* ಆಡಿಯೋ ಬಾಂಬ್ ಸ್ಫೋಟ ಪ್ರಕರಣ
* ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ ಶರಣಗೌಡ ಕಂದಕೂರು
* ಆಪರೇಷನ್ ಕಮಲ ನಡೆಸಲು ಆಮಿಷ ಮುಂದಿಟ್ಟಿದ್ದ ಆರೋಫ
* ಮೇಲಿನ ನ್ಯಾಯಾಲಯಕ್ಕೆ ಹೋಗುವುದು ಅನಿವಾರ್ಯ ಎಂದ ಜೆಡಿಎಸ್ ನಾಯಕ
ರಾಯಚೂರು(ಮೇ 24) ಸಿಎಂ ಬಿಎಸ್ ಯಡಿಯೂರಪ್ಪ ಆಡಿಯೋ ಬಾಂಬ್ ಸ್ಫೋಟ ಪ್ರಕರಣಕ್ಕೆ ಮರುಜೀವ ಬಂದಿದೆ. 2019 ರಲ್ಲಿ ಸಿಎಂ, ಜೆಡಿಎಸ್ ಮುಖಂಡ ಶರಣಗೌಡ ಕಂದಕೂರು ದೇವದುರ್ಗ ಜತೆ ಮಾತನಾಡಿದ್ದಾರೆ ಎಂಬ ಆಡಿಯೋ ಸುದ್ದಿ ಮಾಡಿತ್ತು. ಆಪರೇಷನ್ ಕಮಲದ ಲಿಂಕ್ ಪಡೆದುಕೊಂಡಿತ್ತು.
ರಾಯಚೂರಿನಲ್ಲಿ ವಿಚಾರಣೆ ಹಾಜರಾದ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ಮಾತನಾಡಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಸಿಎಂ ವಿರುದ್ಧ ತನಿಖೆ ಮಾಡಬೇಕೆಂದು ಆದೇಶ ಬಂದಿತ್ತು. ಹೀಗಾಗಿ ತನಿಖಾ ಅಧಿಕಾರಿಯಾಗಿ ರಾಯಚೂರು ಡಿವೈಎಸ್ ಪಿ ಅವರನ್ನು ನೇಮಕ ಮಾಡಲಾಗಿದೆ. ರಾಯಚೂರು ಡಿವೈಎಸ್ ಪಿ ನೋಟೀಸ್ ನೀಡಿ ನಮಗೆ ಬರಲು ಹೇಳಿದ್ದರು. ಇದರಿಂದಾಗಿ ಇಂದು ವಿಚಾರಣೆ ಬಂದಿದ್ದೇನೆ ನಾವು ಮಾಡಿರುವ ಆಡಿಯೋ ಹಾಗೂ ನಮ್ಮ ಹೇಳಿಕೆಗಳು ಪಡೆದುಕೊಂಡಿದ್ದಾರೆ ಎಂದರು.
undefined
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸಂಸದ
ನನಗೆ ನೂರಕ್ಕೆ ನೂರು ನ್ಯಾಯ ಸಿಗಲ್ಲ ಎನ್ನುವುದು ಗೊತ್ತಾಗಿದೆ ಆದ್ರೂ ಪೊಲೀಸ್ ಅಧಿಕಾರಿಗಳ ಮೇಲೆ ವಿಶ್ವಾಸವಿದೆ. ಒಬ್ಬ ಡಿವೈಎಸ್ ಪಿ ಸಿಎಂ ವಿರುದ್ಧ ಯಾವ ರೀತಿ ತನಿಖೆ ಮಾಡಲು ಆಗುತ್ತೆ? ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಬೇಕಾಗಿತ್ತು. ರಾಜೀನಾಮೆ ನೀಡದೇ ತನಿಖೆ ನಡೆದಿದ್ದರಿಂದ ಮುಂದೆ ಏನಾಗುತ್ತೆ ಎಂಬುವುದು ನಮಗೆ ಗೊತ್ತು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಿ ರಿಪೋರ್ಟ್ ಹಾಕುವರು. ರಿಪೋರ್ಟ್ ಬಂದ ಬಳಿಕ ನಾವು ಮೇಲಿನ ಕೋರ್ಟ್ ಗೆ ತೆರಳುವುದು ಅನಿವಾರ್ಯ ಎಂದರು.
ಸತ್ಯಕ್ಕೆ ನ್ಯಾಯ ಸಿಗದೇ ಇದ್ದಾಗ ಮುಂದೆ ಹೈಕೋರ್ಟ್ , ಸುಪ್ರೀಂ ಕೋರ್ಟ್ ಅಥವಾ ಇಡಿ ಮೊರೆ ಹೋಗಬೇಕಾಗುತ್ತದೆ ಆಡಿಯೋದಲ್ಲಿ ಎಲ್ಲವೂ ಇದೆ..ನ್ಯಾಯ ಸಿಗದೇ ಇದ್ದರೆ ಕಾನೂನು ಹೋರಾಟಕ್ಕೆ ನಾವು ಸಿದ್ಧ ಎಂದು ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ತಿಳಿಸಿದ್ದಾರೆ.