ಬೆಳಗಾವಿ ಜಿಲ್ಲೆ ಜನ ಪ್ರತಿನಿಧಿಗಳು ಯಾರು ಹೆಡಿಗಳಲ್ಲ ಕೈಗೆ ಬಳೆ ತೊಟ್ಟಿಲ್ಲ. ನಾವೆಲ್ಲ ಗಂಡಸರಿದ್ದೇವೆ. ಗಡಿ ನಾಡು ನುಡಿ ಜಲ ವಿಷಯ ಬಂದಾಗ ಪಕ್ಷಾತಿತವಾಗಿ ನಾವೆಲ್ಲ ಒಂದಾಗಿ ಯಾವ ರೀತಿ ಉತ್ತರ ನೀಡಬೇಕು ತಕ್ಕ ಉತ್ತರವನ್ನು ನೀಡುತ್ತೆವೆ: ಲಕ್ಷ್ಮಣ ಸವದಿ
ಅಥಣಿ(ಡಿ.10): ನೆಲ ಜಲ ಭಾಷೆ ವಿಷಯದಲ್ಲಿ ನಾವೆಲ್ಲ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಪಕ್ಷಾತೀತವಾಗಿ ಒಂದಾಗಿದ್ದೇವೆ. ಎಂಇಎಸ್ ಕಾರ್ಯಕರ್ತರು ತಮ್ಮ ಪುಂಡಾಟಿಕೆಯನ್ನು ನಿಲ್ಲಿಸಬೇಕು ಎಂಬ ಎಚ್ಚರಿಕೆ ಮಾಜಿ ಉಪ ಮುಖ್ಯ ಮಂತ್ರಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸಂಗಪ್ಪ ಸವದಿ ಹೇಳಿಕೆ ಮೂಲಕ ಕಡಕ್ಕ ಎಚ್ಚರಿಕೆ ನೀಡಿದ್ದಾರೆ. ಅವರು ಇಂದು ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ 5 ಕೋಟಿ ವೆಚ್ಚದಲ್ಲಿ ತಡೆ ಗೋಡೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ನೇರೆವೆರಿಸಿ ಸುದ್ದಿಗಾರರ ಸಂಗಡ ಗಡಿ ಮಾತನಾಡಿದರು.
ಬೆಳಗಾವಿ ಜಿಲ್ಲೆ ಜನ ಪ್ರತಿನಿಧಿಗಳು ಯಾರು ಹೆಡಿಗಳಲ್ಲ ಕೈಗೆ ಬಳೆ ತೊಟ್ಟಿಲ್ಲ. ನಾವೆಲ್ಲ ಗಂಡಸರಿದ್ದೇವೆ. ಗಡಿ ನಾಡು ನುಡಿ ಜಲ ವಿಷಯ ಬಂದಾಗ ಪಕ್ಷಾತಿತವಾಗಿ ನಾವೆಲ್ಲ ಒಂದಾಗಿ ಯಾವ ರೀತಿ ಉತ್ತರ ನೀಡಬೇಕು ತಕ್ಕ ಉತ್ತರವನ್ನು ನೀಡುತ್ತೆವೆ ಎಂದು ಮಾಜಿ ಉಪ-ಮುಖ್ಯ ಮಂತ್ರಿ ವಿಧಾನ ಪರಿಷತ್ತ ಸದಸ್ಯ ಲಕ್ಷ್ಮಣ ಸಂಗಪ್ಪ ಸವದಿ ಅವರು ಹೇಳಿದರು.
ಲೋಕಸಭೆಯಲ್ಲಿ ಪ್ರಸ್ತಾಪವಾದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ
ಎಮ್.ಇ.ಎಸ್. ಇದೊಂದು ಸತ್ತ ಹೆಣ ಇದಕ್ಕೆ ಕೆಲವು ಸ್ವಾರ್ಥ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಜೀವ ತುಂಬಲು ವ್ಯರ್ಥ ಪ್ರಯತ್ನ ಮಾಡುತಿದ್ದಾರೆ. ಇದರಲ್ಲಿ ನೇರೆ ಮಹಾರಾಷ್ಟ್ರದ ಕೆಲವು ಮುಖಂಡರು ಬೆಳಗಾವಿಯಲ್ಲಿ ಕೆಲವು ಮುಖಂಡರು ಇದ್ದಾರೆ ಎಂದು ಆರೋಪಿಸಿದರು.
