Weekend Curfew: 'ಅನಗತ್ಯವಾಗಿ ರಸ್ತೆಗಿಳಿದ್ರೆ ಅರೆಸ್ಟ್‌'

By Kannadaprabha NewsFirst Published Jan 8, 2022, 7:07 AM IST
Highlights

*  ವೀಕೆಂಡ್‌ ಕರ್ಫ್ಯೂ ವೇಳೆ ಕುಂಟು ನೆಪವೇಳಿ ಸಂಚಾರಿಸಿದರೆ ಕಠಿಣ ಕ್ರಮ
*  ಪೊಲೀಸ್‌ ಬಿಗಿ ತಪಾಸಣೆ ಶುರು
*  ಸರ್ಕಾರದ ಆದೇಶವನ್ನು ಎಲ್ಲರೂ ಗೌರವಿಸಬೇಕು

ಬೆಂಗಳೂರು(ಜ.08): ವೀಕೆಂಡ್‌ ಕರ್ಫ್ಯೂ(Weekend Curfew) ವೇಳೆ ಅನಗತ್ಯವಾಗಿ ರಸ್ತೆಗಿಳಿಯುವವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬಂಧಿಸುವುದಾಗಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌(Kaml Pant) ಎಚ್ಚರಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ(Coronavirus) ನಿಯಂತ್ರಣ ಸಂಬಂಧ ನಾಗರಿಕರ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ(Government of Karnataka) ನಗರದಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5ರ ತನಕ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸರ್ಕಾರದ ಆದೇಶವನ್ನು ಎಲ್ಲರೂ ಗೌರವಿಸಬೇಕು. ತುರ್ತು ಹಾಗೂ ಅಗತ್ಯ ವಲಯಗಳಿಗೆ ಕರ್ಫ್ಯೂ ವೇಳೆ ಸಂಚಾರಕ್ಕೆ ವಿನಾಯಿತಿ ನೀಡಲಾಗಿದೆ. ಹಾಗೆಂದು ಅನಗತ್ಯವಾಗಿ ರಸ್ತೆಗಿಳಿದರೆ ವಿಪತ್ತು ನಿರ್ವಹಣೆ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಿಗಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವುದಾಗಿ ತಿಳಿಸಿದರು.

Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಬಿಡಲಿ

ಹೋಟೆಲ್‌ಗಳಲ್ಲಿ ಊಟ, ತಿಂಡಿ ಪಾರ್ಸೆಲ್‌ ಹಾಗೂ ಹೋಂ ಡೆಲಿವರಿಗೆ ಅವಕಾಶವಿದೆ. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಮನೆಯಿಂದ ಹೊರಬಂದು ಕಾಲಹರಣ ಮಾಡಿದರೆ ಅಂತಹವರ ವಿರುದ್ಧವೂ ನಿರ್ದಾಕ್ಷ್ಯಿಣ್ಯ ಕ್ರಮ ಜರುಗಿಸಲಾಗುವುದು. ಪ್ರಮುಖ ಜಂಕ್ಷನ್‌, ವೃತ್ತಗಳಲ್ಲಿ ಪೊಲೀಸ್‌(Police) ವಾಹನಗಳು, ಬಿಎಂಟಿಸಿ ಬಸ್‌ಗಳು ಇರಲಿವೆ. ಅನಗತ್ಯವಾಗಿ ಓಡಾಡುವುದು ಕಂಡು ಬಂದರೆ ತಕ್ಷಣ ಅವರನ್ನು ಬಂಧಿಸಲಾಗುವುದು. ವಾಹನಗಳನ್ನು ಜಪ್ತಿ ಮಾಡಿ ದಂಡ ವಿಧಿಸುವುದಾಗಿ ಹೇಳಿದರು.

ಪೊಲೀಸ್‌ ಬಿಗಿ ತಪಾಸಣೆ ಶುರು

ನಗರದ ಆಯಾ ವಿಭಾಗದ ಪೊಲೀಸರು ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ಪ್ರಮುಖ ಸ್ಥಳಗಳು, ರಸ್ತೆಗಳು, ವೃತ್ತಗಳು ಹಾಗೂ ಜಂಕ್ಷನ್‌ಗಳಲ್ಲಿ ನಾಕಾಬಂದಿ ಹಾಕಿ ಪ್ರತಿ ವಾಹನ ತಪಾಸಣೆ ನಡೆಸಿದರು.
ಸೂಕ್ತ ದಾಖಲೆ ಇಲ್ಲದೆ ಓಡಾಡುವವರ ವಾಹನಗಳನ್ನು ವಶಕ್ಕೆ ಪಡೆದರು. ಅಗತ್ಯತೆ ನೋಡಿಕೊಂಡು ನಗರದ ಹಲವೆಡೆ ಫ್ಲೈಓವರ್‌ಗಳನ್ನು ಬಂದ್‌ ಮಾಡಲಾಯಿತು.

