎಂಬಿಪಿ ಅಭಿಮಾನಿಗಳು.!
*ಅಮೋಘಸಿದ್ದನಿಗೆ ಬಂಡಾರ ಅರ್ಪಿಸಿ ಕಾಂಗ್ರೆಸ್ ಪಕ್ಷ 150 ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಾರ್ಥನೆ..!
ವಿಜಯಪುರ (ಏ. 04): ಮಾಜಿ ಸಚಿವ ಎಂ ಬಿ ಪಾಟೀಲ್ (M B Patil) ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿ (President) ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಎಂ ಬಿ ಪಾಟೀಲ್ ಅಧಿಕಾರ ಸ್ವೀಕಾರ ಸಮಾರಂಭ ಕೂಡ ಬೆಂಗಳೂರಲ್ಲಿ (Bengaluru) ನಡೆದಿತ್ತು. ಈಗ ಎಂ ಬಿ ಪಾಟೀಲ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಯಶಸ್ವಿಯಾಗಲೆಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಬಬಲೇಶ್ವರ ಕ್ಷೇತ್ರದ ಅಭಿಮಾನಿಗಳುಅಮೋಘಸಿದ್ದೇಶ್ವರ ದೇಗುಲದಲ್ಲಿ ವಿಶೇಷ ರೀತಿಯಲ್ಲಿ ಹರಕೆ ತೀರಿಸಿದ್ದಾರೆ
ಹರಕೆ ತೀರಿಸಿದ ಅಭಿಮಾನಿಗಳು: ವಿಜಯಪುರ ಜಿಲ್ಲೆಯ ಬಬಲೇಶ್ವರ (Babaleshwar) ಕ್ಷೇತ್ರದ ಶಾಸಕ ಮಾಜಿ ಸಚಿವ ಎಂ ಬಿ ಪಾಟೀಲ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಮೇಲೆ ಅಭಿಮಾನಿಗಳಲ್ಲಿ ಹೆಚ್ಚಿನ ಉತ್ಸಾಹ ಮೂಡಿದೆ. ಈ ನಡುವೆ ಎಂ ಬಿ ಪಾಟೀಲ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಯಶಸ್ವಿಯಾಗಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. 101 ತೆಂಗಿನಕಾಯಿ (Coconut) ಒಡೆಯುವ ಮೂಲಕ ಅಮೋಘಸಿದ್ದೇಶ್ವರನಲ್ಲಿ ಪ್ರಾರ್ಥಿಸಿದ್ದಾರೆ. ಎಂ ಬಿ ಪಾಟೀಲ್ ಹೆಸರಲ್ಲಿ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂಬಿ ಪಾಟೀಲ್ ಪದಗ್ರಹಣ!
ಎಂ ಬಿ ಪಾಟೀಲ್ ಪ್ರಚಾರ ಸಮಿತಿ ಜವಾಬ್ದಾರಿವಹಿಸಿ ಅಧಿಕಾರ ಸ್ವೀಕರಿಸಿದ ಬಳಿಕ 101 ತೆಂಗಿನಕಾಯಿ ಒಡೆಯುವುದಾಗಿ ಬಬಲೇಶ್ವರ ಕ್ಷೇತ್ರದ ಜಾಲಗೇರಿ ಗ್ರಾಮದ (Jalageri Village) ಅಭಿಮಾನಿಗಳು ಹರಕೆ ಕಟ್ಟಿದ್ದರಂತೆ. ಹೀಗಾಗಿ ಎಂ ಬಿ ಪಾಟೀಲ್ ಪ್ರಚಾರ ಸಮಿತಿ ಜವಾಬ್ದಾರಿವಹಿಸಿ ಅಧಿಕಾರ ಸ್ವೀಕರಿಸಿದ ಬಳಿಕ ಸೋಮವಾರ ಮುಮ್ಮಟಿಗುಡ್ಡದ ಅಮೋಘಸಿದ್ದೇಶ್ವರ ದೇಗುಲದಲ್ಲಿ ಅಭಿಮಾನಿಗಳು ಸೇರಿ ಹರಕೆ ತೀರಿಸಿದ್ದಾರೆ.
