ಕೋಲಾರ: Facebook ದೋಖಾ, FB ಫ್ರೆಂಡ್‌ನಿಂದ ಪಂಗನಾಮ

By Divya PerlaFirst Published Oct 1, 2019, 12:52 PM IST
Highlights

ಫೇಸ್‌ಬುಕ್‌ನಲ್ಲಿ ಫೇಕ್ ಎಕೌಂಟ್‌ಗಳಿವೆ ಎಂಬುದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೂ ಫೇಸ್‌ಬುಕ್ ಮೂಲಕ ಜನ ಮೋಸ ಹೋಗೋ ಘಟನೆ ನಡೆಯುತ್ತಲೇ ಇರುತ್ತದೆ. ಕೋಲಾರದಲ್ಲಿ ಫೇಸ್‌ಬುಕ್‌ ಫ್ರೆಂಡ್‌ನಿಂದಾಗಿ ಸ್ಥಳೀಯರೊಬ್ಬರು ಪಂಗನಾಮ ಹಾಕಿಸಿಕೊಂಡಿದ್ದಾರೆ.

ಕೋಲಾರ(ಅ.01): ಕೋಲಾರದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ ಫ್ರೆಂಡ್‌ನಿಂದ ವಂಚನೆಗೊಳಗಾಗಿದ್ದಾರೆ. ಗಿಫ್ಟ್ ಪಡೆಯಲು ಹೋಗಿ ಸುಮಾರು 1.26 ಲಕ್ಷ ರುಪಾಯಿ ಕಳೆದುಕೊಂಡಿದ್ದಾರೆ. 

ಫೇಸ್ ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ಸ್ನೇಹಕ್ಕೆ ಗುರುತಾಗಿ ಉಡುಗೊರೆ ಕಳುಹಿಸಲಿದ್ದು ಅದನ್ನು ಪಡೆಯಲು 1.26 ಲಕ್ಷ ರು. ಪಾವತಿಸಬೇಕೆಂದು ಹೇಳಿ ಹಣ ಪಾವತಿಸಿದ ಬಳಿಕ ಯಾವುದೇ ಉಡುಗೊರೆ ಕಳುಹಿಸದೆ ಹಣ ಸಹ ವಾಪಸ್ ನೀಡದೆ ವಂಚಿಸಿರುವ ಘಟನೆ ನಡೆದಿದೆ.

ಸರ್ಕಾರಿ ಶಾಲೆ ಅಂದ್ರೆ ಪಂಚ ಪ್ರಾಣ ಎಂದ ಮಾಜಿ ಸ್ಪೀಕರ್

ಪಟ್ಟಣಕ್ಕೆ ಹೊಂದಿಕೊಂಡಿರುವ ಹುಣಸ ನಹನಳ್ಳಿಯ ಅಜಿತ್ ಎಂಬಾತ ವಂಚನೆಗೊಳ ಗಾಗಿದ್ದು, ಇವರಿಗೆ ಫೇಸ್ ಬುಕ್‌ನಲ್ಲಿ ಲಿಂದಾ ಬ್ರೆಕ್ಸ್ ಎಂಬಾತ ಪರಿಚಯವಾಗಿದ್ದ. ಇಬ್ಬರೂ ಕೆಲ ತಿಂಗಳುಗಳ ಕಾಲ ದೀರ್ಘಕಾಲ ಚಾಟಿಂಗ್ ಮಾಡುತ್ತಿದ್ದರು. ಪಾರ್ಸೆಲ್‌ನ ಚಾರ್ಜ್ ₹1.26 ಲಕ್ಷ ಆಗಸ್ಟ್‌ನಲ್ಲಿ ಲಿಂದಾ ಬ್ರೆಕ್ಸ್ ಅಜಿತ್ ಮೊಬೈಲ್‌ಗೆ ಕರೆ ಮಾಡಿ ನಮ್ಮಿಬ್ಬರ ಸ್ನೇಹದ ಗುರುತಿಗಾಗಿ ನಾನು ನಿನಗೆ ಒಂದು ಗಿಫ್ಟ್ ಪಾರ್ಸಲ್ ಕಳುಹಿಸುತ್ತೇನೆ ಎಂದು ತಿಳಿಸಿದ್ದ.

ದಂಡ ವಿಧಿಸಿದ ಪೊಲೀಸ್‌ ಮೇಲೆ ಹಲ್ಲೆ: ಠಾಣೆಯಲ್ಲಿ ಅಡಗಿದ ASI

ಆಗಸ್ಟ್ 13ರಂದು ಮತ್ತೆ ಕರೆ ಮಾಡಿ ಪಾಸೆರ್ಲ್ ದೆಹಲಿಯ ಏರ್ ಪೋರ್ಟ್‌ಗೆ ಬಂದಿದ್ದು, ಪಾರ್ಸಲ್ ಚಾರ್ಚ್ ಕಟ್ಟಬೇಕು ಎಂದು ಹೇಳಿ ಎರಡು ಬೇರೆ ಬೇರೆ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ನೀಡಿ ಒಂದಕ್ಕೆ 27500 ರು. ಮತ್ತೊಂದಕ್ಕೆ 98700ರೂ ಜಮಾ ಮಾಡುವಂತೆ ಹೇಳಿದ ಮಾತು ನಂಬಿ ಅಜಿತ್ ಅದರಂತೆ ಜಮಾ ಮಾಡಿದ್ದರು.

ಆದರೆ ಎರಡು ತಿಂಗಳಾದರೂ ಪಾರ್ಸಲ್ ಬರಲಿಲ್ಲ. ಫೇಸ್‌ಬುಕ್ ನಲ್ಲಿಯೂ ಲಿಂದಾ ಬ್ರೆಕ್ಸ್ ನಾಪತ್ತೆಯಾಗಿದ್ದ. ತಾನು ಮೋಸಹೋಗಿವುದನ್ನು ಅರಿತ ಅಜಿತ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಡಿಕೆಶಿ ಬಂಧನ ವಿರೋಧಿಸಿದಕ್ಕೆ ಕಾಂಗ್ರೆಸ್‌ ಶಾಸಕನ ಮೇಲೆ IT ದಾಳಿ: ಹೀಗೊಂದು ಗುಲ್ಲು

click me!