ಸಾರಿಗೆ ನೌಕರರಿಗೆ ಮಿಡಿದ ಸರ್ಕಾರ, ವೇತನ ಪಾವತಿಗೆ ಹಣ

By Suvarna News  |  First Published May 24, 2021, 10:53 PM IST

*ಸಾರಿಗೆ ನೌಕರರ ಸಂಕಷ್ಟಕ್ಕೆ ಮಿಡಿದ ಸರ್ಕಾರ
* ಏಪ್ರಿಲ್ ಮತ್ತು  ಮೇ ತಿಂಗಳ ವೇತನ ಬಿಡುಗಡೆ
* ಕೆಲ ಷರತ್ತುಗಳನ್ನು ವಿಧಿಸಿ ಅನುದಾಣ ನೀಡಿದ ಸರ್ಕಾರ


ಬೆಂಗಳೂರು(ಮೇ 24)  ಈ ಕೊರೋನಾ ಸಂಕಷ್ಟದ ಕಾಲದಲ್ಲಿ ಎಲ್ಲ ವರ್ಗದವರು ತೊಂದರೆಯಲ್ಲಿ ಇದ್ದಾರೆ.  ಕರ್ನಾಟಕದ ಸರ್ಕಾರ ಕೆಲ ದಿನಗಳ ಹಿಂದೆ ಪ್ಯಾಕೇಜ್ ಒಂದನ್ನು ಘೋಷಣೆ ಮಾಡಿ ಕಾರ್ಮಿಕರು ಮತ್ತು ದುಡಿಯುವ ವರ್ಗವದವರ ನೆರವಿಗೆ ನಿಂತಿತ್ತು. ಇದೀಗ ಸಾರಿಗೆ ನೌಕರರಿಗೂ ವೇತನ ಬಿಡುಗಡೆ ಮಾಡಿದೆ.

ಏಪ್ರಿಲ್ ಮತ್ತು ಮೇ ತಿಂಗಳ ಸಂಬಳ ಬಿಡುಗಡೆ ಮಾಡಿದೆ. ರಾಜ್ಯ ಸಾರಿಗೆ ನಿಗಮಗಳಿಗೆ 325 ಕೋಟಿ ರೂ. ಬಿಡುಗಡೆ ಮಾಡಿದೆ. ವಿಶೇಷ ಪ್ರಕರಣ ಅಂತ ಪರಿಗಣಿಸಿ ಸಾರಿಗೆ ನಿಗಮಗಳಿಗೆ ಅನುದಾನ ನೀಡಿದೆ. ಜತೆಗೆ ಕೆಲವೊಂದು ನಿಯಮಾವಳಿಗಳನ್ನು ಸ್ಪಷ್ಟಪಡಿಸಿದೆ.

Tap to resize

Latest Videos

ಬಿಎಸ್‌ವೈ ಕೊರೋನಾ ಪ್ಯಾಕೇಜ್, ಯಾರಿಗೆಲ್ಲ ಲಾಭ

ಸಾರಿಗೆ ನಿಗಮಗಳು  975 ಕೋಟಿ ರೂ. ಕೇಳಿದ್ದವು. ಹೊಸ ಬಸ್ ಖರೀದಿ ಮಾಡುವಂತೆ ಇಲ್ಲ, ತುಟ್ಟಿ ಭತ್ಯೆ ಸೇರಿ ಇತರೆ ಭತ್ಯೆಗೆ ಹಣ ಬಳಸಿಕೊಳ್ಳುವಂತೆ ಇಲ್ಲ. ವೇತನ ಪಾವತಿಗೆ ಹಣ ಬಳಕೆಯಾಗಬೇಕು ಎಂದು ಸ್ಪಷ್ಟಪಡಿಸಿದೆ.

ಏಪ್ರಿಲ್ ಆರಂಭದ ದಿನಗಳಲ್ಲಿ ಸಾರಿಗೆ ನೌಕರರು ವಿವಿಧ ಬೇಡಿಕೆ ಪೂರೈಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ನಮಥರ ಕೊರೋನಾ ಲಾಕ್ ಡೌನ್ ನಿಯಮಾವಳಿ ಜಾರಿಯಾಗಿದ್ದು  ಅಗತ್ಯ ಇರುವ ಬಸ್ ಗಳು ಮಾತ್ರ ಓಡಾಡುತ್ತಿವೆ .

 

 

 

click me!