ಅವರ ಹೇಳಿಕೆಗೆ ಮಹತ್ವ ಇಲ್ಲ - ನಾನು ಕಾಂಗ್ರೆಸ್ ಸೇರಿದಾಗಿಂದ ಮಾತಾಡಿಲ್ಲ : ಸುಧಾಕರ್

By Kannadaprabha News  |  First Published Nov 16, 2022, 12:17 PM IST

  ಸಿದ್ದರಾಮಯ್ಯನತಂಹ ದೊಡ್ಡ ನಾಯಕರು ಕೋಲಾರಕ್ಕೆ ಬಂದರೆ ನನ್ನ ಸ್ಥಾನಕ್ಕೆ ಎಲ್ಲಿ ಕುತ್ತು ಬರುತ್ತದೆಯೆಂದು ಹತಾಶೆಯಿಂದ ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಸಿದ್ದರಾಮಯ್ಯ ಬಗ್ಗೆ ಹಗುರುವಾಗಿ ಮಾತನಾಡಿದ್ದಾರೆಂದು ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ..ಸುಧಾಕರ್‌ ಹೇಳಿದರು.


ಚಿಕ್ಕಬಳ್ಳಾಪುರ: (ನ.16):  ಸಿದ್ದರಾಮಯ್ಯನತಂಹ ದೊಡ್ಡ ನಾಯಕರು ಕೋಲಾರಕ್ಕೆ ಬಂದರೆ ನನ್ನ ಸ್ಥಾನಕ್ಕೆ ಎಲ್ಲಿ ಕುತ್ತು ಬರುತ್ತದೆಯೆಂದು ಹತಾಶೆಯಿಂದ ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಸಿದ್ದರಾಮಯ್ಯ ಬಗ್ಗೆ ಹಗುರುವಾಗಿ ಮಾತನಾಡಿದ್ದಾರೆಂದು ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ..ಸುಧಾಕರ್‌ ಹೇಳಿದರು.

ಕೋಲಾರಕ್ಕೆ (kolar)  ಮಾಜಿ ಸಿಎಂ ಸಿದ್ದರಾಮಯ್ಯ ಬಂದರೆ ಸೋಲಿಸುವುದು ಖಚಿತ ಎಂಬ ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಹೇಳಿಕೆಯನ್ನು ಪ್ರಸ್ತಾಪಿಸಿ ಚಿಂತಾಮಣಿ ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah)  ಕೋಲಾರಕ್ಕೆ ಬರುವ ಬಗ್ಗೆ ಅವರಿಗೆ ಭಯ ಕಾಡುತ್ತಿರಬಹುದೆಂದರು.

Tap to resize

Latest Videos

ಎಸ್‌.ಮುನಿಸ್ವಾಮಿ ಸಂಸದರಾಗಿದ್ದು ಯಾರಿಂದ, ಯಾರ ಪ್ರಯತ್ನದಿಂದ ಎಂದು ಪ್ರಶ್ನಿಸಿದ ಅವರು, ತಾವು ಮತ್ತು ಕೊತ್ತನೂರು ಮಂಜುನಾಥ ಸಾಕಷ್ಟುಶ್ರಮ ವಹಿಸಿ ಕೆಲಸ ಮಾಡಿ ಅವರಿಗೆ ಎಲ್ಲಾ ರೀತಿ ಬೆಂಬಲವಾಗಿ ನಿಂತಿದ್ದವು. ಈಗ ನಾವು ನಮ್ಮ ಮಾತೃ ಪಕ್ಷ ಕಾಂಗ್ರೆಸ್‌ಗೆ ಸೇರಿದ್ದೇವೆ. ಅವರು ಬಿಜೆಪಿ ಸಂಸರಾಗಿದ್ದಾರೆ. ನಾನು ಕಾಂಗ್ರೆಸ್‌ ಸೇರಿದ ದಿನದಿಂದ ಅವರಿಗೆ ಫೋನ್‌ ಮಾಡಿಲ್ಲ. ಅವರು ನನಗೂ ಫೋನ್‌ ಮಾಡಿಲ್ಲ. ಅವರ ಹೇಳಿಕೆಗಳ ಬಗ್ಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ಸಿದ್ದರಾಮಯ್ಯಗೆ ವರುಣಾ ಸೇಫ್ 

