Education: ಖಾಸಗಿ ಶಾಲೆಗಳಿಂದ ಪಾಲಕರಿಗೆ ಶುಲ್ಕದ ಬರೆ!

By Kannadaprabha News  |  First Published Feb 7, 2023, 8:51 AM IST

2022-23ನೇ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಗಳಿನ್ನು ಆರಂಭವೇ ಆಗಿಲ್ಲ. ಅದಾಗಲೇ ಮುಂದಿನ ವರ್ಷದ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಶುಲ್ಕದ ಬಗ್ಗೆ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪಾಲಕರಿಗೆ ಚಿಂತೆ ಶುರುವಾಗಿದೆ.


ಬಸವರಾಜ ಹಿರೇಮಠ

ಧಾರವಾಡ (ಫೆ.7) : 2022-23ನೇ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಗಳಿನ್ನು ಆರಂಭವೇ ಆಗಿಲ್ಲ. ಅದಾಗಲೇ ಮುಂದಿನ ವರ್ಷದ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಶುಲ್ಕದ ಬಗ್ಗೆ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪಾಲಕರಿಗೆ ಚಿಂತೆ ಶುರುವಾಗಿದೆ.

Tap to resize

Latest Videos

ಹೌದು. ಎಫ್‌ಎ-4 ಪರೀಕ್ಷೆಯ ಫಲಿತಾಂಶದ ನೆಪದಲ್ಲಿ ಶಾಲಾ ಮಕ್ಕಳ ಪಾಲಕರನ್ನು ಕರೆಯಿಸಿಕೊಂಡ ಖಾಸಗಿ ಶಾಲೆಗಳು ಅವರ ಕೈಯಲ್ಲಿ ಫಲಿತಾಂಶದ ಪಟ್ಟಿಯ ಜತೆಗೆ ಮುಂದಿನ ವರ್ಷದ ಶುಲ್ಕದ ಪಟ್ಟಿಯನ್ನೂ ನೀಡುತ್ತಿರುವುದು ಪಾಲಕರ ಎದೆಯಲ್ಲಿ ಢವ-ಢವ ಶುರುವಾಗುವಂತೆ ಮಾಡಿದೆ. ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳೂ ಅಲ್ಲದೇ ಇದ್ದರೂ ಬಹುತೇಕ ಅದರಲ್ಲೂ ಪ್ರತಿಷ್ಠಿತ ಎನಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಈ ಬಾರಿ ಭಾರೀ ಪ್ರಮಾಣದಲ್ಲಿ ಶಾಲಾ ಶುಲ್ಕವನ್ನು ಏರಿಕೆ ಮಾಡಿ ಪಾಲಕರಿಗೆ ಶುಲ್ಕ ತುಂಬಲು ಸಜ್ಜಾಗಲು ಮುನ್ಸೂಚನೆ ನೀಡಿವೆ.

