Bandipur: ಅರಣ್ಯ ಸಿಬ್ಬಂದಿ ಜೀಪಿನ ಮೇಲೆ ಕಾಡಾನೆ ದಾಳಿ, ನಾಲ್ವರು ಪಾರು

By Kannadaprabha News  |  First Published Jan 8, 2022, 7:37 AM IST

*  ಕಾಡಾನೆ ಹಾವಳಿ ತಡೆಗೆ ರೈತರ ಆಗ್ರಹ
*  ಆರ್‌ಎಫ್‌ಒ ಕಚೇರಿಯಲ್ಲಿ ಉಳಿಯುತ್ತಿಲ್ಲ
*  ಬೆಳೆ ಹಾನಿ ಆರ್‌ಎಫ್‌ಓಗೆ ದಿಗ್ಬಂಧನ
 


ಗುಂಡ್ಲುಪೇಟೆ(ಜ.08): ಕುರುಬರಹುಂಡಿ ಗ್ರಾಮದ ಬಳಿ ರೈತರ ಜಮೀನಿಗೆ ಕಾಡಾನೆಗಳು ಬರದಂತೆ ಕಾವಲು ಕಾಯುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದ ಜೀಪಿನ ಮೇಲೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ(Bandipur Tiger Reserve And National Park) ಓಂಕಾರ ವಲಯದಲ್ಲಿ ಸಲಗ(Elephant) ದಾಳಿ(Attack) ನಡೆಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಅರಣ್ಯ ಇಲಾಖೆಗೆ(Forest Department) ಸೇರಿದ ಜೀಪನ್ನು ಕಂಡ ಕಾಡಾನೆ ರೊಚ್ಚಿಗೆದ್ದು ಜೀಪನ್ನು ಕೊಂಬಿನಿಂದ ಮೇಲೆತ್ತಿ ಉರುಳಿಸಿದೆ. ಜೀಪು ಉರುಳಿ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಷಾತ್‌ ಜೀಪಲ್ಲಿದ್ದ ನಾಲ್ವರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಡಾನೆ ದಾಳಿಗೆ ಜೀಪ್‌ ಪಲ್ಟಿ ಹೊಡೆದಾಗ ಸದ್ದಿಗೆ ಕಾಡಾನೆ ಓಡಿ ಹೋಗಿದೆ. ಇಲ್ಲದಿದ್ದಲ್ಲಿ ಜೀಪಲ್ಲಿದ್ದ ನಾಲ್ವರು ಸಿಬ್ಬಂದಿ ಮೇಲೆ ದಾಳಿ ಮಾಡುವ ಸಾಧ್ಯತೆ ಮೇಲೆ ಹೆಚ್ಚಿತ್ತು ಎನ್ನಲಾಗುತ್ತಿದೆ.

Tap to resize

Latest Videos

undefined

Elephant attack: ಬೈಕ್ ಅಥವಾ ಲೈಫ್..! ದಾಳಿ ಮಾಡೋಕೆ ಬಂದ ಆನೆಯಿಂದ ಬಚಾವಾಗಿದ್ದು ಹೇಗೆ ?

ಮತ್ತೆ ಬಂದ ಆನೆ: 

ಜೀಪಿನೊಳಗಿದ್ದ(Jeep) ನಾಲ್ವರು ಸವರಿಸಿಕೊಂಡ ಜೀಪಿನಿಂದ ಮೇಲೆ ಬರುವುದನ್ನು ಕಂಡ ಕಾಡಾನೆ ಮತ್ತೆ ದಾಳಿ ನಡೆಸಲು ಪ್ರಯತ್ನ ಕಂಡು ಸಿಬ್ಬಂದಿ ಸನಿಹದಲ್ಲಿದ್ದ ಕಂದಕಕ್ಕೆ ಓಡಿ ಹೋಗಿದ್ದಾರೆ. ಜಮೀನಿನಲ್ಲಿದ್ದ(Land) ಆನೆಯನ್ನು ಕಾಡಿನತ್ತ ಓಡಿಸಲು ಜೀಪಿನಲ್ಲಿದ್ದ ಡಿಆರ್‌ಎಫ್‌ಒ(DRFO) ಹಾಗೂ ಸಿಬ್ಬಂದಿ ಜೀವ ಉಳಿಸಿಕೊಂಡಿದ್ದಾರೆ. ರೈತರು(Farmers) ಮಾತ್ರ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಓಂಕಾರ ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್‌ ಓಂಕಾರ ಕಚೇರಿಯಲ್ಲಿ(Office) ಉಳಿಯುತ್ತಿಲ್ಲ ಎಂದು ಕುರುಬರಹುಂಡಿ ಗ್ರಾಮದ ರೈತರು ಆರೋಪ(Allegation) ಮಾಡಿದ್ದು, ಕಚೇರಿಯಲ್ಲಿ ರಾತ್ರಿ ಇರಲಿ ಎಂದು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಗುಂಡ್ಲುಪೇಟೆ: ಓಂಕಾರ ವಲಯದಲ್ಲಿ ಕಾಡಾನೆಗಳ(Wild Elephant) ಹಾವಳಿ ಕಳೆದ ಒಂದು ವಾರದಿಂದ ಹೆಚ್ಚಿದ್ದು, ಕುರುಬರಹುಂಡಿ ಗ್ರಾಮದ ಹಲವು ರೈತರ ಫಸಲನ್ನು ನಾಶಪಡಿಸಿದೆ. ಓಂಕಾರ ವಲಯದಂಚಿನಲ್ಲಿರುವ ಕಂದಕಕ್ಕೆ ಮಣ್ಣು ತುಂಬಿಕೊಂಡಿರುವ ಕಾರಣ ಹಾಗೂ ರೇಲ್ವೇ ಕಂಬಿ ಅಡಿ ನುಸುಳಿ ಬರುತ್ತಿವೆ ಎಂದು ರೈತರು ದೂರಿದ್ದಾರೆ.

