Covid Crisis : ಆಘಾತಕಾರಿ ಅಂಶ: ಮಕ್ಕಳೇ ಕೊರೋನಾ 3ನೇ ಅಲೆಯ ಟಾರ್ಗೆಟ್‌?

By Kannadaprabha News  |  First Published Jan 8, 2022, 6:39 AM IST

*  10 ಪಟ್ಟು ಸೋಂಕು ಹೆಚ್ಚಳ
*  ಶಾಲೆ ಬಂದ್‌ಗೆ ಕಾರಣ ಇದೇನಾ?
*  ಆಘಾತಕಾರಿ ಅಂಶ: ಒಂದೇ ವಾರದಲ್ಲಿ 2628 ಮಕ್ಕಳಿಗೆ ಸೋಂಕು 
 


ಸಂಪತ್‌ ತರೀಕೆರೆ

ಬೆಂಗಳೂರು(ಜ.08): ರಾಜಧಾನಿಯಲ್ಲಿ ಹೊಸ ವರ್ಷದಿಂದೀಚೆಗೆ ನಿತ್ಯ ಸರಾಸರಿ 375ಕ್ಕೂ ಹೆಚ್ಚು ಮಕ್ಕಳು(Childrens) ಕೊರೋನಾ(Coronavirus) ಸೋಂಕಿತರಾಗಿದ್ದಾರೆ. ಈ ಮೂಲಕ ಲಸಿಕೆ(Vaccine) ಪಡೆಯದ ಮಕ್ಕಳೇ ಕೋವಿಡ್‌ ಮೂರನೇ ಅಲೆಯ(Covid 3rd Wave) ಟಾರ್ಗೆಟ್‌ ಎಂಬ ಅನುಮಾನಗಳು ಮೂಡಿವೆ. ಜನವರಿ 1ರಿಂದ 7ರ ವರೆಗೆ 19 ವರ್ಷದೊಳಗಿನ ಬರೋಬ್ಬರಿ 2628 ಮಕ್ಕಳಲ್ಲಿ ಕೋವಿಡ್‌(Covid19) ಸೋಂಕು ಪತ್ತೆಯಾಗಿದೆ. ಈ ಪೈಕಿ 571 ಮಕ್ಕಳು 9 ವರ್ಷದೊಳಗಿನವರು ಆಗಿದ್ದರೆ, 2057 ಮಕ್ಕಳು 19 ವರ್ಷದೊಳಗಿನವರಾಗಿದ್ದಾರೆ. ಇವರಲ್ಲಿ 1311 ಹೆಣ್ಣು, 1317 ಗಂಡು ಮಕ್ಕಳಾಗಿದ್ದಾರೆ.

Tap to resize

Latest Videos

ಹೊಸವರ್ಷದ ಮೊದಲ ಮೂರು ದಿನ ನಿತ್ಯ 100 ರಿಂದ 150 ಮಕ್ಕಳಲ್ಲಿ ಮಾತ್ರ ಸೋಂಕು ಪತ್ತೆಯಾಗಿತ್ತು. ಆದರೆ ಜ.3ರಿಂದ ಈ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ನಿತ್ಯ 300ಕ್ಕೂ ಹೆಚ್ಚು ಮಕ್ಕಳು ಸೋಂಕಿತರಾಗುತ್ತಿದ್ದಾರೆ. ಬಿಬಿಎಂಪಿ(BBMP) ವರದಿಯಂತೆ ಶುಕ್ರವಾರ ಒಂದೇ ದಿನ 19 ವರ್ಷದೊಳಗಿನ 934 ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

Covid-19 Vaccine: ಮಕ್ಕಳ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಚಾಲನೆ

ಸೋಂಕಿತ ಬಹುತೇಕ ಮಕ್ಕಳಲ್ಲಿ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳನ್ನು ಹೊಂದಿಲ್ಲ. ಹೋಂ ಐಸೋಲೇಷನ್‌ನಲ್ಲಿಯೇ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ಯಾವುದೇ ಸೋಂಕಿತ ಮಗು ಸಾವಿಗೀಡಾಗಿಲ್ಲ. ಅನಗತ್ಯ ಗಾಬರಿಯಾಗುವ ಅಗತ್ಯತೆ ಇಲ್ಲ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಶೇ.14ರಷ್ಟು ಮಕ್ಕಳು:

ಜ.1ರಿಂದ 7ರ ವರೆಗೆ ರಾಜಧಾನಿಯಲ್ಲಿ 19,568 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ(Karnataka) ಇದೇ ಅವಧಿಯಲ್ಲಿ 24 ಸಾವಿರ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟಾರೆ ಪ್ರಕರಣಗಳ ಪೈಕಿ ಶೇ.75ರಷ್ಟು ಬೆಂಗಳೂರಿನಲ್ಲಿಯೇ(Bengaluru) ವರದಿಯಾಗಿವೆ. ಅಲ್ಲದೆ, ಬೆಂಗಳೂರಿನ ಸೋಂಕಿತರದಲ್ಲಿ ಮಕ್ಕಳ ಸಂಖ್ಯೆ ಶೇ.14ರಷ್ಟಿದೆ.

