ಬಂಡಾಯ ಸಾಹಿತ್ಯವು ನಿಮ್ಮೆಲ್ಲಾ ಆಶಯಗಳ ಇಟ್ಟುಕೊಂಡು ಬಂದ ಸಾಹಿತ್ಯ ಚಳವಳಿಯಾಗಿದ್ದು, 43 ವರ್ಷದಿಂದಲೂ ಒಂದೇ ರೀತಿ ಆಲೋಚಿಸುವ ಬದಲಿಗೆ ಹಳೆಯದು ಮೆಲುಕು ಹಾಕಿ, ಮುಂದಿನ ದಾರಿ ನೋಡಬೇಕಾದ ಅಗತ್ಯತೆ ಇದೆ ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಕರೆ ನೀಡಿದರು.
ದಾವಣಗೆರೆ (ಜು.25): ಬಂಡಾಯ ಸಾಹಿತ್ಯವು ನಿಮ್ಮೆಲ್ಲಾ ಆಶಯಗಳ ಇಟ್ಟುಕೊಂಡು ಬಂದ ಸಾಹಿತ್ಯ ಚಳವಳಿಯಾಗಿದ್ದು, 43 ವರ್ಷದಿಂದಲೂ ಒಂದೇ ರೀತಿ ಆಲೋಚಿಸುವ ಬದಲಿಗೆ ಹಳೆಯದು ಮೆಲುಕು ಹಾಕಿ, ಮುಂದಿನ ದಾರಿ ನೋಡಬೇಕಾದ ಅಗತ್ಯತೆ ಇದೆ ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಕರೆ ನೀಡಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಸಮಾರೋಪ ನುಡಿಗಳನ್ನಾಡಿ, ಪ್ರತಿ ಸಮ್ಮೇಳನದಲ್ಲೂ ಚಂಪಾ ಸಮಾರೋಪ ಭಾಷಣವನ್ನು ಸಂ ಆರೋಪವೆನ್ನುತ್ತಿದ್ದರು.
ಈ ಸಮ್ಮೇಳನದಲ್ಲಿ ನಾನು ಸಮಾರೋಪ ಮಾಡುತ್ತಿದ್ದು, ಸಂ ಹೊಸ ರೂಪ ಅಂತಾ ನಾನು ಸಮಾರೋಪದ ಮೂಲಕ ಹೇಳುತ್ತಿದ್ದೇನೆ ಎಂದರು. ನಾಲ್ಕು ದಶಕದಿಂದಲೂ ಹಳೆ ರೆಕಾರ್ಡನ್ನೇ ಹೇಳುತ್ತಿದ್ದೇವೆಂಬ ಪರಿಸ್ಥಿತಿಗೆ ನಾವು ಬರಬಾರದು, ಹೊಸಬರಿಗೆ ಅಪ್ಯಾಯಮಾನವಾಗಿ ಕಾಣಬಹುದು. ರಾಜಕೀಯ, ಸಾಮಾಜಿಕ, ಸಾಹಿತ್ಯಿಕ ಸಂದರ್ಭ ಎಷ್ಟು ಬದಲಾವಣೆಯಾಗಿದೆಯೆಂದು ನೋಡಿದರೆ ಅಷ್ಟೊಂದು ದೊಡ್ಡ ವ್ಯತ್ಯಾಸವೇನೂ ಇಲ್ಲ. ಹಳೆಯದನ್ನು ಮೆಲುಕು ಹಾಕಿ, ಮುಂದಿನ ದಾರಿಯನ್ನು ನೋಡಬೇಕಾಗಿದೆ ಎಂದು ತಿಳಿಸಿದರು.