ಮಹಾರಾಷ್ಟ್ರದ ಮುಖ್ಯ ಮಂತ್ರಿಗಳಿಗೆ ಮತ್ತು ಸಮಿಸ್ರ ಸರಕಾರಕ್ಕೆ ನಾನು ಆಗ್ರಹಿಸುವದೆನಂದರೆ ಮಹಾರಾಷ್ಟ್ರದಲ್ಲಿ ಕನ್ನಡಿಗರ ವಾಸಿಸುವ ಜನರ ಬೇಡಿಕೆಯನ್ನು ಮೂಲ ಭೂತ ಸೌಕರ‍್ಯಗಳನ್ನು ಪೊರೈಸುವ ಕೆಲಸ ಸರಕಾರ ಮಾಡಬೇಕು. ಮಹಾರಾಷ್ಟ್ರದ ಕೆಲವು ಸಚಿವರು ಗಡಿ ವಿಷಯ ಕುರಿತು ಹೇಳಿಕೆಯನ್ನು ನೀಡಿ ವಿವಾದ ಹುಟ್ಟುಹಾಕುವದನ್ನು ನಿಲ್ಲಸಬೇಕು. ಅಂಥ ಸಚಿವರಿಗೆ ಮಹಾರಾಷ್ಟ್ರ ಮುಖ್ಯ ಮುಖ್ಯ ಮಂತ್ರಿಗಳು ಆ ಸಚಿವರಿಗೆ ಕೀವಿ ತಾಕಿತು ಮಾಡಿ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಜತ್ತ ತಾಲೂಕಿನಲ್ಲಿ 42 ಹಳ್ಳಿಗಳು 2012 ರಲ್ಲಿ ಕರ್ನಾಟಕಕ್ಕೆ ಸೇರುತ್ತೇವೆ ಎಂದು ಮಹಾರಾಷ್ಟ್ರ ಸರಕಾರಕ್ಕೆ ಮತ್ತು ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಅವರಿಗೆ ಮೈಸ್ಯಾಳ ಯಾತ ನೀರಾವರಿ ಯೋಜನೆ ಮೂಲಕ ನೀರು ಕೊಡುವ ಕೆಲಸ ಮಹಾರಾಷ್ಟ್ರದ ಸರಕಾರ ಮಾಡಬೇಕು.
Belagavi Border dispute: ಮಹಾ ಬಸ್ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ
ನೇರೆ ಮಹಾರಾಷ್ಟ್ರಕ್ಕೂ ಕರ್ನಾಟಕಕ್ಕೂ ಸಂಸ್ಕ$›ತಿ ವಾಣಿಜ್ಯ ಮತ್ತು ಕೌಟುಂಬಿಕ ಒಳ್ಳೆಯ ಸಂಭಂದಗಳು ಇವೆ. ವಿನಾಕಾರಣವಾಗಿ ಜನ ಸಾಮಾನ್ಯರಿಗೆ ತೊಂದರೆ ಆಗುವಂತ ಯಾವ ಕೆಲಸಗಳನ್ನು ಮಾಡಬಾರದು. ಕರ್ನಾಟಕದ ಸಾಕಷ್ಟುರೈತರು ತಾವು ಬೆಳೆದ ಬೆಳೆಯನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ ಆರ್ಥಿಕ ವ್ಯವಹಾರಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಗುಜರಾತದ ಜನ ಸ್ವಾಭಿಮಾನಿಗಳು ತಮ್ಮ ರಾಜ್ಯ ಓರ್ವ ವ್ಯಕ್ತಿ ನರೇಂದ್ರ ಮೋದಿಜಿ ಈ ದೇಶದ ಪ್ರಧಾನಿಯಾಗಿದ್ದಾರೆ. ವಿಶ್ವ ಮೆಚ್ಚುವ ಕೆಲಸ ಮಾಡುತಿದ್ದಾನೆ ಎಂಬ ಅಭಿಮಾನದಿಂದ ಅವರು ಬಿಜೆಪೆಯನ್ನು ಅತಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಗುಜರಾತ ಮತದಾರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.