ಹುಟ್ಟುಹಬ್ಬದಂದು ಸಿದ್ದರಾಮಯ್ಯ ಭೇಟಿಗೆ Belagavi ಅಭಿಮಾನಿಯ 365km ಪಾದಯಾತ್ರೆ!

By Suvarna News  |  First Published Jul 25, 2022, 9:45 PM IST

ಬೆಳಗಾವಿ ಜಿಲ್ಲೆಯ  ಸಂತೋಷ ವಿಠೊಬಾ ಚೋರಮುಲೆಎಂಬ ಯುವಕ ದಾವಣಗೆರೆಯಲ್ಲಿ ಜರುಗಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಸುಮಾರು 365 ಕಿ.ಮೀ ದೂರವನ್ನು ಪಾದಯಾತ್ರೆ ಆರಂಭಿಸಿದ್ದಾನೆ.


 ಬೆಳಗಾವಿ (ಜು.25): ತಮ್ಮ ನೆಚ್ಚಿನ ರಾಜಕಾರಣಿಯನ್ನು, ಸಿನೆಮಾ ನಟರನ್ನು, ವಿಶೇಷ ವ್ಯಕ್ತಿಗಳನ್ನು ಭೇಟಿಯಾಗಲು ಹಲವಾರು ಜನ ಏನೇನೋ ಮಾಡುತ್ತಾರೆ ಆದರೆ ಇಲ್ಲೊಬ್ಬ ವ್ಯಕ್ತಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಸಂತೋಷ ವಿಠೊಬಾ ಚೋರಮುಲೆ (35) ಎಂಬ ಯುವಕ ದಾವಣಗೆರೆಯಲ್ಲಿ ಜರುಗಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಸುಮಾರು 365 ಕಿ.ಮೀ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸುತ್ತಿದ್ದಾನೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಿಂದ ನಿನ್ನೆ ಬೆಳಿಗ್ಗೆ ಪಾದಯಾತ್ರೆ ಪ್ರಾರಂಭ ಮಾಡಿದ ಈ ಅಭಿಮಾನಿ ಪಾದಯಾತ್ರೆಯ ಮೂಲಕ 365 ಕಿ.ಮೀ ದೂರವನ್ನು ಕ್ರಮಿಸಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಬೇಕು, ಅವರು ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು, ಅವರು ಮುಖ್ಯಮಂತ್ರಿಯಾದರೆ ನಮ್ಮ ಕರ್ನಾಟಕ ಹಸಿವು ಮುಕ್ತವಾಗುತ್ತೆ, ಬಡವರು ದೀನ ದಲಿತರು ಸುಖ ಸಂಸಾರದಿಂದ ಬಾಳುತ್ತಾರೆ ಅದಕ್ಕಾಗಿ ನಾನು ದಾರಿಯುದ್ದಕ್ಕೂ ಬರುವ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸಿ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಕೇಳಿಕೊಳ್ಳುತ್ತಿದ್ದೆನೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಬೇಕು ಎಂದು ಈತ ಮೋಳೆ ಗ್ರಾಮದಿಂದ ಶ್ರೀಶೈಲವರೆಗೆ ಪಾದಯಾತ್ರೆ ಮಾಡಿದ್ದ, ಅದಲ್ಲದೆ ಹೋದ ವರ್ಷ ಅವರ  ಹುಟ್ಟುಹಬ್ಬದಂದು ಹಾಗೂ ಅವರಿಗೆ ಕೊರೋನಾ ತಗುಲಿದ ವೇಳೆ ಬೇಗ ನಿವಾರಣೆ ಆಗಲೆಂದು ಮೋಳೆ ಗ್ರಾಮದಿಂದ ಐನಾಪೂರ ಸಿದ್ದೇಶ್ವರ ದೇವಸ್ಥಾನದವರೆಗೆ ದೀರ್ಘ ದಂಡನಮಸ್ಕಾರ ಹಾಕಿ ದೇವರಿಗೆ ಹರಕೆ ಕಟ್ಟಿಕೊಂಡಿದ್ದ . ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನವನ್ನು ಈತ ತನ್ನ ಪಾದಯಾತ್ರೆಯ ಮೂಲವ  ವ್ಯಕ್ತಪಡಿಸುತ್ತಿದ್ದು, ಅದಕ್ಕಾಗಿ 365 ಕೀಮಿ ಪಾದಾಯತ್ರೆ ಕೈಗೊಂಡಿದ್ದಾನೆ.

