ಮೆಗ್ಗಾನ್ ಅಸ್ಪತ್ರೆ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಂದ 10 ರಿಂದ 15 ರು. ವಸೂಲಿ ಮಾಡುತ್ತಿದ್ದು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆಯಿತು.
ಶಿವಮೊಗ್ಗ (ಜ.20) : ಮೆಗ್ಗಾನ್ ಅಸ್ಪತ್ರೆ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಂದ 10 ರಿಂದ 15 ರು. ವಸೂಲಿ ಮಾಡುತ್ತಿದ್ದು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆಯಿತು.
ಮೆಗ್ಗಾನ್ ಆಸ್ಪತ್ರೆ(Meggan Hospital)ಯ ಮಕ್ಕಳ ವಿಭಾಗದ ಮುಂದಿರುವ ಮಹಾನಗರ ಪಾಲಿಕೆ ವತಿಯಿಂದ ನಿರ್ಮಾಣಗೊಂಡ ಉಚಿತ ಶೌಚಾಲಯ(Free toilet) ಈಗ ವಿವಾದದ ಕೇಂದ್ರ ಬಿಂದುವಾಗಿದ್ದು, ಪ್ರತಿಯೊಬ್ಬರ ಬಳಿ 10 ರೂ. ವಸೂಲಿ ಮಾಡುತ್ತಿದ್ದು, ಮೆಗ್ಗಾನ್ ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ಈ ಬಗ್ಗೆ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಮೇಯರ್ ಶಿವಕುಮಾರ್(Mayor shivakumar) ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಲೋಕಾಯುಕ್ತ ನ್ಯಾ. ಪಾಟೀಲ್ ದಿಢೀರ್ ಭೇಟಿ, ಆಸ್ಪತ್ರೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ಪಾಲಿಕೆಯಿಂದ ನಿರ್ಮಾಣಗೊಂಡ ಈ ಸಾರ್ವಜನಿಕ ಶೌಚಾಲಯದ ಗುತ್ತಿಗೆ ಅವಧಿ ಮುಗಿದಿದ್ದು, ಸಂಪೂರ್ಣ ಉಚಿತವಾದ ಈ ಶೌಚಾಲಯಕ್ಕೆ 10 ರಿಂದ 15 ರೂ. ಸಂಗ್ರಹಿಸುತ್ತಿರುವುದನ್ನು ಸಾರ್ವಜನಿಕರು ಆಕ್ಷೇಪಿಸಿದ್ದರು. ಮೇಯರ್ ಸ್ಥಳಕ್ಕೆ ಭೇಟಿ ನೀಡಿದಾಗ ಸಮಸ್ಯೆ ಆನಾವರಣಗೊಂಡಿದೆ. ಪಾಲಿಕೆಯಿಂದ ಉಚಿತವಾಗಿ ಪಿನಾಯಿಲ್ ಸೇರಿದಂತೆ ನಿರ್ವಾಹಕರಿಗೆ ಸಂಬಳ ಕೂಡ ನೀಡಲಾಗುತ್ತಿದೆ. ಮತ್ತೆ ಏಕೆ ಸಾರ್ವಜನಿಕರಿಂದ ವಸೂಲಿ ಮಾಡುತ್ತಿದ್ದೀರಿ ಎಂದು ಮೇಯರ್ ಕೇಳಿದಾಗ ಪಾಲಿಕೆ ಸದಸ್ಯ ಹೆಸರಿನಲ್ಲಿ ಇನ್ಯಾರೋ ಬಂದು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂತು. ಆದರೆ, ಪಾಲಿಕೆಗೆ ಇದರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯಿಲ್ಲ.
ಹಿಂದೆ ಬಾಬು ಎನ್ನುವವರು ನಿರ್ವಹಿಸುತ್ತಿದ್ದರಂತೆ. ಟೆಂಡರ್ ಮುಗಿದ ಮೇಲೆ ಅವರು ಯಾರ ಬಳಿಯೂ ಹಣ ಪಡೆಯಬೇಡಿ ಎಂದು ಹೇಳಿದ್ದಾರಂತೆ. ಆದರೂ ಹಣ ಸಂಗ್ರಹ ಕಾರ್ಯ ನಿಂತಿಲ್ಲ. ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರೂ ಶೌಚಾಲಯ ನಿರ್ವಹಣೆ ಬಗ್ಗೆ ಕೇಳುವಾಗೇ ಇಲ್ಲ. ಈ ಶೌಚಾಲಯದ ಒಳಗೆ ಹೋಗಲು ಮೂಗು ಮುಚ್ಚಿಕೊಂಡೆ ಹೋಗಬೇಕು. ಸ್ವಚ್ಛತೆ ಎಂಬುದು ಇಲ್ಲಿ ಮರಿಚಿಕೆಯಾಗಿದೆ ಎಂದು ಸಾರ್ವಜನಿಕರು ದೂರಿದರು.
ಮೆಗ್ಗಾನ್ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಡಿಪ್ಲೋಮಾ ವಿದ್ಯಾರ್ಥಿನಿ..!
ಈ ಸಂದರ್ಭದಲ್ಲಿ ಉಪಮೇಯರ್ ಲಕ್ಷಿ ್ಮೕ ಶಂಕರ್ ನಾಯ್‌್ಕ, ಸೂಡಾ ಅಧ್ಯಕ್ಷರಾದ ನಾಗರಾಜ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜುನಾಥ್, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಆರತಿ. ಅ.ಮ.ಪ್ರಕಾಶ್, ಪಾಲಿಕೆ ಸದಸ್ಯರಾದ ಪ್ರಭು, ಆರೋಗ್ಯಾಧಿಕಾರಿ ಅಮೋಘ್ ಮತ್ತಿತರರಿದ್ದರು.