ಧ್ಚನಿವರ್ಧಕ ಮಸೀದಿಯೊಳಗೆ ಮಾತ್ರ ಕೇಳುವಂತೆ ಮಾಡಿದ್ರೆ ಸೂಕ್ತ: ಸಚಿವ ಈಶ್ವರಪ್ಪ

By Suvarna News  |  First Published Apr 4, 2022, 3:24 PM IST

ಮಸೀದಿ, ದೇವಸ್ಥಾನ, ಚರ್ಚ್‌ಗಳಲ್ಲಿ ಜೋರಾಗಿ ಮೈಕ್ ಹಾಕಲಾರಂಭಿಸಿದ್ರೆ ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತೆ. ಅವರು ಮಸೀದಿಗಳಲ್ಲಿ ಜೋರಾಗಿ ಕೂಗುತ್ತಾರೆ. ಅದಕ್ಕೆ ಹನುಮಾನ್ ಚಾಲೀಸ್ ಮೈಕಿನಲ್ಲಿ ಹಾಕ್ಬೇಕು ಅಂತಾ ನಾವು ಸ್ಪರ್ಧೆ ಮಾಡಬಾರದು ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.


ಕಾರವಾರ(ಎ.4): ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಮಸೀದಿಗಳಲ್ಲಿ ಧ್ವನಿವರ್ಧಕ ಬ್ಯಾನ್ ಮಾಡುವಂತೆ ಧ್ವನಿ ಎತ್ತುತ್ತಿದ್ದಂತೆಯೇ ಶ್ರೀರಾಮ ಸೇನೆ ಕೂಡಾ ಇದಕ್ಕೆ ದನಿಗೂಡಿಸಿದೆ. ಈ ವಿಚಾರವಾಗಿ  ಅಂಕೋಲಾದ ಮಾದನಗೇರಿಯಲ್ಲಿ ಪ್ರತಿಕ್ರಯಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಇದು ಮುಸ್ಲಿಂ ಸಮಾಜವನ್ನು ಒಪ್ಪಿಸಿ ಮಾಡಬೇಕಿದೆ. ಓದುವಂತಹ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗ್ತಿದೆ ಅನ್ನೋ ವಿಷಯ ಬಹಳ ಹಿಂದಿನಿಂದಲೂ ಕೇಳಿ ಬರ್ತಿದೆ. ಮುಂಚೆಯಿಂದಲೂ ಬಂದಂತಹ‌ ಪದ್ಧತಿಯ ಮೂಲಕ ದೇವರ ಪ್ರಾರ್ಥನೆ ಮಾಡ್ತೇತ್ತೇವೆ ಎಂದು ಮುಸ್ಲಿಂ ಧರ್ಮದವರು ಹೇಳುತ್ತಿದ್ದಾರೆ. ಆದರೆ, ಇದರಿಂದ ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದಿದ್ದಾರೆ.

ಅವರು ಮಸೀದಿಗಳಲ್ಲಿ ಜೋರಾಗಿ ಕೂಗುತ್ತಾರೆ. ಅದಕ್ಕೆ ಹನುಮಾನ್ ಚಾಲೀಸ್ ಮೈಕಿನಲ್ಲಿ ಹಾಕ್ಬೇಕು ಅಂತಾ ನಾವು ಸ್ಪರ್ಧೆ ಮಾಡಬಾರದು. ಮಸೀದಿಯಲ್ಲಿ ಕೂಗೋದ್ರಿಂದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ತೊಂದರೆಯಾಗ್ತದೆ ಅನ್ನೋದು ಬಹಳ ವರ್ಷಗಳಿಂದ ಕೇಳ್ತಿದ್ದೇವೆ. ಮಸೀದಿ, ದೇವಸ್ಥಾನ, ಚರ್ಚ್‌ಗಳಲ್ಲಿ ಜೋರಾಗಿ ಮೈಕ್ ಹಾಕಲಾರಂಭಿಸಿದ್ರೆ ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತೆ. ಈ ಕಾರಣದಿಂದ ಮುಸ್ಲಿ ಸಮುದಾಯದ ಮುಖಂಡರೇ ಈ ಬಗ್ಗೆ ಚಿಂತನೆ ಮಾಡಿ ನಿರ್ಧರಿಸಬೇಕು. ದೇವಸ್ಥಾನ, ಚರ್ಚ್‌ಗಳಲ್ಲಿರೋ ಹಾಗೆ ಇತರರಿಗೆ ತೊಂದರೆಯಾಗದಂತೆ ಧ್ಚನಿವರ್ಧಕ ಮಸೀದಿಯೊಳಗೆ ಮಾತ್ರ ಕೇಳುವಂತೆ ಮಾಡಿದ್ರೆ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Tap to resize

Latest Videos

SSLC ಪರೀಕ್ಷೆ ವೇಳೆ ಜೇನುನೊಣ ದಾಳಿ, ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!

