ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ, ಬೇಸಿಗೆಯ ಮೊದಲೇ ಅವಸ್ಥೆ

By Suvarna NewsFirst Published Dec 10, 2022, 8:13 PM IST
Highlights

  ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ  ಚಳಿಗಾದಲ್ಲೇ ಜನರು ಕುಡಿಯುವ ನೀರಿಗೆ ಪರದಾಡು ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ಖಾಸಗಿ ಕಂಪನಿ

ವರದಿ: ಗುರುರಾಜ್ ಹೂಗಾರ್, ಏಷ್ಯಾನೆಟ್ ಸುವರ್ಣನ್ಯೂಸ್

ಹುಬ್ಬಳ್ಳಿ (ಡಿ.10): ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸೋದು ನೋಡಿದ್ದೇವೆ. ಆದ್ರೇ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ  ಚಳಿಗಾದಲ್ಲೇ ಜನರು ಕುಡಿಯುವ ನೀರಿಗೆ ಪರದಾಡು ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ಖಾಸಗಿ ಕಂಪನಿ. ಹುಬ್ಬಳ್ಳಿ ಧಾರವಾಡ ಅವಳಿ ನಗರದ‌‌ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಜವಾಬ್ದಾರಿ ಜಲಮಂಡಳಿಯಿಂದ ಖಾಸಗಿ ಎಲ್ ಆ್ಯಂಡ್ ಟಿ ಕಂಪನಿಗೆ ನೀಡಿ ಪಾಲಿಕೆ ಕೈತೊಳೆದುಕೊಂಡಿತ್ತು. ಈ ಪ್ರಕ್ರಿಯೆ ನಡೆದು ಆರೇಳು ತಿಂಗಳುಗಳೇ ಕಳೆದಿದೆ. ಆದ್ರೇ ನೀರು ಪೂರೈಸುವ ಜವಾಬ್ದಾರಿ ಹೊತ್ತ ಎಲ್‌ಆಂಡ್ ಟಿ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಹೊಡೆದ ಪೈಪ್ ಲೈನ್ ಗಳ ದುರಸ್ತಿ ಮಾಡುತ್ತಿಲ್ಲ. ಈಗಾಗಲೇ ಜಲಮಂಡಳಿ ಮೂಲಕ ನೀರು ಪೂರೈಸುತ್ತಿದ್ದ ಸಿಬ್ಬಂದಿಗಳನ್ನು ಕೆಲಸದಿಂದ ಕೈಬಿಟ್ಟಿದೆ. ಆದ್ರೇ ಆ ಜಾಗಕ್ಕೆ‌ ಸಮರ್ಪಕವಾದ ಸಿಬ್ಬಂದಿ ನೇಮಕಗೊಂಡಿಲ್ಲ ಇದರಿಂದ ನೀರು ಪೂರೈಕೆ ನೂರೆಂಟು ವಿಘ್ನ ಎದುರಾಗುತ್ತಲೇ‌ ಇದೆ. ಅಧಿಕಾರಿಗಳು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ.  ಆದ್ರೇ ಜನರ‌ ಮನೆಗಳ ನಲ್ಲಿಯಲ್ಲಿ ನೀರು ಮಾತ್ರ ಬರ್ತೀಲ್ಲ. ಇದರಿಂದಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. 

ಹಳೇ ಹುಬ್ಬಳ್ಳಿ, ಬೀಡಿ ಕಾರ್ಮಿಕರ ನಗರ, ಸ್ವರಾಜನಗರ, ಪಂಪನಗರ, ಬಂಜಾರ ಕಾಲೊನಿ, ಜಗದೀಶ ನಗರ, ಹುಬ್ಬಳ್ಳಿ, ಅಯೋಧ್ಯಾನಗರ, ಎಸ್‌.ಎಂ. ಕೃಷ್ಣ ನಗರ, ವೀರಾಪುರ ಓಣಿ, ಬಿಡನಾಳ, ಕರ್ಕಿ ಬಸವೇಶ್ವರನಗರ, ಗೋಕುಲ ರಸ್ತೆ, ಹೊಸುರು, ವಿದ್ಯಾನಗರ ಸೇರಿದಂತೆ ಹುಬ್ಬಳ್ಳಿ ಧಾರವಾಡ ಅವಳಿನಗರದ ಬಹುತೇಕ ಕಡೆಯಲ್ಲಿ ಸುಮಾರು ಹದಿನೈದು ದಿನ ಕಳೆದರೂ ಕುಡಿಯುವ ನೀರು ಬರುತ್ತಿಲ್ಲ.

ಮಹಾರಾಷ್ಟ್ರ ನೀರು ಕೊಡ್ತಿಲ್ಲ ಎಂದ ಜತ್‌ಗೆ ಕರ್ನಾಟಕದಿಂದ ಜಲ..!

ಜನರು ನಿತ್ಯ ಪಾಲಿಕೆ ಅಧಿಕಾರಿಗಳು ಹಾಗೂ ಕಾರ್ಪೋರೆಟಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ. ಇನ್ನೂ ಇತ್ತೀಚೆಗೆ ಖಾಸಗಿ ಹೊಟೇಲ್ ನಲ್ಲಿ ನಡೆದ ಸಭೆಯಲ್ಲಿ ಚುನಾಯಿತ ಕಾರ್ಪೊರೇಟರ್ ಕೂಡ ಅಸಮಾಧಾನ ಹೊರಹಾಕಿದ್ದರು. ಸಭೆಯಲ್ಲಿ ಸಮಜಾಯಿಷಿ ಹೇಳುವುದು ಬೇಡ ಕಾರ್ಯರೂಪಕ್ಕೆ ತರಲು ಕೂಡ ಆಕ್ರೋಶ ವ್ಯಕ್ತಪಡಿಸಿದರು. ಇದರ ಮುಂದುವರಿದ ಭಾಗವಾಗಿ ನವದೆಹಲಿಯಲ್ಲಿ ಕೂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಎಲ್ ಆಂಡ್ ಟಿ ಕಂಪನಿಯವರ ಜೊತೆ ಸಚಿವರು ಸಭೆ ನಡೆಸಿ ತಾಕಿತ್ತು ಮಾಡಿದ್ದರು. ಆದರೂ ಕೂಡ ಜನರ ಸಮಸ್ಯೆ ಮಾತ್ರ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.

Mahadayi water dispute: ಮಹದಾಯಿ ಹೋರಾಟಗಾರರಿಗೆ ತಪ್ಪದ ಕೋರ್ಟ್ ಅಲೆದಾಟ

ಒಟ್ಟಿನಲ್ಲಿ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಆಡಳಿತ ಮಂಡಳಿ ಧ್ವನಿ ಎತ್ತಬೇಕಿದೆ‌. ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಬೇಸಿಗೆ ಮೊದಲೇ ಹೀಗಾದ್ರೆ ಇನ್ನು ಬೇಸಿಗೆಯಲ್ಲಿ ಅವಳಿ‌ನಗರದ ಜನರನ್ನು ಆ ಭಗವಂತನೆ ಕಾಪಡಬೇಕಿದೆ.

click me!