undefined
ಜಿಎಂಐಟಿ: "ಮಲ್ಲಿಕಾ 2022" ವಾರ್ಷಿಕೋತ್ಸವಕ್ಕೆ ಅದ್ದೂರಿಯ ತೆರೆ
ಶೈನಿಂಗ್ ಅಲ್ಲ: ಹಿಂದೆ ಇಂಡಿಯಾ ಈಸ್ ಶೈನಿಂಗ್ ಅಂತಿದ್ದರು. ಎಲ್ಲಿ ಶೈನಿಂಗ್ ಅಂತಿದ್ದೆ ನಾನು. ಅನುಭವಿಸುವವರಿಗೆ ಯಾವುದು ಶೈನಿಂಗ್, ಯಾವುದು ಅಲ್ಲ ಅಂತಾ ಗೊತ್ತಾಗುತ್ತಿತ್ತು. ಮನಸ್ಸಿನಲ್ಲಿ ಬೆಳಕು ಎಲ್ಲೆಲ್ಲಿ ಕಾಣುತ್ತಿದೆಯೆಂದು ಮನಸ್ಸಿನಲ್ಲೇ ಜನರು ಕೇಳುತ್ತಿದ್ದರು. ಶೈನಿಂಗ್ ಅಂತಾ ಹೇಳಿದವರಿಗೆಲ್ಲಾ ಮನೆಗೆ ಕಳಿಸುವ ಕೆಲಸ ಜನ ಆಗ ಮಾಡಿದರು. ಮುಂದಿನ ದಿನಗಳಲ್ಲಿ ಅಂತಹದ್ದು ಮತ್ತೆ ಆಗಬಹುದು ಎಂದು ತಿಳಿಸಿದರು.
ಬಂಡಾಯ ಲೇಖಕ ತನ್ನ ಪ್ರತಿ ಅಕ್ಷರಗಳನ್ನು ಎರಡೆರೆಡು ಸಲ ಇಂದು ನೋಡಬೇಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ. ಸಂವಿಧಾನಬದ್ಧ ಹಕ್ಕು ಪೂರ್ಣ ಅರ್ಥವೇ ಕಳೆದು ಹೋಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದೇಶ ದ್ರೋಹದ ಕೆಲಸ ಮಾಡಿದವರ ವಿರುದ್ಧ ಕೇಸ್ ಆಗಲ್ಲ. ವಾಟ್ಸಪ್, ಫೇಸ್‌ಬುಕ್‌ನಲ್ಲಿ ಶೇರ್, ಫಾರ್ವರ್ಡ್ ಮಾಡಿದವರ ವಿರುದ್ಧ ಕೇಸ್ ಮಾಡುತ್ತಿದ್ದಾರೆ. ಪ್ರತಿಕ್ಷಣ ಸಂವೇದನ ಶೀಲ ತಪ್ಪನ್ನು ತಪ್ಪು ಅಂತಾ ಹೇಳಲು 2 ಸಲ ಯೋಚಿಸಬೇಕಿದೆ. ತಪ್ಪು ಅಂತಾ ಹೇಳಿದರೆ, ನಾಳೆ ಬೆಳಿಗ್ಗೆ ನೀವು ಜೈಲಿನಲ್ಲಿರಬೇಕಾಗುತ್ತದೆ. ಇಂತಹದ್ದಕ್ಕೆ ಯಾವ ಸ್ವಾತಂತ್ರ್ಯ ಎನ್ನಬೇಕು ಎಂದು ಪ್ರಶ್ನಿಸಿದರು.