ಇದೇ ವೇಳೆ ರಾಜ್ಯದಲ್ಲಿ ಎಬ್ಬಿರುವ ಹಲಾಲ್ ಹಾಗೂ ಜಟ್ಕಾ ಮಾಂಸ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ  ಸಚಿವ ಕೆ.ಎಸ್.ಈಶ್ವರಪ್ಪ ಹಲಾಲ್ ಮುಸಲ್ಮಾನರ ಪದ್ಧತಿ, ಜಟ್ಕಾ ಹಿಂದೂಗಳ ಪದ್ಧತಿ. ಯಾರ್ಯಾರಿಗೆ ಹೇಗೇಗೆ ಬೇಕು ಆ ರೀತಿಯಲ್ಲಿ ಮಾಂಸ ತಿನ್ನಲಿ. ಇದರಲ್ಲಿ ಸಂಘರ್ಷ ಮಾಡಬೇಕೆಂದೇನಿಲ್ಲ. ಜಟ್ಕಾ ಹಾಗೂ ಹಲಾಲ್ ಮುಖಾಂತರವೇ ತಿನ್ನಬೇಕೆಂದು ಹೇಳಿದ್ರೆ ಅದು ತಪ್ಪು. ಇದೆಲ್ಲಾ ನಮ್ಮ ವಯಕ್ತಿಯ ವಿಚಾರ. ಹಲಾಲ್ ಮುಖಾಂತರ ತಿಂದ್ರೂ ಖರ್ಚಾಗುತ್ತೆ, ಜಟ್ಕಾ ಮುಖಾಂತರ ತಿಂದ್ರೂ ಖರ್ಚಾಗುತ್ತೆ. ಹಲಾಲ್, ಜಟ್ಕಾ ವಿಚಾರದಲ್ಲಿ ವ್ಯಾಪಾರದಲ್ಲಿ ಬದಲಾವಣೆ ಆಗಬಹುದು ಆದ್ರೆ, ಕುರಿಗಾಹಿಗಳಿಗೆ ಇದರಿಂದ ಯಾವುದೇ ತೊಂದರೆಯಾಗಲ್ಲ ಎಂದರು.

ಇನ್ನು ಇದೇ ವೇಳೆ ರಾಜಕೀಯ ಉದ್ದೇಶದಿಂದ ಬಿಜೆಪಿಗರು ಗಲಾಟೆ ಎಬ್ಬಿಸ್ತಿದ್ದಾರೆಂದು ಕಾಂಗ್ರೆಸಿಗರ ಆರೋಪ ಮಾಡಿರುವ  ವಿಚಾರಕ್ಕೆ ಸಂಬಂಧಿಸಿ  ಅಂಕೋಲಾದ ಮಾದನಗೇರಿಯಲ್ಲಿ ಮಾತನಾಡಿದ  ಸಚಿವ ಕೆ.ಎಸ್.ಈಶ್ವರಪ್ಪ  ಅವರು, ಸಿದ್ಧರಾಮಯ್ಯ, ಡಿಕೆಶಿ ಹಾಗೂ ಕುಮಾರಸ್ವಾಮಿಯವರಿಗೆ ಮುಸಲ್ಮಾರನ್ನು ಎದುರು ಹಾಕೊಳೋ ತಾಕತ್ತಿಲ್ಲ. ತಾಕತ್ತಿದ್ರೂ ಮುಸಲ್ಮಾ‌ನ‌ ಓಟು ಕಳೆದುಕೊಳ್ಳೋಕೆ ಇವರು ತಯಾರಿಲ್ಲ. 

