ಶೀಘ್ರ ಬೆಂಗಳೂರಿನಿಂದ ಬೆಳಗಾವಿವರೆಗೆ ಹೆದ್ದಾರಿಯಲ್ಲಿ ಕಣ್ಗಾವಲು, ಔಟರ್‌ಲೈನ್‌ನಲ್ಲಿ ಸಾಗದ ಲಾರಿಗಳಿಗೆ 500ರು. ದಂಡ: ಎಸ್ಪಿ ರಿಷ್ಯಂತ್
ದಾವಣಗೆರೆ(ನ.16): ಪೂರ್ವ ವಲಯ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಔಟರ್ ಲೈನ್‌ನಲ್ಲೇ ಲಾರಿಗಳ ಸಂಚಾರ ಇರುವಂತೆ ನೋಡಿಕೊಳ್ಳಲು ಆಟೋ ನಂಬರ್ ಪ್ಲೇಟ್ ರಿಕಗ್ನೇಶನ್ ಕ್ಯಾಮೆರಾ ಅಳವಡಿಸಲಿದ್ದು, ಇನ್ನರ್‌ಲೈನ್‌ನಲ್ಲಿ ಲಾರಿ ಹೊರತುಪಡಿಸಿ ವೇಗವಾಗಿ ಸಾಗುವ ಇತರೆ ವಾಹನಗಳಷ್ಟೇ ಸಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅಧ್ಯಕ್ಷತೆಯಲ್ಲಿ 6 ಪಥದ ಹೆದ್ದಾರಿ ಹಾಗೂ ಸೇವಾ ರಸ್ತೆಗಳ ನಿರ್ಮಾಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಆಟೋ ನಂಬರ್ ಪ್ಲೇಟ್ ರಿಕಗ್ನೇಶನ್ ಕ್ಯಾಮೆರಾಗಳ ಕಣ್ಗಾವಲು ಇರಲಿದ್ದು, ಇದರಿಂದ ಲಾರಿಗಳು ಔಟರ್ ಲೈನ್ ಹೊರತುಪಡಿಸಿ ಸಂಚರಿಸಿದರೆ 500 ರು. ದಂಡ ವಿಧಿಸಲಾಗುತ್ತದೆ ಎಂದರು.
DAVANAGERE: ಸರ್ಕಾರಿ ಅಧಿಕಾರಿಗೆ ಧಮ್ಕಿ ಹಾಕಿದ ಆರೋಪ, ಶಾಸಕ ರೇಣುಕಾಚಾರ್ಯ ವಿರುದ್ಧ ಕೇಸ್
ಹೆದ್ದಾರಿಯ ಔಟರ್‌ಲೈನ್‌ನಲ್ಲೇ ಲಾರಿಗಳು ಸಂಚರಿಸಬೇಕು. ವೇಗದಲ್ಲಿ ಸಾಗುವಂತಹ ವಾಹನಗಳಷ್ಟೇ ಇನ್ನರ್‌ಲೈನ್‌ನಲ್ಲಿರಬೇಕು. ಈಗಾಗಲೇ ದಾವಣಗೆರೆ ತಾ. ಹೆಬ್ಬಾಳ್ ಟೋಲ್ ಬಳಿ ಆಟೋ ನಂಬರ್ ಪ್ಲೇಟ್ ರಿಕಗ್ನೇಶನ್ ಕ್ಯಾಮೆರಾ ಅಳವಡಿಸಿದೆ. ಪೂರ್ವ ವಲಯದ ಮೂರೂ ಜಿಲ್ಲೆ ಸೇರಿ ಹೆದ್ದಾರಿಯಲ್ಲಿ ಇಂತಹ ಕ್ಯಾಮೆರಾ ಅಳವಡಿಸಲು ಟೆಂಡರ್ ಪ್ರಕ್ರಿಯೆ ಆಗಿದ್ದು ಶೀಘ್ರದಲ್ಲೇ ಕ್ಯಾಮೆರಾ ಅಳವಡಿಸಲಾಗುವುದು. ಪೂರ್ವ ವಲಯ ಮಾತ್ರವಲ್ಲ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇಂತಹ ಕಣ್ಗಾವಲು ಇರಲಿದೆ ಎಂದು ಹೇಳಿದರು.
