'ಅಭಿವೃದ್ಧಿ ಪ್ರತಿಫಲವೇ ಕಳೆದ ಚುನಾವಣೆಯಲ್ಲಿ ಸೋಲು'

By Kannadaprabha NewsFirst Published Nov 16, 2022, 12:05 PM IST
Highlights

ಸಚಿವನಾಗಿದ್ದಾಗ ನಾನು ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಪ್ರತಿಫಲವೇ ಕಳೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣವಾಗಿರಬಹುದು ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

 ನಾಗಮಂಗಲ (ನ.16): ಸಚಿವನಾಗಿದ್ದಾಗ ನಾನು ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಪ್ರತಿಫಲವೇ ಕಳೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣವಾಗಿರಬಹುದು ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಹರದನಹಳ್ಳಿ, ದೇವರ ಮಲ್ಲನಾಯ್ಕನಹಳ್ಳಿ, ದೇವಲಾಪುರ, ಭೀಮನಹಳ್ಳಿ ಹಾಗೂ ಕರಡಹಳ್ಳಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಂಗಳವಾರ ಆಯೋಜಿಸಿದ್ದ (Congress) ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

Latest Videos

ಜಿಲ್ಲೆಯ ಜನರು ವಾಗಿ (Politics) ನನಗೆ ಎಲ್ಲಾ ರೀತಿಯ ಅಧಿಕಾರ ನೀಡಿದ್ದಾರೆ. ನೀವು ನೀಡಿದ ಶಕ್ತಿಯಿಂದಲೇ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಹಲವು ಬಗೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು. ಆದರೆ ಯಾವುದೋ ಕಾರಣಕ್ಕೆ ಮತ ಕೊಡುವುದಾದರೆ ಅಭಿವೃದ್ಧಿ ಮಾಡಿದವರ ಪಾಡೇನು ಎಂದು ಪ್ರಶ್ನಿಸಿದರು.

ಈ ಹಿಂದೆ ನಾನು ಸಚಿವ, ಸಂಸದನಾಗಿದ್ದ ಅವಧಿಯಲ್ಲಿ ತಾಲೂಕಿಗೆ 220ಕೆವಿ ವಿದ್ಯುತ… ವಿತರಣಾಘಟಕ, ಸರ್ಕಾರಿ ಪಾಲಿಟೆಕ್ನಿಕ…, ಪದವಿ ಕಾಲೇಜು, ಎಆರ್ಟಿಓ ಕಚೇರಿ, ಕೇಂದ್ರೀಯ ಪ್ರಕೃತಿ ಚಿಕಿತ್ಸಾಲಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇ ತಪ್ಪಾಯಿತೆ ಎಂದು ಪ್ರಶ್ನಿಸಿದರು.

ತಾಲೂಕಿನ ಕನಿಷ್ಠ ಮೂರು ಸಾವಿರ ಮಂದಿ ಯುವಕ ಮತ್ತು ಯುವತಿಯರಿಗೆ ಉದ್ಯೋಗ ನೀಡುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಬದಿಯ ದೇವಿಹಳ್ಳಿ ಸಮೀಪ ಕೈಗಾರಿಕಾ ಘಟಕ ನಿರ್ಮಾಣಕ್ಕೆ ನನ್ನ ಅವಧಿಯಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಆ ಸ್ಥಳದಲ್ಲೀಗ ಗಿಡಗೆಂಟೆಗಳು ಬೆಳೆದು ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾರ್ಕೋನಹಳ್ಳಿ ಜಲಾಶಯದಿಂದ 128ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಇಷ್ಟುವರ್ಷಕಾಲ ಬೇಕಿರಲಿಲ್ಲ. ಕಳೆದ ನಾಲ್ಕುವರೆ ವರ್ಷಗಳಿಂದ ತಾಲೂಕಿನಲ್ಲಿ ಯಾವುದಾದರೂ ಒಂದು ಶಾಶ್ವತವಾದ ಅಭಿವೃದ್ಧಿ ಕಾಮಗಾರಿ ನಡೆದಿದೆಯೇ. ಗ್ರಾಮೀಣ ಪ್ರದೇಶದ ಯಾವ ರಸ್ತೆಗಳು ಅಭಿವೃದ್ಧಿಯಾಗಿವೆ ಎಂಬುದನ್ನು ಜನರೇ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

ಜನರ ನಂಬಿಕೆ ಪ್ರೀತಿ ವಿಶ್ವಾಸಕ್ಕೆ ಪೂರಕವಾಗಿ ಕ್ಷೇತ್ರದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದ್ದೇನೆ. ನನಗೆ ರಾಜಕೀಯವಾಗಿ ಇನ್ನೇನೋ ಆಗಬೇಕೆಂಬ ಆಸೆ ಇಲ್ಲ. ಆದರೆ, ಕ್ಷೇತ್ರದಲ್ಲಿ ಇನ್ನೂ ಮಾಡಬೇಕಾದ ಅನೇಕ ಕೆಲಸಕಾರ್ಯಗಳಿವೆ. ಜಿಲ್ಲೆಯ ಜನತೆಯ ಸಂಕಷ್ಟವನ್ನು ಪರಿಹರಿಸಬೇಕಿದೆ ಎಂದರು.