ರಾಜಕೀಯ ಪ್ರಜ್ಞೆ ಇರಬಾರದು: ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ ಅಷ್ಟೇ ಅಲ್ಲ, ಲೇಖಕ ರಾಜಕೀಯವಾಗಿ ಪ್ರಜ್ಞಾವಂತನಾಗಿರಬೇಕು. ಅಭಿವ್ಯಕ್ತಿಯನ್ನು ಸಾರ್ವಜನಿಕವಾಗಿ ಹೇಳಬೇಕೆಂದು ‘ಖಡ್ಗವಾಗಲಿ ಕಾವ್ಯ’ ಅಂತಾ ಹೇಳುತ್ತಿದ್ದೆವು. ಖಡ್ಗವಾಗುವುದಿರಲಿ, ಕಡ್ಡಿಯಾಗುವುದೂ ಈಗ ಕಷ್ಟವಾಗಿದೆ. ಆ ಕಡ್ಡಿ ಎಳೆದಾಡಿದರೂ ಜೈಲಿಗೆ ಹಾಕುವ ಸ್ಥಿತಿ ಇದೆ. ಅಂತಹ ಸ್ಥಿತಿಯಲ್ಲಿ ಭಾರತೀಯ ಲೇಖಕರು ಇದ್ದಾರೆ. ಲೇಖಕ ಮೂಖನಾಗಿರಬೇಕು. ಕಿವುಡನಾಗಿರಬೇಕು. ಆತನಿಗೆ ರಾಜಕೀಯ ಪ್ರಜ್ಞೆ ಇರಬಾರದು. ಇದ್ದರೆ, ಜೈಲಿಗೆ ಹೋಗಲು ಸಿದ್ಧನಾಗಿರಬೇಕೆಂಬ ಸ್ಥಿತಿ ಈಗ ದೇಶದಲ್ಲಿದೆ. ಲೇಖಕರು ಒಂದು ಕಡೆ ಜಾತ್ಯತೀತ ಸರ್ಕಾರವೆಂದು ಸಂವಿಧಾನ ಹೇಳುತ್ತದೆ ಎಂದರು.
ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್ ಅಧ್ಯಕ್ಷತೆ ವಹಿಸಿದ್ದರು. ಭಕ್ತರಹಳ್ಳಿ ಕಾಮರಾಜ್, ಆರ್.ಜಿ.ಹಳ್ಳಿ ನಾಗರಾಜ, ಮೋಹನ ರಾಜ್, ಕೆ.ಷರೀಫಾ, ಡಾ.ಎಚ್.ವಿಶ್ವನಾಥ, ಪ್ರೊ.ಎ.ಬಿ.ರಾಮಚಂದ್ರಪ್ಪ ಇದ್ದರು. ಚಂದ್ರಪ್ಪ ನೀಲಗುಂದ, ಎಲ್.ಎಚ್.ಅರುಣಕುಮಾರ ಕಾರ್ಯಕ್ರಮ ನಡೆಸಿಕೊಟ್ಟರು.
Davanagere: ಶಾಸಕ ರೇಣುಕಾಚಾರ್ಯ ಮನೆಯಲ್ಲಿ ಭಾವುಕರಾದ ಬಿಎಸ್‌ವೈ
ಜಾತ್ಯತೀತಯೆ ಬಗ್ಗೆ ಮಾತನಾಡಿದರೆ ಆತ ಕಮ್ಯುನಿಷ್ಟ್ ಇರಬೇಕೆಂಬ ಅನುಮಾನ ಮೂಡುತ್ತದೆ. ಧರ್ಮ ನಿರಪೇಕ್ಷತೆ ಬಹುದೊಡ್ಡ ಮೌಲ್ಯ, ಹಕ್ಕು ಸಂವಿಧಾನ ನೀಡಿದೆ. ಅದನ್ನು ಧರ್ಮಾಂಧತೆಯ ಮೌಲ್ಯಗಳು ಈಗ ಅದೇ ಸಂವಿಧಾನದಡಿ ವಿಜೃಂಭಿಸುತ್ತದೆ. ನಾವು ಯಾವುದರ ಬಗ್ಗೆ ಮಾತನಾಡಬೇಕು. ನಮ್ಮ ಧ್ವನಿಯಲ್ಲಿ ಒಳಗೆ ಅದುಮಿಟ್ಟುಕೊಳ್ಳಬೇಕೆ ಎಂಬ ಪ್ರಶ್ನೆ ಕಾಡುತ್ತಿದೆ.
-ಎಲ್.ಹನುಮಂತಯ್ಯ, ರಾಜ್ಯಸಭೆ ಸದಸ್ಯ