Tap to resize

Latest Videos

 

 ಬದುಕಿದ್ದಾಗ ಉತ್ಸವ ಆಚರಣೆ ಎಷ್ಟು ಸರಿ?: ಸಿದ್ದರಾಮೋತ್ಸವದ ಬಗ್ಗೆ ಸಚಿವ ಪಾಟೀಲ ಟಾಂಗ್‌

ಸಿದ್ದರಾಮೋತ್ಸವಕ್ಕೆ    10ರಿಂದ 15ಲಕ್ಷ ಜನ ಸೇರುವ ನಿರೀಕ್ಷೆ: ದಾವಣಗೆರೆಯಲ್ಲಿ ಆಗಸ್ಟ್‌ 3ರಂದು ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಸಿದ್ದರಾಮೋತ್ಸವಕ್ಕೆ    10ರಿಂದ 15ಲಕ್ಷ ಜನ ಸೇರುವ ನಿರೀಕ್ಷೆ ಇದೆ.  ನಾಡು ಕಂಡ ಶ್ರೇಷ್ಠ ರಾಜಕಾರಣಿ, ಸಿದ್ಧಾಂತ ಮೈಗೂಡಿಸಿಕೊಂಡಿರುವ ಧೀಮಂತ ನಾಯಕ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ 75 ವರ್ಷ ಆಗಿರುವ ಹಿನ್ನೆಲೆ ಅವರ ಅಮೃತ ಮಹೋತ್ಸವವನ್ನು ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದು, ಇದು ವ್ಯಕ್ತಿಯ ಪೂಜೆಗಲ್ಲ. ಸಮಾಜದ ಪರಿವರ್ತನೆ ಮತ್ತು ಮೌಲ್ಯಯುತ ರಾಜಕೀಯಕ್ಕಾಗಿ ಎಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಬಸವರಾಜ ರಾಯರಡ್ಡಿ ಸ್ಪಷ್ಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ ಮಾಡುವುದನ್ನು ಬಿಜೆಪಿ ವಿನಾಕಾರಣ ಟೀಕೆ ಮಾಡುತ್ತಿದೆ ಎಂದರು.

IndiaGate: ಸಿದ್ದರಾಮೋತ್ಸವ, ಸಿದ್ದು ಜೊತೆ ಹಿರಿಯ ನಾಯಕರು, ಮುಲಾಜಿಗೆ ಬಿದ್ರಾ ಡಿಕೆಶಿ..?

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜಕೀಯ ಮೌಲ್ಯ ಕುಸಿಯುತ್ತಿದೆ. ಇದರ ಕುರಿತು ಪರಾಮರ್ಶೆಯಾಗಬೇಕಾಗಿದೆ. ಅಷ್ಟಕ್ಕೂ ಸಿದ್ದರಾಮಯ್ಯ ಅವರು ಎಂದೂ ತಮ್ಮ ಜನ್ಮದಿನ ಆಚರಣೆ ಮಾಡಿಕೊಂಡಿಲ್ಲ. ಆದರೆ, ಅವರ ಅಭಿಮಾನಿಗಳಾದ ನಾವೇ ಒತ್ತಾಯದಿಂದ ಆಚರಣೆ ಮಾಡುತ್ತಿದ್ದೇವೆ. ಇದರಲ್ಲಿ ರಾಜಕೀಯ ಮಾಡಬೇಡಿ ಎಂದರು.

ಸಿದ್ದರಾಮಯ್ಯ ಅವರು ಅತಿ ಹೆಚ್ಚು ಬಾರಿ ಬಜೆಟ್‌ ಮಂಡನೆ ಮಾಡಿರುವ, ನಾನಾ ಖಾತೆಗಳನ್ನು ನಿಭಾಯಿಸಿರುವ ಹಾಗೂ ಮುಖ್ಯಮಂತ್ರಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅಂಥ ಸಾಧನೆ ಮಾಡಿರುವ ಸಿದ್ದರಾಮಯ್ಯ ಅವರನ್ನು ಸ್ಮರಿಸುವ, ಅವರ ಸಾಧನೆಗಳನ್ನು ನಾಡಿಗೆ ತಿಳಿಸುವ ಕಾರ್ಯ ಆಗಬೇಕಾಗಿದೆ. ಸಿದ್ದರಾಮೋತ್ಸವ ಎಂದು ನಾವು ಎಲ್ಲಿಯೂ ಹೇಳಿಲ್ಲ. ಅಮೃತ ಮಹೋತ್ಸವ ಎಂದಿದ್ದೇವೆ. ಬಿಜೆಪಿಯವರು ದಿಕ್ಕು ತಪ್ಪಿಸುವುದಕ್ಕಾಗಿ ವಿನಾಕಾರಣ ಗೊಂದಲವನ್ನುಂಟು ಮಾಡುತ್ತಿದ್ದಾರೆ ಎಂದರು.

 

click me!