ಆಟೋ ನಂಬರ್ ಪ್ಲೇಟ್ ರಿಕಗ್ನೇಶನ್ ಕ್ಯಾಮೆರಾ ಅಳವಡಿಕೆ ಕಾರ್ಯ ಮುಗಿದ ನಂತರ ಇನ್ನರ್ ಲೈನ್‌ಗಳಲ್ಲಿ ಲಾರಿಗಳು ಸಂಚರಿಸಿದರೆ ಆ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಅಂತ ಹ ಲಾರಿಗಳಿಗೆ 500 ರು. ದಂಡ ವಿಧಿಸಲಾಗುತ್ತದೆ. ಸದ್ಯಕ್ಕೆ ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳನ್ನು ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ನಂಬರ್ ಪ್ಲೇಟ್ ರಿಕಗ್ನೇಶನ್ ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
Karnataka Assembly Polls: ದಾವಣಗೆರೆ ದಕ್ಷಿಣದಿಂದ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಕಣಕ್ಕೆ
ಇಲಾಖೆ ಗಮನಕ್ಕೆ ತನ್ನಿ:
ಹೆದ್ದಾರಿ ಪ್ರಾಧಿಕಾರ, ಟೋಲ್ ಅಧಿಕಾರಿಗಳು ತಮ್ಮ ಪೆಟ್ರೋಲಿಂಗ್ ವಾಹನ ಸಿಬ್ಬಂದಿಗಳಿಗೆ ಹೆದ್ದಾರಿಯಲ್ಲಿ ಯಾವುದೇ ಅಪಘಾತ, ಅನಾಹುತವಾದರೆ ತಕ್ಷಣವೇ ಪೊಲೀಸ್ ಇಲಾಖೆ ಗಮನಕ್ಕೆ ತರುವಂತೆ ತಿಳಿಸಬೇಕು. ದಾವಣಗೆರೆ ಹೊರ ವಲಯ, ಡಾಬಾಗಳ ಬಳಿ ವಾಹನ ಚಾಲಕರು, ಸವಾರರಿಗೆ ತೃತೀಯ ಲಿಂಗಿಗಳು ತೀವ್ರ ತೊಂದರೆ ನೀಡುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಇಂತಹ ಘಟನೆಗಳು ಕಂಡರೆ ತಕ್ಷಣವೇ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ನಿಮ್ಮ ಪೆಟ್ರೋಲಿಂಗ್ ಸಿಬ್ಬಂದಿಗೆ ಹೇಳಿ ಎಂದು ಸೂಚನೆ ನೀಡಿದರು.
ಹೆದ್ದಾರಿ ಪಕ್ಕ ಲಾರಿ ನಿಲ್ಲಿಸಿ, ಮಲಗುವುದನ್ನು ತಪ್ಪಿಸಿ. ಹೀಗೆ ಮಲಗಬಾರದು, ಲಾರಿಗಳನ್ನು ನಿಲ್ಲಿಸಬಾರದು. ಲಾರಿ ನಿಲ್ಲಿಸಿದಾಗ ಅಪಘಾತ, ಸಾವು ನೋವುಗಳಾಗುತ್ತವೆ. ಒಂದು ವೇಳೆ ಹೀಗೆ ಲಾರಿಗಳನ್ನು ನಿಲ್ಲಿಸಿದ್ದರೆ ಪೊಲೀಸ್ ಸಹಾಯವಾಣಿ 112ಗೆ ತಕ್ಷಣವೇ ನಿಮ್ಮ ಪೆಟ್ರೋಲಿಂಗ್ ಸಿಬ್ಬಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಬೇಕು ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.