ಮಹಿಳೆಯರಿಗೆ, ಯುವಕರಿಗೆ ಉದ್ಯೋಗ ಕೊಡುವಂತಹ ಶಾಶ್ವತ ಕೆಲಸಗಳಾಗಬೇಕಿದೆ. ಜಿಲ್ಲೆಯಲ್ಲಿರುವ ಅನೇಕ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ನಾನು ರಾಜಕೀಯವಾಗಿ ಮುಂದುವರೆಯಬೇಕಿದೆ. ಯಾವ್ಯಾವುದೋ ಕಾರಣಕ್ಕೆ ನನ್ನನ್ನು ಸೋಲಿಸುವುದಾದರೆ, ಇದು ಅಭಿವೃದ್ಧಿ ಮಾಡಿರುವುದಕ್ಕೆ ಶಿಕ್ಷೆಯೇ? ನಾನು ಮಾಡಿರುವ ಅಭಿವೃದ್ಧಿಗೆ ಕೆಲಸಗಳಿಗೆ ಬೆಲೆ ಇಲ್ಲವೆ ಎಂದರು.

ಕ್ಷೇತ್ರದಲ್ಲಿ ಮತ್ತಷ್ಟುಅಭಿವೃದ್ಧಿ ಕಾರ್ಯಗಳ ಜೊತೆಗೆ ಮೂಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಾದರೆ ನನ್ನನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕು. ಮನೆ ಮನೆಗೆ ಹೋಗಿ ನನ್ನ ಅಭಿವೃದ್ಧಿ ಕೆಲಸಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಪ್ರತಿದಿನ ಜನರೊಂದಿಗೆ ಸಂಪರ್ಕ ಇಟ್ಟುಕೊಂಡು ನಾನು ಬೂತ… ಮಟ್ಟದ ಪ್ರಚಾರಕ್ಕೆ ಬರುವಷ್ಟರಲ್ಲಿ ಜನರಲ್ಲಿ ವಿಶ್ವಾಸ ತುಂಬಿ ಮನವೊಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಶಾಸಕ ದಿ.ಕೆ.ಸಿಂಗಾರಿಗೌಡರಿಗೂ ನನಗೂ ಅಪ್ಪ ಮಕ್ಕಳ ಬಾಂಧವ್ಯ. ಸಿಂಗಾರಿಗೌಡರು ನೇರ ನುಡಿಯ ವ್ಯಕ್ತಿತ್ವದ ಅಪರೂಪದ ರಾಜಕಾರಿಣಿ ನನ್ನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು. ತಾಲೂಕಿನ ಅಭಿವೃದ್ಧಿ ದೃಷ್ಠಿಯಿಂದ ನನ್ನನ್ನು ಬೆಂಬಲಿಸಿ. ನಾನು ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ನಿಮ್ಮೊಡನೆ ಸದಾ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡಿದ್ದೇನೆ. ಮುಂದೆಯೂ ಈ ಗ್ರಾಮವನ್ನು ಮರೆಯುವುದಿಲ್ಲ ಎಂದು ಮನವಿ ಮಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಜೆ. ರಾಜೇಶ್‌ ಮಾತನಾಡಿ, ಚಲುವರಾಯಸ್ವಾಮಿಯವರ ಮೇಲೆ ಇಲ್ಲ ಸಲ್ಲದ ಅಪಪ್ರಚಾರ ಮಾಡುವುದನ್ನು ಬಿಟ್ಟರೆ ಈವರೆಗೂ ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗದವರು ಬ್ರೋಕರ್‌ಗಳ ಮೂಲಕ ಎಲ್ಲಾ ಸರ್ಕಾರಿ ಕಚೇರಿಗಳನ್ನು ಭ್ರಷ್ಟಾಚಾರದ ಕೂಪವನ್ನಾಗಿ ಪರಿವರ್ತಿಸಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಸುರೇಶ್‌ಗೌಡರನ್ನು ಟೀಕಿಸಿದರು.

ತಮ್ಮ ಭ್ರಷ್ಟಾಚರದಿಂದ ಮತದಾರರ ಬಳಿ ಮುಖ ತೋರಿಸಲಾಗದೇ ಜೆಡಿಎಸ… ನಾಯಕರಾದ ಎಚ….ಡಿ. ಕುಮಾರಸ್ವಾಮಿ ಮತ್ತು ನಿಖಿಲ… ಕುಮಾರಸ್ವಾಮಿ ಅವರನ್ನು ಕರೆತಂದು ತಾಲೂಕಿನಲ್ಲಿ ಸಭೆ ಸಮಾರಂಭಗಳನ್ನು ಮಾಡುವ ದುಸ್ಥಿತಿಗೆ ಶಾಸಕರು ತಲುಪಿದ್ದಾರೆ ಎಂದು ಕಿಚಾಯಿಸಿದರು.

ಮಾಜಿ ಶಾಸಕ ಕೆ.ಸಿಂಗಾರಿಗೌಡರ ಪುತ್ರ ಕೆ.ಎಸ್‌.ಆನಂದ್‌ ಮಾತನಾಡಿದರು. ಕರಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಶಿವಣ್ಣ, ಮುಖಂಡರಾದ ಬಿಂಡೇನಹಳ್ಳಿ ಮಹೇಶ್‌, ಸುರೇಶ್‌, ಉದಯಕಿರಣ್‌, ಭೀಮನಹಳ್ಳಿ ಮರಿಸ್ವಾಮಿ, ತಟ್ಟಹಳ್ಳಿ ನರಸಿಂಹಮೂರ್ತಿ, ಸುನಿಲ್‌ ಲಕ್ಷ್ಮೇಕಾಂತ್‌, ಗ್ರಾಪಂ ಸದಸ್ಯ ಸಿಂಗಾರಿಗೌಡ, ಚೇತನ್‌, ಪುರಸಭೆ ಸದಸ್ಯ ರಮೇಶ್‌, ಕೆ.ಎಂ.ಭದ್ರೇಗೌಡ, ಪಿಎಲ…ಡಿ ಬ್ಯಾಂಕ್‌ ನಿರ್ದೇಶಕ ತಮ್ಮಣ್ಣ ಸೇರಿದಂತೆ ನೂರಾರು ಮಂದಿ ಇದ್ದರು.

click me!