ಮಂಡ್ಯ: ಅಂತರ್ಜಾತಿ ವಿವಾಹವಾದ ಮಗಳ ಕುಟುಂಬಕ್ಕೆ ಬಹಿಷ್ಕಾರ

By Web DeskFirst Published Jan 25, 2019, 5:11 PM IST
Highlights

ಅಂತರ್ಜಾತಿ ವಿವಾಹ ಮಾಡಿಕೊಂಡ ಆ ಜೋಡಿಯ ಕುಟುಂಬ ಬಹಿಷ್ಕಾರಕ್ಕೆ ಗುರಿಯಾಗಿದೆ.  ಮಗಳು ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಹೆತ್ತವರಿಗೆ ಬಹಿಷ್ಕಾರ ಹಾಕಲಾಗಿದೆ. ಇದು ಬೇರೆ ರಾಜ್ಯದ ಪ್ರಕರಣವಲ್ಲ. ನಮ್ಮದೆ ರಾಜ್ಯದ ಮಂಡ್ಯದ ಘಟನೆ

ಮಂಡ್ಯ[ಜ.25]  ಅಂತರ್ಜಾತಿ ವಿವಾಹ ಮಾಡಿಕೊಂಡ ಮಗಳ ಹೆತ್ತವರಿಗೆ ಬಹಿಷ್ಕಾರ ಹಾಕಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು ನೊಂದವರು ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದಾರೆ.

"

ತಿಗಳ ಸಮುದಾಯದ ಯಶೋದಾ ಒಕ್ಕಲಿಗ ಸಮುದಾಯದ ವೆಂಕಟರಾಜು ಜೊತೆ  ವಿವಾಹ ಆಗಿದ್ರು. ಯಶೋದಾ ಅಂತರ್ಜಾತಿ ವಿವಾಹಕ್ಕೆ ಕುಟುಂಬ ಒಪ್ಪಿಗೆ ನೀಡಿತ್ತು.  ಆದರೆ  ಗ್ರಾಮದ ಮುಖಂಡ ಅಪ್ಪಾಜಿ ಹಾಗೂ ಆತನ ಹಿಂಬಾಲಕರು ಇದನ್ನು ವಿರೋಧ ಮಾಡಿದ್ದರು.

ಮೊದಲ ಪತ್ನಿ, ಮಗಳನ್ನು ಹೊರದಬ್ಬಿ ಎರಡನೇ ಮದುವೆಯಾದ ಜೆಡಿಎಸ್ ಶಾಸಕ!

ಮಗಳನ್ನು ಕರೆತಂದಿದ್ದೆ ತಪ್ಪಾಯ್ತು:  ಗರ್ಭಿಣಿಯಾದ  ಮಗಳನ್ನಂನು ಹೆತ್ತವರು ಊರಿಗೆ ಕರೆತಂದಿದ್ದರು. ಅನ್ಯಜಾತಿ ಯುವಕನನ್ನು ಮದುವೆಯಾಗಿದ್ದ ಮಗಳನ್ನು ಮತ್ತೆ ಮನೆಗೆ ಸೇರಿಸಿ ಕುಲಕ್ಕೆ ಅಪಮಾನ ಮಾಡಿದ್ದೀರಿ ಎಂದು  ಆರೋಪಿಸಿ ಬಹಿಷ್ಕಾರ ಹಾಕಲಾಗಿದೆ.  ಮೊದಲು ಯಶೋದಾ ಕುಟುಂಬಕ್ಕೆ 25 ಸಾವಿರ ದಂಡ ಹಾಕಿ, ಮನೆಯಿಂದ ಮಗಳನ್ನು ಹೊರಹಾಕುವಂತೆ ಸೂಚನೆ ನೀಡಲಾಗಿದೆ. ಪಂಚಾಯಿತಿ ಮಾಡಿ ತೀರ್ಮಾನಿಸಿದ್ದ ಗ್ರಾ.ಪಂ. ಸದಸ್ಯ ಅಪ್ಪಾಜಿ ಹಾಗೂ ಆತನ ಹಿಂಬಾಲಕರು  ದಂಡ ಕಟ್ಟದೇ ಇರೋದಕ್ಕೆ ತಿಗಳ ಕುಲದಿಂದ ಯಶೋದಾ ಕುಟುಂಬಕ್ಕೆ ಬಹಿಷ್ಕಾರ  ಹಾಕುತ್ತೇವೆ ಎಂದು ಹೇಳಿದ್ದರು.

