ಸಿದ್ದರಾಮಯ್ಯ ಎಸ್ಕಾರ್ಟ್ ಕಾರು ಅಪಘಾತ: ಹೃದಯಘಾತದಿಂದ ARSI ಸಾವು

Published : Jan 09, 2019, 08:46 PM IST
ಸಿದ್ದರಾಮಯ್ಯ ಎಸ್ಕಾರ್ಟ್ ಕಾರು ಅಪಘಾತ: ಹೃದಯಘಾತದಿಂದ ARSI ಸಾವು

ಸಾರಾಂಶ

ಮೈಸೂರಿಗೆ ತೆರಳುವ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ಹೃದಯಘಾತದಿಂದ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ.

ಮಂಡ್ಯ, (ಜ.9): ಮೈಸೂರಿಗೆ ತೆರಳುವ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನ ಮಂಡ್ಯದ ಶ್ರೀರಂಗಪಟ್ಟಣದ ಟಿ.ಎಂ.ಹೊಸೂರು ಗೇಟ್ ಬಳಿ ಅಪಘಾತಕ್ಕೀಡಾಗಿದೆ.

ಸರಣಿ ಅಪಘಾತದ ಪರಿಣಾಮ ಎಸ್ಕಾರ್ಟ್ ವಾಹನದಲ್ಲಿದ್ದ  ARSI ಮರೀಗೌಡ(56) ಆತಂಕಗೊಂಡು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇಂದು [ಬುಧವಾರ] ಬೆಳಗ್ಗೆ ಬೆಂಗಳೂರಿಂದ ಮೈಸೂರಿಗೆ ತೆರಳುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಎಸ್ಕಾರ್ಟ್ ವೇಳೆ ಸರಣಿ ಅಪಘಾತ ಸಂಭವಿಸಿದೆ.

ಈ ಘಟನೆ ನೋಡಿ ಬೆಂಗಾವಲು ವಾಹನ ಸಂಖ್ಯೆ ಕೆಎ 11 ಜಿ 591ರಲ್ಲಿದ್ದ ಮರೀಗೌಡ ಅವರು ಹೃದಯಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೂರು ಪೊಲೀಸ್ ವಾಹನಗಳು ಹಾಗೂ ಎರಡು ಖಾಸಗಿ ವಾಹನಗಳು ಜಖಂಗೊಂಡಿವೆ.

PREV
click me!

Recommended Stories

ವೀರವೈಶ ಲಿಂಗಾಯತ ಸಮಾಜ ಒಡೆದಾಳಲು ಯತ್ನ: ವಿಜಯೇಂದ್ರ
ಮಂಡ್ಯ: 'ರಾಮ-ಲಕ್ಷಣ' ನಾಣ್ಯದ ಹೆಸರಲ್ಲಿ ವಂಚನೆಗೆ ಯತ್ನ; ಇಬ್ಬರು ವಂಚಕರಿಗೆ ಬಿತ್ತು ಗೂಸಾ!