ಮೈಸೂರು (ನ.16) : ಮುಂದಿನ ಚುನಾವಣೆಯೇ ಸಿದ್ದರಾಮಯ್ಯ ಅವರಿಗೆ ಕೊನೆಯಾಗಿರುವ ಕಾರಣ ವರುಣ ಕ್ಷೇತ್ರದಲ್ಲೇ ಕಣಕ್ಕಿಳಿಯುವುದು ಸೂಕ್ತ. ಯಾರೋ 4- 5 ಜನರು ಹೊಗಳಿದಾಕ್ಷಣ ಕೋಲಾರದಲ್ಲಿ ಸ್ಪರ್ಧಿಸಿ ಸೋಲುವುದು ಬೇಡ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸಲಹೆ ನೀಡಿದರು. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡದೆ ವರುಣ ಕ್ಷೇತ್ರದಲ್ಲಿ ನಿಲ್ಲುವುದು ಉತ್ತಮ. ಯಾರೋ 4- 5 ಸ್ನೇಹಿತರು ಹೊಗಳಿ ಬೆಂಬಲಕ್ಕೆ ನಿಲ್ಲುತ್ತಾರೆ ಅಂದಾಕ್ಷಣ ಸ್ಪರ್ಧಿಸಿದರೆ ಸೋಲು ಗ್ಯಾರಂಟಿ. ರಾಜಕೀಯದ ಕೊನೆಯ ಘಟ್ಟದಲ್ಲಿ ಸೋಲಿನಿಂದ ನಿವೃತ್ತಿಯಾಗುವುದು ಬೇಡ ಎಂದು ಎಚ್ಚರಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಬಾರಿ ಜನರು ಸೋಲಿಸಿದರು. ಬಾದಾಮಿ ಕ್ಷೇತ್ರದಲ್ಲಿ ಹಗಲು-ರಾತ್ರಿ ಎನ್ನದೆ ಓಡಾಡಿ ಕೆಲಸ ಮಾಡಿದ್ದರಿಂದ ಅತ್ಯಲ್ಪ ಮತಗಳ ಅಂತರದಿಂದ ಜಯ ದೊರೆಯಿತು. ಹೀಗಾಗಿ ಕೋಲಾರದಲ್ಲಿ ಸ್ಪರ್ಧೆ ಮಾಡಬಾರದೆಂದು ಸಲಹೆ ಕೊಡುವೆ ಎಂದರು.

‘ನನಗೆ ಸಿದ್ದರಾಮಯ್ಯ ಅವರನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ.

 ‘ನನಗೆ ಸಿದ್ದರಾಮಯ್ಯ ಅವರನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ. ಈಗಲೂ ಅವರ ಮೇಲೆ ನನಗೆ ಪ್ರೀತಿ ಇದೆ. ತಬ್ಬಲಿಯು ನೀನಾದೆ ಮಗನೇ ಅನ್ನೋ ಹಾಗೆ ಕಾಂಗ್ರೆಸ್‌ನಲ್ಲಿ ಅವರು ತಬ್ಬಲಿ ಆಗಿದ್ದಾರೆ. ಅವರು ವರುಣಾ ಕ್ಷೇತ್ರದಲ್ಲಿ ನಿಂತು ಅಲ್ಲೇ ಗೆಲ್ಲಲಿ ಎಂದು ಹಾರೈಸುತ್ತೇನೆ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಕಿಂಗ್‌ ಆಗುವುದಕ್ಕಿಂತ ಕಿಂಗ್‌ ಮೇಕರ್‌ ಆಗುವುದು ಇಷ್ಟ’ ಎಂದರು. ಇದೇ ವೇಳೆ, ರಮೇಶ ಜಾರಕಿಹೊಳಿ ಕುರಿತು ಪ್ರತಿಕ್ರಿಯಿಸಿದ ಅವರು, ರಮೇಶ ಜಾರಕಿಹೊಳಿಯವರು ಜೆಡಿಎಸ್‌ಗೆ ಬರುವ ಕುರಿತು ಇನ್ನೂ ಚರ್ಚೆ ಆಗಿಲ್ಲ.

ಈ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಬೇಕು. ಅವರು ಜೆಡಿಎಸ್‌ಗೆ ಬಂದರೆ ಸ್ವಾಗತ. ನಾವು ಸಾಹುಕಾರರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ನಮ್ಮಲ್ಲಿ ಒಂದೊಂದು ಸೀಟ್‌ಗೆ ಎರಡು ಮೂರು ಜನ ಸ್ಪರ್ಧಾಳುಗಳಿದ್ದಾರೆ. ಬೆಳಗಾವಿಯಿಂದ ನಮ್ಮ ಪಕ್ಷಕ್ಕೆ ಕೆಲವರು ಬರುತ್ತಿದ್ದಾರೆ. ಸ್ಥಳೀಯರು ಒಪ್ಪಿಕೊಂಡರೆ ಯಾರೇ ಬಂದರೂ ಸ್ವಾಗತ ಎಂದರು. ಈ ಬಾರಿ ರಾಜ್ಯದಲ್ಲಿ ಜೆಡಿಎಸ್‌ 123 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಬಿಜೆಪಿಯವರು ಲಿಂಗಾಯತರಿಂದಲೇ ಬೆಳೆದವರು. ಆದರೆ, ಲಿಂಗಾಯತ ಮುಖಂಡರಿಗೆ ಹಾಗೂ ಬಸವಣ್ಣನವರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

