ಕಲಬುರಗಿ ಜಿಪಂಗೆ ಡಿಜಿಟಲ್‌ ಸ್ಪರ್ಶ ನೀಡಿದ ಬದೋಲೆ

By Kannadaprabha NewsFirst Published Feb 7, 2023, 12:32 PM IST
Highlights

ಕಲಬುರಗಿ ಜಿಲ್ಲೆಯ ಹೊಸ ಗ್ರಾಮ ಪಂಚಾಯತಿಗಳನ್ನು ಹೊರತುಪಡಿಸಿ 219 ಗ್ರಾಪಂಗಳಲ್ಲಿ ಗ್ರಂಥಾಲಯಗಳಿದ್ದು, ಇವುಗಳಲ್ಲಿ 93 ಗ್ರಾಪಂಗಳಲ್ಲಿ ಡಿಜಿಟಲ್‌ ಗ್ರಂಥಾಲಯಗಳನ್ನು ಮತ್ತು ಇದರಲ್ಲಿ ಪ್ರಾಯೋಗಿಕವಾಗಿ 12 ಬಿಕಾನ ಗ್ರಂಥಾಲಯಗಳು ವಿಶೇಷವಾಗಿ ಅಂಧತ್ವ ಮತ್ತು ವಿಶೇಷ ಚೇತನರಿಗಾಗಿ ಸ್ಥಾಪಿಸಲಾಗಿದೆ. ಬರುವಂತಹ ದಿನದಲ್ಲಿ ಜಿಲ್ಲೆಯ ಇನ್ನುಳಿದ ಎಲ್ಲಾ ಗ್ರಾಪಂಗಳ ಗ್ರಂಥಾಲಯಗಳಲ್ಲಿ ಬಿಕಾನ ಗ್ರಂಥಾಲಯಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.

ಕಲಬುರಗಿ(ಫೆ.07):  ಕಲಬುರಗಿ ಜಿಲ್ಲಾ ಪಂಚಾಯಿತಿಗೆ ಕಳೆದ ಎಂಟು ತಿಂಗಳ ಹಿಂದೆ ಸಿಇಓ ಆಗಿ ಬಂದ ಡಾ. ಗಿರೀಶ್‌ ಡಿ. ಬದೋಲೆ ಇ-ಕಚೇರಿ ಅನುಷ್ಠಾನ, ಗ್ರಾಮ ಪಂಚಾಯತಿಯಲ್ಲಿ ಡಿಜಿಟಲ್‌ ಲೈಬ್ರರಿ ಸ್ಥಾಪಿಸುವ ಮೂಲಕ ಪಂಚಾಯತಿಗಳಿಗೆ ಡಿಜಿಟಲ್‌ ಸ್ಪರ್ಶ ನೀಡಿದ್ದಾರೆ.

ಜಿಲ್ಲೆಯ ಹೊಸ ಗ್ರಾಮ ಪಂಚಾಯತಿಗಳನ್ನು ಹೊರತುಪಡಿಸಿ 219 ಗ್ರಾಪಂಗಳಲ್ಲಿ ಗ್ರಂಥಾಲಯಗಳಿದ್ದು, ಇವುಗಳಲ್ಲಿ 93 ಗ್ರಾಪಂಗಳಲ್ಲಿ ಡಿಜಿಟಲ್‌ ಗ್ರಂಥಾಲಯಗಳನ್ನು ಮತ್ತು ಇದರಲ್ಲಿ ಪ್ರಾಯೋಗಿಕವಾಗಿ 12 ಬಿಕಾನ ಗ್ರಂಥಾಲಯಗಳು ವಿಶೇಷವಾಗಿ ಅಂಧತ್ವ ಮತ್ತು ವಿಶೇಷ ಚೇತನರಿಗಾಗಿ ಸ್ಥಾಪಿಸಲಾಗಿದೆ. ಬರುವಂತಹ ದಿನದಲ್ಲಿ ಜಿಲ್ಲೆಯ ಇನ್ನುಳಿದ ಎಲ್ಲಾ ಗ್ರಾಪಂಗಳ ಗ್ರಂಥಾಲಯಗಳಲ್ಲಿ ಬಿಕಾನ ಗ್ರಂಥಾಲಯಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ 2023: ಅಫಜಲ್ಪುರ ಅಸೆಂಬ್ಲಿಯಲ್ಲಿ ಕದನ ಕುತೂಹಲ

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ಗ್ರಂಥಾಲಯಗಳ ವಿವರಗಳನ್ನು ಗೂಗಲ್‌ ಮ್ಯಾಪ್ನಲ್ಲಿ ಅಳವಡಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್‌ ಸಿಇಓ ಡಾ. ಗಿರೀಶ್‌ ಡಿ. ಬದೋಲೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಅವಿಭಜಿತ 7 ತಾಲೂಕುಗಳಲ್ಲಿ ಹೊಸ ಕೆಸ್ವಾನ್‌ ಸಂಪರ್ಕ ಕಲ್ಪಿಸಿದ್ದು, ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಬಹುದಾಗಿದ್ದು, ಇದರಿಂದ ಸಾಕಷ್ಟುಸಮಯ ಉಳಿಯಲಿದೆ. ಅಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಆಡಳಿತವನ್ನು ತ್ವರಿತಗೊಳಿಸಲು ಸಕಾರಾತ್ಮಕ ಹೆಜ್ಜೆ ಇದಾಗಿದೆ.

ಇದಲ್ಲದೆ ಜಿಲ್ಲಾ ಪಂಚಾಯಿತಿ ವೈಬ್‌ಸೈಟ್‌ನ್ನು ಹೊಸದಾಗಿ https://zpkalaburagi.karnataka.gov.in ಅಭಿವೃದ್ಧಿಪಡಿಸಲಾಗಿದ್ದು, ಜಿಲ್ಲಾ ಪಂಚಾಯಿತಿಯಿಂದ ಹೊರಡಿಸಿದ ಆದೇಶ, ಸುತ್ತೋಲೆ, ಕ್ರಿಯಾ ಯೋಜನೆ ಹಾಗೂ ಇನ್ನಿತರೆ ಮಾಹಿತಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಇದರಲ್ಲಿ ಅಪಲೋಡ್‌ ಮಾಡಲಾಗುವುದು ಎಂದು ಬದೋಲೆ ತಿಳಿಸಿದ್ದಾರೆ.

ಇ-ಕಚೇರಿ ಅನುಷ್ಠಾನ:

ಜಿಲ್ಲಾ ಪಂಚಾಯತಿಯ ಎಲ್ಲಾ ಶಾಖೆಗಳಲ್ಲಿ ಈಗಾಗಲೆ ಇ-ಕಚೇರಿ ಮೂಲಕ ಕಡತಗಳು ವಿಲೇವಾರಿ ಮಾಡಲಾಗುತ್ತಿದೆ. ಉಳಿದಂತೆ ಎರಡು ತಾಲೂಕುಗಳಲ್ಲಿ ಇ-ಆಫೀಸ್‌ ಅನುಷ್ಠಾನಗೊಳಿಸಿದ್ದು, ಬರುವ 15 ದಿವಸದಲ್ಲಿ ಉಳಿದ ತಾಲೂಕು ಕಚೇರಿಯಲ್ಲಿ ಇ-ಆಫೀಸ್‌ ಮೂಲಕವೇ ಕಾರ್ಯನಿರ್ವಹಣೆ ನಡೆಯಲಿದೆ. 

click me!