Weekend Curfew ವೀಕೆಂಡ್‌ ಕರ್ಫ್ಯೂ ವೇಳೆ ಬಸ್‌, ಮೆಟ್ರೊ ಸಂಚಾರ ಇರುತ್ತಾ? ಹೊಸ ರೂಲ್ಸ್ ಇಲ್ಲಿದೆ

ಅನಗತ್ಯವಾಗಿ ರಸ್ತೆಗಿಳಿದವರ ಮೇಲೆ ಕ್ರಿಮಿನಲ್‌ ಕೇಸ್‌!

ಬೆಂಗಳೂರು(Bengaluru) ನಗರದಲ್ಲಿ ವಾರಾಂತ್ಯ ಕರ್ಫ್ಯೂ ವೇಳೆ ಸಂಚಾರಕ್ಕೆ ‘ಪೊಲೀಸ್‌ ಪಾಸ್‌’ ವಿತರಣೆ ಮಾಡುವುದಿಲ್ಲ. ಸರ್ಕಾರ ನೀಡಿರುವ ವಲಯಗಳಿಗೆ ವಿನಾಯ್ತಿ ಹೊರತುಪಡಿಸಿದರೆ ಬೇರೆ ಯಾರಿಗೂ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸ್ಪಷ್ಟಪಡಿಸಿದ್ದಾರೆ.

ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕಫ್ರ್ಯೂ ಅನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತದೆ. ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಕ್ರಿಮಿನಲ್ ಕೇಸ್‌‌ (Criminal Case) ದಾಖಲಿಸಲಾಗುತ್ತದೆ, ದಿನಸಿ ಅಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಹಾಗೆಂದು ಸಿಕ್ಕ-ಸಿಕ್ಕ ಕಡೆಗಳಲ್ಲಿ ಓಡಾಡುವಂತಿಲ್ಲ. ಅಗತ್ಯ ಸೇವೆ​ಯ​ವರು ಗುರು​ತಿನ ಚೀಟಿ, ಸೂಕ್ತ ದಾಖ​ಲೆ​ಗ​ಳನ್ನು ತಮ್ಮೊಂದಿಗೆ ಇಟ್ಟು​ಕೊಂಡು ಸಂಚ​ರಿ​ಸ​ಬೇಕು. ಇಲ್ಲ​ವಾ​ದಲ್ಲಿ ಪ್ರಕ​ರಣ ದಾಖ​ಲಿ​ಸಿ​ಕೊಂಡು, ದಂಡ ವಿಧಿ​ಸು​ವು​ದರ ಜತೆಗೆ ವಾಹನ ಜಪ್ತಿ ಮಾಡ​ಲಾ​ಗು​ತ್ತದೆ ಎಂದು ಎಚ್ಚರಿಸಿದರು.

ಯಾವುದೇ ಪಾಸ್‌ ಇಲ್ಲ:

ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಓಡಾಡಲು ನಾಗರಿಕರಿಗೆ ಪೊಲೀಸ್‌ ಇಲಾಖೆಯಿಂದ ಯಾವುದೇ ಪಾಸ್‌ ನೀಡುವುದಿಲ್ಲ. ವಿನಾಯ್ತಿ ಇರುವವರು ದಾಖಲೆ ತೋರಿಸಿ ಓಡಾಡಬಹುದು. ವಾರಾಂತ್ಯದಲ್ಲಿ ಸರ್ಕಾರದ ವಿನಾಯ್ತಿ ವಲಯ ಹೊರತುಪಡಿಸಿದರೆ ಇನ್ನುಳಿದ ಎಲ್ಲ ವಹಿವಾಟು ಸಂಪೂರ್ಣ ಬಂದ್‌ ಆಗಲಿದೆ ಎಂದು ಆಯುಕ್ತರು ಹೇಳಿದರು.ಕೊರೋನಾ ಸೋಂಕು ಹರಡುವಿಕೆಗೆ ತಡೆಗಟ್ಟಲು ಸರ್ಕಾರದ ಸೂಚನೆ, ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ. ವಾರಾಂತ್ಯದ ಕಪ್ರ್ಯೂ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಡಿಸಿಪಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
 

click me!