ಬೆಳಗಾವಿಯಲ್ಲಿ ಕೊರೋನಾಗೆ ವೈದ್ಯ, ತಾಯಿ ಬಲಿ

Kannadaprabha News   | Asianet News
Published : May 25, 2021, 07:24 AM IST
ಬೆಳಗಾವಿಯಲ್ಲಿ ಕೊರೋನಾಗೆ ವೈದ್ಯ, ತಾಯಿ ಬಲಿ

ಸಾರಾಂಶ

ಕೊರೋನಾ ವಾರಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿಯ ವೈದ್ಯರು ಕೊರೋನಾಗೆ ಬಲಿ ರೆಸಿಡೆಂಟ್‌ ಡಾಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ವೈದ್ಯ ಡಾ. ಮಹೇಶ ಪಾಟೀಲ (37)  ನಿಧನ ಇವರ ತಾಯಿ ಕೂಡ ಕೊರೋನಾಗೆ ಬಲಿ

ಬೆಳಗಾವಿ (ಮೇ.25): ಕೊರೋನಾ ವಾರಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿಯ ವೈದ್ಯರು ಕೊರೋನಾಗೆ ಬಲಿಯಾಗಿದ್ದಾರೆ. 

ಇಲ್ಲಿನ ಚಿಲ್ಡ್ರನ್ಸ್‌ ಹಾಸ್ಪಿಟಲ್‌ನಲ್ಲಿ ರೆಸಿಡೆಂಟ್‌ ಡಾಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ವೈದ್ಯ ಡಾ. ಮಹೇಶ ಪಾಟೀಲ (37) ಸಾವನ್ನಪ್ಪಿದ್ದು ಇವರ ತಾಯಿ ಕೂಡ ಕೊರೋನಾಗೆ ಬಲಿಯಾಗಿದ್ದಾರೆ. ಡಾ. ಮಹೇಶ ಅವರು ಇತ್ತೀಚೆಗೆ ಕೊರೋನಾ ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ್ದರು.

ಬೆಳಗಾವಿ: ಬೈಎಲೆಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಮತ್ತೋರ್ವ ಶಿಕ್ಷಕಿ ಕೋವಿಡ್‌ ಬಲಿ

ನಂತರ ಹೋಮ್‌ ಐಸೋಲೇಷನ್‌ನಲ್ಲಿದ್ದರು. ಬಳಿಕ ಅವರ ತಂದೆ, ತಾಯಿಗೂ ಕೋವಿಡ್‌ ಸೋಂಕು ದೃಢವಾಗಿತ್ತು. ಉಸಿರಾಟದ ತೊಂದರೆಯಿಂದ ಮೊದಲು ಡಾ.ಮಹೇಶ ಆಸ್ಪತ್ರೆಗೆ ದಾಖಲಾಗಿದ್ದರು. 

ಬಳಿಕ ತಾಯಿ ಸುಮಿತ್ರಾ ಅವರೂ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮೊದಲು ಮಗ ಸಾವನ್ನಪ್ಪಿದರೆ, ಬಳಿಕ ತಾಯಿಯೂ ಮೃತಪಟ್ಟರು. ವೈದ್ಯ ಮಹೇಶಗೆ ಒಂದೂವರೆ ವರ್ಷದ ಹೆಣ್ಣು ಮಗು, ಪತ್ನಿ ಇದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಚಿಕ್ಕೋಡಿ: ತಂದೆಯಿಂದಲೇ ಮಗನ ಹತ್ಯೆ! ಭೀಕರ ಕೊಲೆ ರಹಸ್ಯ ಬಯಲಿಗೆಳೆದ ಸ್ನೇಹಿತರು, ಅಪ್ಪನ ಶವಸಂಸ್ಕಾರದಿಂದ ಹುಟ್ಟಿತು ಅನುಮಾನ
ಜೆಡಿಎಸ್ ಕೋಟೆಯಲ್ಲಿ ದಳಪತಿಗಳ ದಂಡಯಾತ್ರೆ: ಹಾಸನ ವಶಕ್ಕೆ ದೇವೇಗೌಡರ ಸಮಾವೇಶ, ಅರಸೀಕೆರೆಗೆ ರೇವಣ್ಣ ಜಿಗಿತ!