ಚಿಕ್ಕಮಗಳೂರಿನಲ್ಲಿ ಚಿಲ್ಲರೆ ಹಣಕ್ಕಾಗಿ ಬಾರ್ ಕ್ಯಾಶಿಯರ್ ಕೊಲೆ

ಹಿಜಾಬ್ ಹಾಕ್ಕೊಂಡು ಹೋಗದ 6 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಹಾಕ್ಕೊಳ್ಳೋಕೆ ಪ್ರಾರಂಭಿಸಿದ್ರು. ಹಿಜಾಬ್ ಹಾಕ್ಕೋಳೋಕೆ ಬಿಜೆಪಿಯಂತೂ ಹೇಳಿಲ್ಲ. ಅವರಿಗೆ ಕಾಂಗ್ರೆಸ್, ಎಸ್‌ಡಿಪಿಐ, ಸಿಎಫ್‌ಐ ಅಥವಾ ಪಿಎಫ್‌ಐ ಯಾರೋ ಸ್ಫೂರ್ತಿ ಕೊಟ್ರು. ಮುಸ್ಲಿಂ ಲೀಡರ್ ಆಗಲು ಹೊರಟಿರುವ ಸಿದ್ಧರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಧರಿಸಲು ಯಾಕೆ ಹೇಳಿಲ್ಲ?

ಕೋರ್ಟ್ ಮಧ್ಯಂತರ ಆದೇಶವಿದ್ದಾಗ ಎಸ್‌ಡಿಪಿಐ, ಪಿಎಫ್‌ಐ, ಎಸ್‌ಎಫ್‌ಐ‌ನವರು ಪ್ರತಿಭಟನೆ ಮಾಡ್ತಾರೆ. ಕೋರ್ಟ್ ಆದೇಶದ ವಿರುದ್ಧ, ಸಂವಿಧಾನದ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ನಡೆಸಿದವರನ್ನು ಅರೆಸ್ಟ್   ಮಾಡಿ, ಕೋರ್ಟ್ ಆದೇಶ ಉಲ್ಲಂಘಿಸಿ ಹಿಜಾಬ್ ಹಾಕಿದವರ ವಿರುದ್ಧ ಕ್ರಮಕ್ಕೆ ಸಿದ್ಧರಾಮಯ್ಯ ಹೇಳ್ಬೇಕಿತ್ತು, ಆದ್ರೆ ಹೇಳಿಲ್ಲ. ಕೋರ್ಟ್ ಆದೇಶ ಉಲ್ಲಂಘಟನೆ ಮಾಡಿರುವ ಸಿದ್ಧರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಕ್ಷಮೆ ಕೇಳಬೇಕು

ಮುಸಲ್ಮಾನರಿಗೆ ತೃಪ್ತಿಪಡಿಸಲು ಅವರು ಮಾಡಿದ್ದ ಪ್ರತಿಭಟನೆ ಪರವಾಗಿ ವಿಧಾನಸೌಧದಲ್ಲಿ ಮಾತನಾಡಿದ್ರು, ಇವತ್ತು ಮುಸಲ್ಮಾನರಿಗೆ ತೊಂದರೆಯಾಗಿದ್ರೆ ಅದು ದೇಶಪ್ರೇಮಿ ಮುಸಲ್ಮಾನರಿಂದಲ್ಲ, ದೇಶದ್ರೋಹಿ ಮುಸಲ್ಮಾನರಿಂದ ರಾಷ್ಟ್ರದ್ರೋಹಿ ಮುಸಲ್ಮಾನರಿಗೆ ಬೆಂಬಲ ನೀಡ್ತಿರೋರು ಸಿದ್ಧರಾಮಯ್ಯ, ಡಿಕೆಶಿ, ಕುಮಾರಸ್ವಾಮಿ.   
ಮುಸಲ್ಮಾನರು ಕೋರ್ಟ್ ಆದೇಶಕ್ಕೆ ಬಗ್ಗಿರೋದು ಸಿದ್ಧರಾಮಯ್ಯ, ಡಿಕೆಶಿ, ಕುಮಾರಸ್ವಾಮಿಗೆ ನೋಡೋದಿಕ್ಕೆ ಆಗುತ್ತಿಲ್ಲ. ಇವರಿಗೆ ಹಿಂದೂ ಸಮಾಜದ ಒಂದು ಓಟು ಕೂಡಾ ಕಿತ್ತುಕೊಳ್ಳಲಾಗಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುವಂತೆ ಈ ತ್ರಿಮೂರ್ತಿಗಳು ಮಾಡ್ತಿದ್ದಾರೆ ಎಂದರು.

