Mysuru: ಇತಿಹಾಸ ತಿರುಚುವಂತಹ ಶಿಕ್ಷಣ ವ್ಯವಸ್ಥೆಯಿಂದ ಗೊಂದಲ: ಶಾಸಕ ಹರ್ಷವರ್ಧನ್‌

By Govindaraj SFirst Published Sep 8, 2022, 1:03 PM IST
Highlights

ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ತಿರುಚುವಂತಹ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಗೊಂದಲ ಮೂಡುತ್ತಿದೆ. ಶಿಕ್ಷಕರು ನಮ್ಮ ಸಂಸ್ಕೃತಿ, ಪಂರಂಪರೆ, ಸರಿಯಾದ ಇತಿಹಾಸವನ್ನು ತಿಳಿಸಿ ಮಾರ್ಗದರ್ಶನ ನೀಡಬೇಕಿದೆ ಎಂದು ಶಾಸಕ ಬಿ.ಹರ್ಷವರ್ಧನ್‌ ಹೇಳಿದರು. 

ನಂಜನಗೂಡು (ಸೆ.08): ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ತಿರುಚುವಂತಹ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಗೊಂದಲ ಮೂಡುತ್ತಿದೆ. ಶಿಕ್ಷಕರು ನಮ್ಮ ಸಂಸ್ಕೃತಿ, ಪಂರಂಪರೆ, ಸರಿಯಾದ ಇತಿಹಾಸವನ್ನು ತಿಳಿಸಿ ಮಾರ್ಗದರ್ಶನ ನೀಡಬೇಕಿದೆ ಎಂದು ಶಾಸಕ ಬಿ.ಹರ್ಷವರ್ಧನ್‌ ಹೇಳಿದರು. ತಾಲೂಕಿನ ಸಿಂಧುವಳ್ಳಿ ಗ್ರಾಮದ ಬಳಿಯಿರುವ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಗುರುವಂದನೆ ಮತ್ತು ಪ್ರಶಸ್ತಿ ಪ್ರದಾನ ನಡೆಸಿ ಅವರು ಮಾತನಾಡಿದರು.

ಭಾರತ ದೇಶ ಉತ್ತಮ ಸಂಸ್ಕೃತಿ, ಗುರುಪರಂಪರೆ ಹೊಂದಿರುವ ದೇಶವಾಗಿದೆ. ವಿಜ್ಞಾನ, ಗಣಿತ ವಿಷಯಗಳಲ್ಲಿನ ಸೂತ್ರಗಳನ್ನು ಬದಲಿಸಲು ಸಾಧ್ಯವಿಲ್ಲ, ಆದರೆ ಇತಿಹಾಸ ವಿಷದಲ್ಲಿ ಸತ್ಯ ಘಟನೆಯನ್ನು ಮರೆ ಮಾಚುವ, ಜೊತೆಗೆ ಎಡಪಂಥೀಯವಾದ, ಬಲಪಂಥೀಯ ಎಂಬ ನೈಜ ಇತಿಹಾಸ ತಿರುಚುವಂತಹ ಕೆಲಸದಿಂದಾಗಿ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ಮೂಡುತ್ತಿದೆ. ಈ ಗೊಂದಲ ನಿವಾರಿಸಿ ಸರಿಯಾದ ಮಾರ್ಗದರ್ಶನ ನೀಡಿ ಮುನ್ನಡೆಸಿ ಅಲ್ಲದೆ ಶಿಕ್ಷಕರು ಮೊಬೈಲ್‌ ಬಿಟ್ಟು ಪುಸ್ತಕದ ಓದುವ ಜೊತೆಗೆ ಕಾಲ ಕಾಲಕ್ಕೆ ತಕ್ಕಂತೆ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು, ಆಗ ಮಾತ್ರ ಉತ್ತಮ ಶಿಕ್ಷಣ ದೊರಕಲು ಸಾಧ್ಯ ಎಂದು ಕಿವಿಮಾತು ಹೇಳಿದರು.

Latest Videos

ಮೈಸೂರು ಮಹಾನಗರ ಪಾಲಿಕೆ: ಜೆಡಿಎಸ್‌ ಎಡವಟ್ಟಿನಿಂದ ತಪ್ಪಿದ ಉಪ ಮೇಯರ್‌ ಸ್ಥಾನ!

ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ದೇಶವನ್ನು ಅಭಿವೃದ್ದಿ ಪಥದತ್ತ ಕೊಡೊಯ್ಯಲು ಭದ್ರ ಬುನಾದಿ ಹಾಕುವಂತಹ ಮತ್ತು ವಿದ್ಯಾರ್ಥಿಗಳ ಉತ್ತಮ ವ್ಯಕ್ತಿತ್ವ ರೂಪಿಸುವಂತಹ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಉತ್ತಮ ದೇಶ ಕಟ್ಟಲು ಸದಾ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯವಾದದ್ದು ಎಂದರು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಅಭಿನಂದಿಸಲಾಯಿತು.

