ಮಂಡ್ಯ: ಮತ್ತೋರ್ವ ಜೆಡಿಎಸ್ ಮುಖಂಡನಿಗೆ ಕೊಲೆ ಬೆದರಿಕೆ

Published : Jan 08, 2019, 04:11 PM IST
ಮಂಡ್ಯ: ಮತ್ತೋರ್ವ ಜೆಡಿಎಸ್ ಮುಖಂಡನಿಗೆ ಕೊಲೆ ಬೆದರಿಕೆ

ಸಾರಾಂಶ

ಇತ್ತೀಚೆಗಷ್ಟೇ ಮಂಡ್ಯ ಜೆಡಿಎಸ್ ಮುಖಂಡ ಹತ್ಯೆ ಬೆನ್ನಲ್ಲೇ ಮತ್ತೋರ್ವ ಜೆಡಿಎಸ್ ಮುಖಂಡ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗರೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ.

ಮಂಡ್ಯ, (ಜ.8): ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಬೆನ್ನಲ್ಲೇ ಮತ್ತೋರ್ವ ಜೆಡಿಎಸ್ ಮುಖಂಡನಿಗೆ ಅನಾಮಧೇಯ ವ್ಯಕ್ತಿಯೊಬ್ಬನಿಂದ ಕೊಲೆ ಬೆದರಿಕೆ ಹಾಕಿದ್ದಾರೆ.

ಮಂಡ್ಯ JDS​ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್​ ಮಾಡಿ ಎಂದ ಸಿಎಂ

ಕೆ.ಎಂ.ದೊಡ್ಡಿಯ ಗ್ರಾಮ ಪಂಚಾಯಿತಿ ಮಾಜಿ ‌ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ವೆಂಕಟೇಶ್​ಗೆ ಪತ್ರದ ಮೂಲಕ ಬೆದರಿಕೆ ಬಂದಿದೆ.

JDS ಕಾರ್ಯಕರ್ತ ಹತ್ಯೆ: ಅಂತಿಮ ದರ್ಶನ ವೇಳೆ ಕುಮಾರಸ್ವಾಮಿ ಕಣ್ಣೀರು

ಅನಾಮಧೇಯ ವ್ಯಕ್ತಿ ಒಂದು ಸಾಲಿನಲ್ಲಿ ಕೊಲೆ ಬೆದರಿಕೆ ಪತ್ರ ಬರೆದಿದ್ದು, 'ನಿನ್ನ ಕೊಲೆ ತಕ್ಷಣದಲ್ಲೇ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗರಾಗಿರುವ ವೆಂಕಟೇಶ್ ಬೆದರಿಕೆ ಪತ್ರದಿಂದ ಆತಂಕಕ್ಕೆ ಒಳಗಾಗಿದ್ದು, ಈ ಬಗ್ಗೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

PREV
click me!

Recommended Stories

ರಾಜಕೀಯಕ್ಕೆ ಸುಮಲತಾ ರೀ-ಎಂಟ್ರಿ, ಮತ್ತೆ ಸ್ವತಂತ್ರವಾಗಿ ಸ್ಫರ್ಧೆ, ದೇವೇಗೌಡ ನಮ್ಮ ತ್ಯಾಗ ಮರೆತಿದ್ದಾರೆ, ಮಾಜಿ ಸಚಿವ ನಾರಾಯಣ ಕಿಡಿ
Century Gowda Death: ಗಡ್ಡಪ್ಪ ನಂತರ ತಿಥಿ ಸಿನಿಮಾದ ಸೆಂಚುರಿ ಗೌಡ ನಿಧನ!