ಶಾಲೆ ಬಂದ್‌ಗೆ ಕಾರಣ ಇದೇನಾ?

ರಾಜ್ಯಾದ್ಯಂತ ಶಾಲಾ-ಕಾಲೇಜುಗಳು(School-Colleges) ತೆರೆದಿದ್ದರೂ ಬೆಂಗಳೂರಿನಲ್ಲಿ ಮಾತ್ರ ಬಂದ್‌ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ(Government of Karnataka) ಕೈಗೊಂಡಿರುವುದು ಇದೇ ಕಾರಣಕ್ಕೆ ಎನ್ನಲಾಗಿದೆ. ಹೊಸ ವರ್ಷದ ಆರಂಭದಲ್ಲೇ ಮಕ್ಕಳಲ್ಲಿ ಅದರಲ್ಲೂ ಶಾಲಾ ಮಕ್ಕಳಲ್ಲಿ ಸೋಂಕು ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿತ್ತು. ಒಂದು ವೇಳೆ ಶಾಲೆ ಬಂದ್‌ ಮಾಡದಿದ್ದರೆ ಮಕ್ಕಳಲ್ಲಿ ಸೋಂಕು ಇನ್ನೂ ಹೆಚ್ಚು ಹರಡಲು ಕಾರಣವಾಗುತ್ತಿತ್ತು. ಹೀಗಾಗಿ ಎರಡು ವಾರಗಳ ಲಸಿಕೆ ಪಡೆಯಲಿದ್ದ 10, 11 ಮತ್ತು 12 ನೇ ತರಗತಿಗಳನ್ನು ಹೊರತುಪಡಿಸಿ ಶಾಲಾ, ಕಾಲೇಜುಗಳನ್ನು ಬಂದ್‌ ಮಾಡಲು ತಜ್ಞರು ಸಲಹೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

Covid Vaccination : ರಾಜ್ಯದಲ್ಲಿ 6.38 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

10 ಪಟ್ಟು ಸೋಂಕು ಹೆಚ್ಚಳ

ಡಿ.31ರಂದು ಸೋಂಕು ಪ್ರಕರಣಗಳು 656 ಇದ್ದವು. ಶುಕ್ರವಾರಕ್ಕೆ ಆರೂವರೆ ಸಾವಿರ ಗಡಿ ದಾಟಿವೆ. ಒಂದೇ ವಾರಕ್ಕೆ ಬರೋಬ್ಬರಿ 10 ಪಟ್ಟು ಸೋಂಕು ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದ ಏಳು ಸಾವಿರ ಆಸುಪಾಸಿನಲ್ಲಿದ್ದ ಸಕ್ರಿಯ ಸೋಂಕು ಪ್ರಕರಣಗಳು ಸದ್ಯ 25 ಸಾವಿರ ಗಡಿದಾಟಿದೆ. ದೇಶದ(India) ಮಹಾನಗರಗಳ ಪೈಕಿ ಮುಂಬೈ(Mumbai) ಮೊದಲ ಸ್ಥಾನದಲ್ಲಿದ್ದರೆ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ಕೊರೊನಾ ಲಸಿಕೆ ಪಡೆದ ಮಕ್ಕಳಲ್ಲಿ ಈ ಲಕ್ಷಣ ಕಾಣಿಸಿಕೊಂಡ್ರೆ ನಿರ್ಲಕ್ಷ್ಯ ಬೇಡ

ಜನವರಿ ಐದರಿಂದ 15 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಆರಂಭದಲ್ಲಿ ಕೊರೊನಾ ಲಸಿಕೆ ಹಾಕುವಾಗ ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಈಗ ವಯಸ್ಕರು ಯಾವುದೇ ಭಯವಿಲ್ಲದೆ ಲಸಿಕೆ ಪಡೆಯುತ್ತಿದ್ದಾರೆ. ಆದ್ರೆ ಮಕ್ಕಳಿಗೆ ಲಸಿಕೆ ಹಾಕಲು ಅನೇಕ ಪಾಲಕರು ಹಿಂದೇಟು ಹಾಕ್ತಿದ್ದಾರೆ. ಇದಕ್ಕೆ ಕಾರಣ ಲಸಿಕೆಯ ಸೈಡ್ ಇಫೆಕ್ಟ್.ಆದ್ರೆ ಇದಕ್ಕೆ ಭಯಪಡಬೇಕಾಗಿಲ್ಲ. ವಯಸ್ಕರಂತೆ ಮಕ್ಕಳಿಗೂ ವ್ಯಾಕ್ಸಿನೇಷನ್ ನಂತರ ಕೆಲವು ಸೌಮ್ಯ ಅಡ್ಡ ಪರಿಣಾಮ ಕಾಣಿಸಿಕೊಳ್ತಿದೆ. ಈ ರೋಗಲಕ್ಷಣಗಳು ಸೌಮ್ಯವಾಗಿರುವ ಕಾರಣ ಪೋಷಕರು ಪ್ಯಾನಿಕ್ ಆಗಬೇಕಾಗಿಲ್ಲ.
 

click me!