ನೆರವಿಗೆ ಬಂದ ವಕೀಲ ಪುಟ್ಟಮಾದು:  ಆದರೆ ಅಪ್ಪಾಜಿ ತೀರ್ಮಾನ ಪ್ರಶ್ನಿಸಿ, ಯಶೋದಾ ಕುಟುಂಬಸ್ಥರಿಗೆ ದೇವಾಲಯಕ್ಕೆ ವಕೀಲ ಪುಟ್ಟಮಾದು ಪ್ರವೇಶ ಕೊಡಿಸಿದದ್ದರು. ಯಶೋದಾ ಕುಟುಂಬಕ್ಕೆ ಸಹಕಾರ ನೀಡಿದ್ದಕ್ಕಾಗಿ ವಕೀಲ‌ ಪುಟ್ಟಮಾದು ಕುಟುಂಬಕ್ಕೂ ಬಹಿಷ್ಕಾರ ಹಾಕಲಾಯಿತು.

ಷರತ್ತು ಹಾಕಿದ ಮುಖಂಡರು!  ತಿಗಳ ಜನಾಂಗದ ಯಾರೊಬ್ಬರು ಈ ಎರಡು ಕುಟುಂಬದ ಜೊತೆ ಮಾತನಾಡಬಾರದು. ಈ ಕುಟುಂಬದ ಸದಸ್ಯರಿಗೆ ದೇವಾಲಯಕ್ಕೆ ಪ್ರವೇಶ‌ ನೀಡುವಂತಿಲ್ಲ, ಈ ಕುಟುಂಬದವರನ್ನು ಯಾರು ಕೂಲಿಗೆ ಕರೆಯುವಂತಿಲ್ಲ ಎಂಬ  ಷರತ್ತುಗಳನ್ನು ಹಾಕಿ ಬಹಿಷ್ಕಾರದ  ಆದೇಶ ಸಹ ನೀಡಲಾಗಿತ್ತು.

ಬಹುಮಾನ ಬೇರೆ ಕೊಡ್ತಾರಂತೆ! ಯಾರಾದರು ಈ ಎರಡು ಕುಟುಂಬದ ಜೊತೆ ಮಾತನಾಡಿದ್ರೆ1 ಸಾವಿರ ದಂಡ. ಮಾತನಾಡುವುದನ್ನ ಪಂಚಾಯಿತಿ ಗಮನಕ್ಕೆ ತಂದ್ರೆ 500 ರೂ. ಬಹುಮಾನ ನೀಡುತ್ತೇವೆ ಎಂದು ಘೋಷಿಸಲಾಗಿತ್ತು.

ಸೀಟು ಸಿಕ್ಕರೆ ಮಂಡ್ಯದಿಂದ ನಿಲ್ಲುತ್ತಿರಾ? ನಿಖಿಲ್ ಕೊಟ್ಟ ಖಡಕ್ ಉತ್ತರ

ಪೊಲೀಸರ ಮೊರೆ: ಮುಖಂಡರ ಈ ತೀರ್ಮಾನಗಳಿಂದ ಮನನೊಂದಿರುವ ಯಶೋದಾ ಕುಟುಂಬಸ್ಥರು  ನ್ಯಾಯ ದೊರಕಿಸಿಕೊಡುವಂತೆ ಪೋಲಿಸರ ಮೊರೆ ಹೋಗಿದ್ದಾರೆ. ಹಲಗೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂದವರನ್ನು ಭೇಟಿ ಮಾಡಿದ ಅಧಿಕಾರಿ:  ಬಹಿಷ್ಕಾರ ಶಿಕ್ಷೆಗೊಳಗಾದ ಕುಟುಂಬವನ್ನು‌ ಭೇಟಿ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ ಮಾಃಇತಿ ಪಡೆದುಕೊಂಡಿದ್ದಾರೆ.

ಸಂತ್ರಸ್ತ ಕುಟುಂಬ ಸದಸ್ಯರನ್ನು‌ ಭೇಡಿ ಮಾಡಿ‌ ಸಾಂತ್ವನ ಹೇಳಿರುವ ಅಧಿಕಾರಿ ಕಾನೂನು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

click me!