ಕಾಂಪೋಸ್ಟ್‌ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್‌. ಮಹದೇವಯ್ಯ, ಜಿಪಂ ಮಾಜಿ ಸದಸ್ಯ ಎಸ್‌.ಎಂ. ಕೆಂಪಣ್ಣ, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ, ಮಾಜಿ ಸದಸ್ಯರಾದ ಬಿ.ಎಸ್‌. ರಾಮು, ಶಿವಣ್ಣ, ಮುಖಂಡರಾದ ಕುಂಬ್ರಳ್ಳಿ ಸುಬ್ಬಣ್ಣ, ತಾಪಂ ಇಓ ಶ್ರೀನಿವಾಸ್‌, ಬಿಇಓ ಸಿ.ಎನ್‌.ರಾಜು, ಬಿಆರ್‌ಸಿ ಕೆ.ಜಿ. ಮಹೇಶ್‌, ಅಕ್ಷರದಾಸೋಹ ಅಧಿಕಾರಿ ಮಲ್ಲಿಕಾರ್ಜುನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರತ್ನಾಕರ, ಸಿ. ಕಾರಯ್ಯ ಇದ್ದರು.

ಶಿಕ್ಷಣ ತುಂಬಿ ದಾರಿದೀಪವಾಗಿರುವ ಶಿಕ್ಷಕರು: ಶಿಕ್ಷಕರ ವೃತ್ತಿ ಪವಿತ್ರವಾದ ವೃತ್ತಿ, ಶಿಲ್ಪಿ ಕಲ್ಲನ್ನು ಕೆತ್ತಿ ಮೂರ್ತಿ ಮಾಡಿದಾಗ ಶಿಕ್ಷಕರು ಮುದ್ದು ಮಕ್ಕಳ ಮನಸ್ಸಿಗೆ ಶಿಕ್ಷಣವನ್ನು ತುಂಬಿ ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಿದ್ದಾರೆ ಶಾಸಕ ಎಂ. ಅಶ್ವಿನ್‌ಕುಮಾರ್‌ ಹೇಳಿದರು. ಪಟ್ಟಣ ಪಿಟಿಲ್‌ ಚೌಡಯ್ಯ ವೃತ್ತದ ಬಳಿಯಿರುವ ಶ್ರೀನಿವಾಸ್‌ ಕನ್ವೇಷನ್‌ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೊದಲಿಗೆ ಜ್ಯೋತಿಬಾಪುಲೆ ಸಾವಿತ್ರಿ ಬಾಯಿ ಹಾಗೂ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಐಪಿಎಸ್‌, ಐಎಎಸ್‌ ಅಥವಾ ಎಂತಹ ರಾಜಕಾರಣಿಗಳಾದರು ಅವರಿಗೆ ಶಿಕ್ಷಣ ಕಲಿಸಿದ ಗುರುಗಳನ್ನು ಕಂಡ ಕ್ಷಣದಲ್ಲಿ ನಮಸ್ಕರಿಸಿ ಹೋಗುತ್ತಾರೆ, ಏಕೆಂದರೆ ಗುರುವಿನ ಸ್ಥಾನ ಅಂಥವುದು ಎಂದರು. ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಶುಭ ಕೋರಿದರು. ವಿಚಾರವಾದಿ ಕೆ.ಎನ್‌. ಪ್ರಭುಸ್ವಾಮಿ ಮಾತನಾಡಿ, ಜ್ಯೋತಿ ಬಾಪುಲೆ ಅಕ್ಷರ ತಾಯಿ ಸಾವಿತ್ರಿಬಾಯಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್‌, ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಶಿಕ್ಷಣಕ್ಕಾಗಿ ನೀಡಿದ ಕೊಡುಗೆ ಹಾಗೂ ಅವರ ವಿಚಾರಧಾರೆಗಳನ್ನು ಶಿಕ್ಷಕರಿಗೆ ನೆನಪು ಮಾಡಿಕೊಟ್ಟರು.

Mysuru: ಮಳೆಹಾನಿಯಾದ ಪ್ರದೇಶಗಳಿಗೆ ಶಾಸಕ ಜಿ.ಟಿ.ದೇವೇಗೌಡ ಭೇಟಿ

ತಹಸೀಲ್ದಾರ್‌ ಗೀತಾ ಮಾತನಾಡಿದರು. ಇಓ ಕೃಷ್ಣ, ಬಿಇಒ ಮರಿಸ್ವಾಮಿ, ಬಿಆರ್‌ಸಿ ನಾಗೇಶ್‌, ಮಂಜುಳಾ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ, ಶಿಕ್ಷಕ ಸಂಘದ ಅಧ್ಯಕ್ಷ ಎಚ್‌.ಡಿ. ಮಾದಪ್ಪ, ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ಸುಬ್ರಹ್ಮಣ್ಯ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪ್ರಸಾದ್‌, ಪ್ರಧಾನ ಕಾರ್ಯದರ್ಶಿ ನಾಗರಾಜು ,ಕೆ.ಪಿ. ಮಹದೇವಸ್ವಾಮಿ, ಪುಟ್ಟರಾಜು, ಸೂರ್ಯಕುರ್ಮಾ, ಬಿಸಿಒ ಮಹದೆವಸ್ವಾಮಿ, ಸಿಆರ್‌ಪಿ ಮಹದೇವಸ್ವಾಮಿ, ಧರ್ಮೇಂದ್ರ, ಕುಮಾರ, ವಿಶ್ವನಾಥ್‌ ಇದ್ದರು.

click me!