ಮಹಾಪುರುಷರ ಪರಿಚಯಿಸುವ ಶಿಕ್ಷಣ ಅಗತ್ಯ: ಶಾಸಕ ಈಶ್ವರಪ್ಪ

By Kannadaprabha News  |  First Published Jan 20, 2023, 10:36 AM IST

ಸಮಾಜದಲ್ಲಿ ಸಾಧನೆ ಮಾಡಿದ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತಗೊಳಿಸದೇ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಇಂತಹ ಮಹಾನ್‌ ಪುರುಷರನ್ನು ಬಗ್ಗೆ ಪರಿಚಯ ನೀಡು​ವಂಥ ಶಿಕ್ಷಣವನ್ನು ನೀಡಬೇಕು ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.


ಶಿವಮೊಗ್ಗ (ಜ.20) : ಸಮಾಜದಲ್ಲಿ ಸಾಧನೆ ಮಾಡಿದ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತಗೊಳಿಸದೇ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಇಂತಹ ಮಹಾನ್‌ ಪುರುಷರನ್ನು ಬಗ್ಗೆ ಪರಿಚಯ ನೀಡು​ವಂಥ ಶಿಕ್ಷಣವನ್ನು ನೀಡಬೇಕು ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ರೆಡ್ಡಿ ಸಂಘಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ(Mahayogi Vemana Jayanti) ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಎಲ್ಲ ಮಹಾಪುರುಷರ ಪ್ರತಿನಿಧಿ ಮಹಾಯೋಗಿ ವೇಮನ. ಇಂತಹ ಮಹಾಪುರುಷರು ದೇಶ, ಕಾಲ, ಜಾತಿ, ಭಾಷೆ ಮೀರಿದವರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ನಾವೆಲ್ಲ ಮುನ್ನಡೆಯಬೇಕು ಎಂದರು.

Latest Videos

undefined

Shivamogga: ಸೊರಬ ಪುರಸಭೆ: .18.79 ಕೋಟಿ ಮೊತ್ತದ ಬಜೆಟ್‌ ಮಂಡನೆ

ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವ​ರ್‌, ತೆಲುಗಿನ ವೇಮನ, ಬುದ್ದ, ಬಸವಣ್ಣ ಅಂಬೇಡ್ಕರ್‌ ಅವ​ರಂಥ ಅನೇಕ ಮಹಾಪುರುಷರು ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತರಲ್ಲ. ಇಡೀ ಸಮಾಜಕ್ಕೆ ದಾರಿದೀಪ ಇವರು. ವೇಮನರು ಕೂಡ ನಮ್ಮ ಸಮಾಜದ ಹೆಮ್ಮೆಯ ಮಹಾಪುರುಷರಾಗಿದ್ದಾರೆ. ಇಂತ ಮಹಾಪುರುಷರ ತತ್ವ- ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡುವ ನಿಟ್ಟಿನಲ್ಲಿ ಉತ್ತಮ ಸಮಾಜವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಡಾ.ವೇಣುಗೋಪಾಲ ರೆಡ್ಡಿ ಕೆ.ಆರ್‌. ಅವ​ರು ಉಪನ್ಯಾಸದಲ್ಲಿ, ಮಹಾಯೋಗಿ ವೇಮನ ಉತ್ಕೃಷ್ಟಸಾಹಿತಿ. ರಾಜನ ಮಗನಾದ ಇವರು ಬಾಲ್ಯದಲ್ಲಿ ದಡ್ಡನಾಗಿ, ಯೌವನದಲ್ಲಿ ವಿಲಾಸಿ ಜೀವನ ನಡೆಸಿದ್ದರೂ ಒಂದು ಹಂತದಲ್ಲಿ ತಮ್ಮ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮರ ಪ್ರಭಾವದಿಂದ ವಿಲಾಸಿ ಜೀವನ ತೊರೆದು ಲೋಕ ಸಂಚಾಯಾಗಿ, ಸಂತನಾಗಿ ತಮ್ಮ ಅನುಭವನಗಳನ್ನು ವಚನ, ಸಾಹಿತ್ಯದ ಮೂಲಕ ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ತಮ್ಮ ತಪ್ಪನ್ನು ತಿದ್ದಿ ನಡೆಯುವ ಅವಶ್ಯಕತೆ ಇದೆ ಎಂದು ಸಾರಿದ್ದಾರೆ. ಸಮಾನತೆ, ಶಾಂತಿ, ಸೌಹಾರ್ದತೆ, ಸಹಬಾಳ್ವೆ ಎಲ್ಲವನ್ನು ನಾವು ಇವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಇವರ ಸುಮಾರು 15 ಸಾವಿರ ಪದ್ಯಗಳನ್ನು ಪ್ರಕಟಿಸಲಾಗಿದೆ. ಬ್ರಿಟಿಷ್‌ ಅಧಿಕಾರಿ ಸಿ.ಪಿ.ಬ್ರೌನ್‌ ಇವರನ್ನು ಪ್ರಪ್ರಥಮವಾಗಿ ಜಗತ್ತಿಗೆ ಪರಿಚಯಿಸಿದ್ದು, ಇವರ ಕಾವ್ಯಗಳು ಇಂಗ್ಲಿಷ್‌ ಮತ್ತು ಇತರೆ ಅನ್ಯದೇಶದ ಭಾಷೆಗಳಿಗೆ ಭಾಷಾಂತರಗೊಂಡಿವೆ ಎಂದು ಹೇಳಿದರು.

SHIMUL: ಶಿಮುಲ್‌ನಿಂದ ನಂದಿನಿ ಸಿಹಿ ಲಸ್ಸಿ ಮಾರುಕಟ್ಟೆಗೆ

ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್‌. ಹೊನ್ನಳ್ಳಿ ಮಾತನಾಡಿ, ಮಹಾಯೋಗಿ ವೇಮನರು ಓರ್ವ ಶ್ರೇಷ್ಠ ವಚನಕಾರರು. ವ್ಯಕ್ತಿತ್ವ ಬದಲಾವಣೆಗೊಂದು ನಿದರ್ಶನ ಎಂದರು. ಪಾಲಿಕೆ ಮೇಯರ್‌ ಎಸ್‌.ಶಿವಕುಮಾರ್‌, ಉಪ ಮೇಯರ್‌ ಲಕ್ಷಿ ್ಮೕ ನಾಯಕ್‌, ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಭೀಮಾ ರೆಡ್ಡೆ, ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಉಮೇಶ್‌ ಉಪಸ್ಥಿತರಿದ್ದರು.

click me!