ಶುಕ್ರವಾರ ಕಾಯಲು ಕಾಯುತ್ತಿದ್ದ ಜೀಪಿನ ಮೇಲೆ ಸಲಗ ದಾಳಿ ಮಾಡಿದೆ. ಇದು ಈ ಭಾಗದ ರೈತರಲ್ಲಿ ಆತಂಕ ತಂದಿದ್ದು ರೈತರು ಜಮೀನಿಗೆ ತೆರಳಲು ಹೆದರುತ್ತಿದ್ದಾರೆ ಎಂದು ಜಯ ಹೇಳಿದ್ದಾರೆ. ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಆರ್‌ಎಫ್‌ಒ ಕೇಂದ್ರ ಸ್ಥಾನದಲ್ಲಿದ್ದು ಕಾಡಾನೆ ಹಾವಳಿಗೆ ತಡೆ ಹಾಕಲಿ ಎಂದು ಕೆ.ಜಿ.ಮಹೇಶ್‌ ಒತ್ತಾಯಿಸಿದ್ದಾರೆ.

ಸಫಾರಿ ಹೋದ ಪ್ರವಾಸಿಗರಿಗೆ ಡಬಲ್ ಎಲಿಫೆಂಟ್ ಆಟ್ಯಾಕ್!

ಬೆಳೆ ಹಾನಿ ಆರ್‌ಎಫ್‌ಓಗೆ ದಿಗ್ಬಂಧನ

ಚಾಮರಾಜನಗರ(Chamarajanagar): ಬಿಆರ್‌ಟಿ ಹುಲಿ ರಕ್ಷಿತಾರಣ್ಯ ಕಾಡಂಚಿನ ಜಮೀನುಗಳಿಗೆ ನುಗ್ಗಿ ಫಸಲು(Crop) ನಾಶ ಮಾಡಿದ ಹಿನ್ನೆಲೆ ಗುಂಬಳ್ಳಿ ಚೆಕ್‌ ಪೋಸ್ಟ್‌ ಗೆ ಮುತ್ತಿಗೆ ಹಾಕಿದ ರೈತರು ಬಿಳಿಗಿರಿರಂಗನ ಬೆಟ್ಟದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಆರ್‌.ಎಫ್‌.ಒ ಲೋಕೇಶ್‌ ಮೂರ್ತಿಗೆ ದಿಗ್ಭಂದನ ವಿಧಿಸಿದ ರೈತರು, ಜಮೀನಿನಲ್ಲಿ ಆನೆ ಸತ್ತರೆ ನಮ್ಮನ್ನ ಜೈಲಿಗೆ ಹಾಕ್ತೀರಿ ನಿಮ್ಮ ಆನೆಗಳು ಜಮೀನಿಗೆ ಬಾರದಂತೆ ಯಾಕೆ ಕ್ರಮವಹಿಸಿಲ್ಲ ಎಂದು ತರಾಟೆ ತೆಗೆದುಕೊಂಡರು. 

ಸ್ಥಳಕ್ಕಾಗಮಿಸಿದ ಯಳಂದೂರು ಪೊಲೀಸರಿಂದ(Police) ಪರಿಸ್ಥಿತಿ ನಿಯಂತ್ರಣ ಮಾಡಿದರು. ಸ್ಥಳಕ್ಕೆ ಡಿಎಫ್‌ಒ ಆಗಮಿಸಬೇಕೆಂದು ಪಟ್ಟು ಹಿಡಿದ ವಡಗೆರೆ ಗ್ರಾಮಸ್ಥರು(Villagers) ಗುರುವಾರ ರಾತ್ರಿ ಆನೆ ದಾಳಿಯಿಂದಾಗಿ 20 ಎಕರೆ ಕಬ್ಬು ನಾಶವಾಗಿದೆ ಎಂದು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 

click me!