ಭಾಲ್ಕಿ: ಕಾಂಗ್ರೆಸ್‌ ಪ್ರಜಾಧ್ವನಿ ನಿಮಿತ್ತ ಖಾಸಗಿ ಶಾಲೆಗಳಿಗೆ ರಜೆಗೆ ಬಿಜೆಪಿ ಆಕ್ಷೇಪ

ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್‌ ಹಿನ್ನೆಲೆಯಲ್ಲಿ ಶುಲ್ಕ ಏರಿಕೆ ಮಾಡಿಲ್ಲ. ಆ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರು ಹಾಗೂ ಸಿಬ್ಬಂದಿಗೆ ಸಂಬಳ ನೀಡಿದ್ದು ನಷ್ಟದಲ್ಲಿದ್ದೇವೆ ಎಂಬ ನೆಪವೊಡ್ಡಿದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮಿತಿಮೀರಿ ಅಂದರೆ ಶೇ. 30ರಷ್ಟುಶಾಲಾ ಶುಲ್ಕ ಏರಿಕೆ ಮಾಡಿ ತಾವೇ ತೀರ್ಮಾನ ಕೈಗೊಂಡಿವೆ. ದೊಡ್ಡ ಸಂಬಳ ಹಾಗೂ ಲಾಭದಾಯಕ ವ್ಯಾಪಾರ-ವ್ಯವಹಾರದ ಪಾಲಕರಿಗೆ ಇದು ಹೊರೆ ಎನಿಸದೇ ಇದ್ದರೂ, ತಮ್ಮ ಮಕ್ಕಳು ಸಹ ದೊಡ್ಡ ಶಾಲೆಯಲ್ಲಿ ಕಲಿಯಬೇಕು ಎಂಬ ಆಸೆ ಹೊಂದಿದ ಮಧ್ಯಮ ಹಾಗೂ ಕೆಳ ವರ್ಗದ ಪಾಲಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕೆಲವು ಖಾಸಗಿ ಶಾಲೆಗಳ ಮುಂದಿನ ವರ್ಷದ ಶುಲ್ಕ ಪಟ್ಟಿಗಮನಿಸಿದರೆ ಅಂದಾಜು ಒಂದು ಮಗುವಿಗೆ .7-8 ಸಾವಿರ ಏರಿಕೆ ಮಾಡಿದ್ದು, ಒಂದೇ ಮನೆಯ ಇಬ್ಬರೂ ಮಕ್ಕಳಿಗೆ .15 ಸಾವಿರ ಹೆಚ್ಚುವರಿ ಶುಲ್ಕ ಕಟ್ಟುವುದು ಕಷ್ಟಕರ.

ನಮ್ಮ ಇಬ್ಬರೂ ಮಕ್ಕಳೂ ಧಾರವಾಡದ ಪ್ರತಿಷ್ಠಿತ ಶಾಲೆಗೆ ಹೋಗುತ್ತಿದ್ದಾರೆ. ಇತ್ತೀಚೆಗೆ ಶಾಲಾ ಶಿಕ್ಷಕರು ಫಲಿತಾಂಶ ನೀಡುವ ನೆಪದಲ್ಲಿ ಪಾಲಕರ ಸಭೆ ನಡೆಸಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನೂ ತಿಳಿಸಿ ಕೊನೆಗೆ ಶುಲ್ಕದ ಹೊರೆಯನ್ನು ಹೊರೆಯಿಸಿದ್ದಾರೆ. ಇಬ್ಬರೂ ಮಕ್ಕಳ ಶುಲ್ಕ ಈಗಾಗಲೇ ಹೆಚ್ಚಾಗಿದೆ. ಅದರೊಂದಿಗೆ ಹೆಚ್ಚುವರಿ .15-20 ಸಾವಿರ ಹೆಚ್ಚುವರಿ ತುಂಬುವುದು ಕಷ್ಟಸಾಧ್ಯ. ಶಾಲಾ ಶುಲ್ಕದ ಜತೆಗೆ ಪಠ್ಯ-ಪುಸ್ತಕ, ಸಮವಸ್ತ್ರ, ಶಾಲಾ ವಾಹನ, ಇತರ ಚಟುವಟಿಕೆಗಳಿಗಾಗಿ ಒಬ್ಬ ಮಗನಿಗೆ ವಾರ್ಷಿಕ .1 ಲಕ್ಷ ವೆಚ್ಚವಾಗುತ್ತಿದೆ. ಆದ್ದರಿಂದ ಶಾಲಾ ಶುಲ್ಕ ಏರಿಕೆ ವಿಷಯದಲ್ಲಿ ಶಾಲಾ ಪಾಲಕರ ಸಭೆ ಕರೆದು ತೀರ್ಮಾನ ಮಾಡಬೇಕು. ಈ ಬಗ್ಗೆ ಶಿಕ್ಷಣ ಇಲಾಖೆ ಇಂತಹ ಮಿತಿಮೀರಿದ ಶುಲ್ಕ ಏರಿಕೆ ಬಗ್ಗೆ ಕಡಿವಾಣ ಹಾಕಬೇಕು ಎಂಬುದು ಪಾಲಕರಾದ ಗುರುರಾಜ ಪಾಟೀಲ ಆಗ್ರಹ.