ಕೈಗೊಂಬೆಯಂತೆ ಮಲ್ಲಿಕಾರ್ಜುನ ಖರ್ಗೆ ಕೆಲಸ: ಸಿ.ಎಂ.ಇಬ್ರಾಹಿಂ

ರಾಜ್ಯ ಪ್ರವಾಸ ಆರಂಭಿಸಿದ್ದೇವೆ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಸಂಘಟಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಇದರ ಜತೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬರುತ್ತಿದ್ದಾರೆ. ಜನರು ಸಾವಿರಾರು ಸಂಖ್ಯೆಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದರು. ಜನರ ಜತೆ ನೇರವಾಗಿ ಸಂಪರ್ಕ ಮಾಡುತ್ತಿದ್ದೇವೆ. ಆಯಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗುರುತಿಸಿ, ಕೆಲಸ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಜೆಡಿಎಸ್‌ ಪಕ್ಷ ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದೆ. ಕರುನಾಡು ಸರ್ವಜನಾಂಗದ ಶಾಂತಿಯ ತೋಟ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. 

ನಾವು ಕರ್ನಾಟಕದ ಸಾರ್ವಭೌಮತ್ವ ಉಳಿಸಿಕೊಳ್ಳುತ್ತೇವೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಬೆಳಗಾವಿ ಸುವರ್ಣ ವಿಧಾನಸೌಧ ಸದ್ಬಳಕೆಯಾಗಬೇಕು. ಈ ಭಾಗದ ಜನರು ಸಮಸ್ಯೆ ತೆಗೆದುಕೊಂಡು ಬೆಂಗಳೂರು ಬರುವುದು ಬೇಡ. ಅದು ಇಲ್ಲಿಯೇ ಇತ್ಯರ್ಥವಾಗಬೇಕು. ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರಕ್ಕೆ ಬಂದರೆ ಬೆಳಗಾವಿ ಸುವರ್ಣ ವಿಧಾನಸೌಧ ಸದ್ಬಳಕೆಗೆ ಆದ್ಯತೆ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಜೆಡಿಎಸ್‌ ಮುಖಂಡರಾದ ಫೈಜುಲ್ಲಾ ಮಾಡಿವಾಲೆ, ಭೀಮಪ್ಪ ಗಡಾದ, ಇನ್ನಿತರರು ಉಪಸ್ಥಿತರಿದ್ದರು.

ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ

ರಮೇಶ ಜಾರಕಿಹೊಳಿ ಜೆಡಿಎಸ್‌ಗೆ ಬಂದರೆ ಸ್ವಾಗತ: ನಮ್ಮಲ್ಲಿ ಒಂದೊಂದು ಸೀಟ್‌ಗೆ ಎರಡು ಮೂರು ಜನರ ಸ್ಪರ್ಧೆ ಇದೆ. ಬೆಳಗಾವಿಯಿಂದ ನಮ್ಮ ಪಕ್ಷಕ್ಕೆ ಕೆಲವರು ಬರುತ್ತಿದ್ದಾರೆ. ರಮೇಶ ಜಾರಕಿಹೊಳಿ ಬರುವ ಕುರಿತು ಇನ್ನೂ ಚರ್ಚೆ ಆಗಿಲ್ಲ. ಅದನ್ನು ಕುಮಾರಸ್ವಾಮಿ ಅವರನ್ನೇ ಕೇಳಬೇಕು. ಮಾಜಿ ಸಚಿವ ರಮೇಶ ಜಾರಕಿಹೊಳಿ ಜೆಡಿಎಸ್‌ ಪಕ್ಷಕ್ಕೆ ಬಂದರೆ ಸ್ವಾಗತ. ಸ್ಥಳೀಯರು ಒಪ್ಪಿಕೊಂಡರೆ ಯಾರೇ ಕೂಡ ಜೆಡಿಎಸ್‌ಗೆ ಬಂದರೂ ಸ್ವಾಗತ. ನಾವು ಸಾಹುಕಾರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ ಎಂದರು.

 

click me!