ಬುದ್ಧ, ಬಸವ, ಅಂಬೇಡ್ಕರ್ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಫೈಟ್ ವಿಚಾರಕ್ಕೆ ಸಂಬಂಧಿಸಿದ ಮಾತನಾಡಿದ ಅವರು,  ಅಲ್ಲಾಹು ಅಕ್ಬರ್ ಮರೆತ್ರು, ಡಿಕೆಶಿ ಏಸು ಕ್ರಿಸ್ತನ ಮರೆತ್ರು. ಬುದ್ಧ, ಬಸವ, ಅಂಬೇಡ್ಕರ್
ನೆಪ ಇಟ್ಕೊಂಡು ಇದೀಗ ಬಂದಿರೋದು ಉತ್ತಮ ವಿಚಾರ. ಈ ಮೂವರ ಆದರ್ಶಗಳನ್ನು ಕಾಂಗ್ರೆಸಿಗರು ಮೈಗೂಡಿಸಿಕೊಳ್ಳಲಿ. ಹಿಂದುತ್ವ ವಿರೋಧ ಮಾಡಲು ಈ ವಿಚಾರ ತರ್ತಿದ್ದೇವೆ ಅಂತಾ ಕಾಂಗ್ರೆಸಿಗರ ಯೋಚನೆ. ಆದ್ರೆ, ಬುದ್ಧ, ಬಸವ, ಅಂಬೇಡ್ಕರ್‌ಗೆ ಬಿಜೆಪಿಯವರು ಸಾಷ್ಟಾಂಗ ನಮಸ್ಕಾರ ಮಾಡ್ತಾರೆ. 

ಯಾವ ಮುಸಲ್ಮಾನರನ್ನು ಕಾಂಗ್ರೆಸಿಗರು ಕೆಪಿಸಿಸಿ ಅಧ್ಯಕ್ಷ ಮಾಡಿದ್ರು? ಮುಖ್ಯಮಂತ್ರಿ ಮಾಡಿದ್ರು.? ಮುಸಲ್ಮಾನರು ಕಾಂಗ್ರೆಸಿನಿಂದ ದೂರ ಆದಾಗ ಇಂತಹ ಅಸ್ತ್ರ ಪ್ರಯೋಗ ಮಾಡ್ತಾರೆ. ದೇಶದಲ್ಲಿ ಕಾಂಗ್ರೆಸ್ ನಿರ್ಣಾಮ ಆಗಿದ್ರೆ, ರಾಜ್ಯದಲ್ಲೂ ಕಾಂಗ್ರೆಸ್ ನಿರ್ಣಾಮವಾಗುತ್ತೆ ಎಂದರು.

23 ಮಂದಿ ಹಿಂದೂ ಯುವಕರು ಕರಾವಳಿ ಬೆಲ್ಟ್‌ನಲ್ಲಿ ಕೊಲೆಗೀಡಾದ್ರು, ಗೋಹತ್ಯೆ ನಿಲ್ಲಿಸಬೇಕು, ಗೋ ಸಾಗಾಟವಾಗಬಾರರ್ದು ಅಂದ್ಕೊಂಡಿದ್ದರಲ್ಲಿ ಅವರ ತಪ್ಪೇನು ? ಸಿದ್ಧರಾಮಯ್ಯ ಅಧಿಕಾರದ ಅವಧಿಯಲ್ಲೇ ಈ ಕೊಲೆಗಳು ನಡೆದಿವೆ.

ಹರ್ಷ ಕುಟುಂಬಕ್ಕೆ 25 ಲಕ್ಷ ರೂ‌ . ಕೊಟ್ರಿ, ಇನ್ನೊಬ್ಬ ಯುವಕನ ಸಾವಿಗೆ 2 ಲಕ್ಷ ರೂ. ಮಾತ್ರ ನೀಡಿದ್ರಿ ಅಂತಾ ಸಿದ್ಧರಾಮಯ್ಯ ದೂರಿದರು. 23 ಹಿಂದೂ ಯುವಕರು ಸತ್ತಾಗ ಇವರು ಎಷ್ಟು ಪರಿಹಾರ ನೀಡಿದ್ರು..? ಎಷ್ಟು ಜನರಿಗೆ 25 ಲಕ್ಷ ರೂ. ನೀಡಿದ್ರು.? ಕಾಂಗ್ರೆಸಿನವರು ಒಂದು ಪೈಸಾನೂ ನೀಡಿಲ್ಲ. ಕಾಂಗ್ರೆಸ್ ಸರಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯಿರಲಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.

click me!