ಗೌತಮ್ ಕುಮಾರ್ ಬೆಂಗಳೂರಿನ ನೂತನ ಮೇಯರ್!

By Web Desk  |  First Published Oct 1, 2019, 12:49 PM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ಚುನಾವಣೆಯಲ್ಲೂ ಬಿಜೆಪಿಗೆ ಜಯ| ಗೊಂದಲ ನಿವಾರಣೆ, ಆಕಾಂಕ್ಷಿಗಳ ಮನವೊಲಿಸಲು ಕಮಲ ಪಾಳಯ ಯಶಸ್ವಿ| ಬಿಜೆಪಿ ಅಭ್ಯರ್ಥಿ ಗೌತಮ್  ಮೇಯರ್ ಬೆಂಗಳೂರಿನ ನೂತನ ಮೇಯರ್


ಬೆಂಗಳೂರು[ಅ.01]: ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಂತೆ ತೀವ್ರ ಕುತೂಹಲ ಮೂಡಿಸಿದ್ದ ಬಿಬಿಎಂಪಿ ಚುನಾವಣೆ ನಡೆದಿದ್ದು, ಬೆಂಗಳೂರಿನ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಯೊಬ್ಬರು ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನ ಮೇಯರ್ ಗದ್ದುಗೆ ಏರಲು ಯಶಸ್ವಿಯಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆ ಬಿಜೆಪಿಗೆ ತೆಕ್ಕೆಗೆ ಸೇರಿದ್ದು, ಕಾಂಗ್ರೆಸ್- ಜೆಡಿಎಸ್ ದೋಸ್ತಿಗಳಿಗೆ ತೀವ್ರ ಮುಖಭಂಗವಾಗಿದೆ. ಜೈನ ಸಮುದಾಯದ ಗೌತಮ್‌ ಕುಮಾರ್‌ಗೆ ಮೇಯರ್ ಪಟ್ಟ ಒಲಿದಿದ್ದು, 53ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Latest Videos

ಯಾರು ಗೌತಮ್ ಕುಮಾರ್?

ಎರಡು ಬಾರಿ ಬಿಜೆಪಿಯಿಂದ ಜೋಗುಪಾಳ್ಯ ವಾರ್ಡ್ ಕಾರ್ಪೊರೇಟರ್ ಆಗಿ ಆಯ್ಕೆಯಾದ ಗೌತಮ್ ಕುಮಾರ್, RSSನಲ್ಲಿ ಗುರುತಿಸಿಕೊಂಡಿದ್ದಾರೆ. ಬಿಕಾಂ ಪದವೀಧರರಾಗಿರುವ ಗೌತಮ್ ಕುಮಾರ್, ಎಂದಿಗೂ ಪಕ್ಷ ಮತ್ತು ಸಂಘದ ಮಾತನ್ನು ಯಾವತ್ತೂ ಮೀರಿದವರಲ್ಲ.

ಅಕ್ಟೋಬರ್ 01ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

click me!