ಕೈಗೆ ಮತ್ತಷ್ಟು ಶಕ್ತಿ ತುಂಬಲು ಪ್ರಾರ್ಥನೆ: ಇನ್ನು ಪ್ರಚಾರ ಸಮಿತಿಯ ಜವಾಬ್ದಾರಿ ತೆಗೆದುಕೊಂಡಿರುವ ಎಂ ಬಿ ಪಾಟೀಲರರಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸಲು ಅನುಗ್ರಹಿಸುವಂತೆಯೂ ಅಭಿಮಾನಿಗಳು ದೇವರಲ್ಲಿ ಬೇಡಿಕೊಂಡಿದ್ದಾರೆ. ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ಗೀತಾಂಜಲಿ ಪಾಟೀಲ್ ಅಮೋಘಸಿದ್ದೇಶ್ವರನಿಗೆ (Amogasiddeshwar) ಬಂಡಾರ ಅರ್ಪಿಸಿ ಕಾರ್ಯಸಿದ್ಧಿಗೆ ಪ್ರಾರ್ಥಿಸಿದ್ದಾರೆ. ಇಲ್ಲಿ ಬಂಡಾರ ಅರ್ಪಿಸಿ ಪ್ರಾರ್ಥಿಸಿದಲ್ಲಿ ಒಳಿತಾಗುತ್ತೆ ಎಂಬುವ ನಂಬಿಕೆಯು ಇದೆ.
ಹೋರಾಟಕ್ಕೆ ಕಾಂಗ್ರೆಸ್ ಪಂಚಸೂತ್ರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಅಧಿಕೃತವಾಗಿ ಪದಗ್ರಹಣ ಮಾಡಿದ್ದ ಎಂ.ಬಿ.ಪಾಟೀಲ್ ಅವರು, ‘ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಅಭಿವೃದ್ಧಿ’ ಎಂಬ ಪಂಚಸೂತ್ರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು 140 ರಿಂದ 150 ಸೀಟುಗಳ ಬಲದೊಂದಿಗೆ ಅಧಿಕಾರಕ್ಕೆ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಂಬಿ ಪಾಟೀಲ್ ನನ್ನ ಆಪ್ತ.. ಇನ್ನು ಮುಂದೆ ಅವರದ್ದೇ ನಾಯಕತ್ವ
ಬಂಡಾರದ ಒಡೆಯ ಅಮೋಘಸಿದ್ದೇಶ್ವರ: ಉತ್ತರ ಕರ್ನಾಟಕ (North Karnataka) ಭಾಗದಲ್ಲೇ ಬಂಡಾರದ ಒಡೆಯ ಎನಿಸಿಕೊಂಡಿರುವ ಮುಮ್ಮಟ್ಟಿಗುಡ್ಡದ ಅಮೋಘಸಿದ್ದೇಶ್ವರ ದೇವರು ಬೇಡಿದನ್ನ ಕೊಡುವ ಜಾಗೃತ ದೈವ ಎನ್ನುವ ಖ್ಯಾತಿ ಇದೆ. ಹೀಗಾಗಿಯೇ ಇಲ್ಲಿ ಬಂಡಾರವನ್ನ ಅರ್ಪಿಸಿ ಸಂಕಲ್ಪವನ್ನ ಮಾಡಿಕೊಳ್ತಾರೆ ಭಕ್ತರು (Devotees).
ಯಾವುದೇ ಕಾರ್ಯಗಳು ಕೈಗೂಡಬೇಕಿದ್ದರೆ, ಅಂದುಕೊಂಡ ಕಾರ್ಯ ಆಗಬೇಕಿದ್ದರೇ ಅಮೋಘಸಿದ್ದೇಶ್ವರ ದೇಗುಲದಲ್ಲಿ ಹರಕೆ ಕಟ್ಟಲಾಗುತ್ತೆ. ಬಂಡಾರವನ್ನ ಸಮರ್ಪಿಸಿ ಬೇಡಿಕೊಳ್ಳಲಾಗುತ್ತೆ. ಹೀಗಾಗಿ ಮಹಾರಾಷ್ಟ್ರ (Maharashtra) ಆಂಧ್ರ (Andhra Pradesh), ಗೋವಾ (Goa), ತೆಲಂಗಾಣದ (Telangana) ಮೂಲೆ ಮೂಲೆಗಳಿಂದ ಜನರು ಇಲ್ಲಿ ದರ್ಶನಕ್ಕೆ ಬರುವುದು ಇದೆ.