ಹು-ಧಾ ಅವಳಿ ನಗರದಲ್ಲಿ ಕೆಲವೇ ಕೆಲವು ಖಾಸಗಿ ಸಂಸ್ಥೆಗಳಿಂದ ಲಕ್ಷಗಟ್ಟಲೇ ಡೋನೇಶನ್‌ ಹಾಗೂ ಶುಲ್ಕದ ವಸೂಲಿ ನಡೆಯುತ್ತಿದೆ. ಬಹುತೇಕ ಖಾಸಗಿ ಸಂಸ್ಥೆಗಳು ತಮ್ಮ ಖರ್ಚು-ವೆಚ್ಚ ನೀಗಿಸಿಕೊಂಡು ಸಾಧಾರಣ ಪ್ರಮಾಣದಲ್ಲಿ ಶುಲ್ಕ ವಸೂಲಿ ಮಾಡುತ್ತಿದ್ದು, ಪ್ರತಿಷ್ಠಿತ ಎನಿಸಿದ ಶಾಲೆಗಳಿಂದ ಪಾಲಕರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹಣವುಳ್ಳವರು ಎಷ್ಟೇ ಪ್ರಮಾಣದಲ್ಲಿ ಶುಲ್ಕ ಏರಿಸಿದರೂ ಮರು ಮಾತನಾಡದೇ ಶುಲ್ಕ ತುಂಬತ್ತಾರೆ. ಆದರೆ, ನಮ್ಮ ಮಕ್ಕಳು ದೊಡ್ಡ ಶಾಲೆಯಲ್ಲಿ ಕಲೀಬೇಕು ಎಂದುಕೊಂಡ ಮಧ್ಯಮ ವರ್ಗದ ಪಾಲಕರು ತೊಂದೆರೆಗೆ ಒಳಗಾಗಬೇಕಾಗುತ್ತದೆ. ಶಾಲೆಯ ವಿರುದ್ಧವೂ ಮಾತನಾಡದೇ, ಶುಲ್ಕವನ್ನೂ ತುಂಬಲಾಗದೇ ಪರದಾಡುವುದು ಪ್ರತಿ ವರ್ಷದ ಸಾಮಾನ್ಯ ಪರಿಸ್ಥಿತಿ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸ್ವಯಂ ಪ್ರೇರಿತವಾಗಿ ಶಾಲಾ ಶುಲ್ಕದ ಏರಿಕೆ ಬಗ್ಗೆ ಶಿಕ್ಷಣ ಸಂಸ್ಥೆಗಳ ಸಭೆ ಕರೆದು ಪಾಲಕರ ಆರ್ಥಿಕತೆಗೆ ಪೆಟ್ಟು ಬೀಳದಂತೆ ಶುಲ್ಕ ಏರಿಸಬೇಕೆಂಬ ತಾಕೀತು ಮಾಡಬೇಕಿದೆ.

ಶೇ.15ರಷ್ಟು ಶುಲ್ಕ ಏರಿಕೆಗೆ ಖಾಸಗಿ ಶಾಲೆಗಳ ನಿರ್ಧಾರ: ಶೇ.5ರಿಂದ ಶೇ.15 ಹೆಚ್ಚುವರಿ ಹೊರೆ ಸಂಭವ

ಕೋವಿಡ್‌ನ ಆರ್ಥಿಕ ಹೊಡೆತದಿಂದ ಖಾಸಗಿ ಶಾಲೆಗಳು ಜರ್ಝರಿತವಾಗಿವೆ ನಿಜ. ಆದರೆ, ಈ ನೆಪದಲ್ಲಿ ಅವೈಜ್ಞಾನಿಕವಾಗಿ ಶಾಲಾ ಶುಲ್ಕ ಏರಿಕೆ ಮಾಡುವುದು ತಪ್ಪು. ಈ ಬಗ್ಗೆ ಪಾಲಕರ ಸಭೆ ನಡೆಸಿ ಶೇ. 5ರಿಂದ 10ರಷ್ಟುಶಾಲಾ ಶುಲ್ಕ ಮಾಡುವುದು ಒಳಿತು. ಏಕಾಏಕಿ ಅತಿರೇಕದ ಶುಲ್ಕ ಏರಿಕೆ ಮಾಡುವುದರಿಂದ ಪಾಲಕರಿಗೆ ಆರ್ಥಿಕ ತೊಂದರೆಯಾಗುತ್ತದೆ.

ಶಂಕರ ಹಲಗತ್ತಿ, ಅನುದಾನರಹಿತ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷರು

click me!