Namma Metro: ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಚುರುಕು

Published : Sep 08, 2022, 12:33 PM IST
Namma Metro: ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಚುರುಕು

ಸಾರಾಂಶ

ಬೆಂಗಳೂರು ಮಹಾನಗರವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುವ ಮತ್ತು ಐಟಿ ಹಬ್‌ ಹೊರ ವರ್ತುಲ ರಸ್ತೆ ಗುಂಟ ಸಾಗುವ ಸಿಲ್ಕ್‌ಬೋರ್ಡ್‌-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ (2ಎ) ಮೆಟ್ರೋ ಕಾಮಗಾರಿ ವೇಗದಿಂದ ನಡೆಯುತ್ತಿದೆ. 

ಬೆಂಗಳೂರು (ಸೆ.08): ಬೆಂಗಳೂರು ಮಹಾನಗರವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುವ ಮತ್ತು ಐಟಿ ಹಬ್‌ ಹೊರ ವರ್ತುಲ ರಸ್ತೆ ಗುಂಟ ಸಾಗುವ ಸಿಲ್ಕ್‌ಬೋರ್ಡ್‌-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ (2ಎ) ಮೆಟ್ರೋ ಕಾಮಗಾರಿ ವೇಗದಿಂದ ನಡೆಯುತ್ತಿದೆ. ಸಂಪೂರ್ಣವಾಗಿ ಮೇಲ್ಮಟ್ಟದಲ್ಲಿ (ಎಲಿವೇಟೆಡ್‌) ಸಾಗುವ ಈ ಮಾರ್ಗದಲ್ಲಿ ಒಟ್ಟು 1678 ಮೆಟ್ರೋ ಕಂಬಗಳು ಬರಲಿದ್ದು, ಈಗಾಗಲೇ 159 ಕಂಬಗಳನ್ನು ಅಳವಡಿಸಲಾಗಿದೆ. ಉಳಿದ ಕಂಬಗಳ ನಿರ್ಮಾಣ ಕಾಮಗಾರಿ ವಿವಿಧ ಹಂತದಲ್ಲಿ ಇವೆ.

ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಆರಂಭಗೊಂಡಿದ್ದ ಈ ಮಾರ್ಗದ ಮೆಟ್ರೋ ಕಾಮಗಾರಿಯಲ್ಲಿ ಪ್ರಮುಖವಾಗಿರುವ ಕಂಬಗಳ ಅಳವಡಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಅಳವಡಿಸಿರುವ ಕಂಬಗಳ ಪೈಕಿ 43 ಕಂಬಗಳಿಗೆ ಟೋಪಿ ಅಳವಡಿಸಲಾಗಿದೆ. 14 ಕಂಬಗಳಿಗೆ ಸ್ಪ್ಯಾನ್‌ (ಎರಡು ಕಂಬಗಳ ನಡುವೆ ಇರುವ ಗರ್ಡರ್‌) ಅಳವಡಿಕೆ ಕಾಮಗಾರಿ ನಡೆದಿದೆ. ಕೋಡಿಬೀಸನಹಳ್ಳಿ-ಟಿನ್‌ ಫ್ಯಾಕ್ಟರಿ ಮಧ್ಯೆಯ ಕಾಮಗಾರಿ ಉಳಿದ ಭಾಗಗಳಿಗಿಂತ ವೇಗವಾಗಿ ಸಾಗುತ್ತಿದೆ. ಈ ಭಾಗದಲ್ಲಿ ಬರುವ 259 ಕಂಬಗಳಲ್ಲಿ ಈಗಾಗಲೇ 70 ಕಂಬಗಳನ್ನು ಅಳವಡಿಸಲಾಗಿದ್ದು, 29 ಕಂಬಗಳಿಗೆ ಟೋಪಿ ಅಳವಡಿಸಲಾಗಿದೆ. 

Namma Metro: ಮೆಟ್ರೋ ಯೋಜನೆಗೆ ಕಡಿದ ಮರಕ್ಕೆ ಪರ್ಯಾಯವಾಗಿ ನೆಟ್ಟ ಸಸಿ ಎಲ್ಲಿವೆ?: ಹೈಕೋರ್ಟ್‌

14 ಸ್ಪ್ಯಾನ್‌ಗಳನ್ನು ಅಳವಡಿಸಲಾಗಿದೆ. ಹೆಬ್ಬಾಳದಿಂದ ಏರ್‌ಪೋರ್ಟ್‌ ತನಕ 711 ಕಂಬಗಳನ್ನು ಹಾಕಬೇಕಿದ್ದು, ಈ ಪೈಕಿ 62 ಕಂಬಗಳನ್ನು ಅಳವಡಿಸಲಾಗಿದೆ. ಸಿಲ್ಕ್‌ ಬೋರ್ಡ್‌ನಿಂದ ಕೋಡಿಬೀಸನಹಳ್ಳಿ ಮಧ್ಯೆ332 ಕಂಬಗಳಲ್ಲಿ ಈಗಾಗಲೇ 20 ಕಂಬಗಳನ್ನು ಹಾಕಲಾಗಿದೆ. 14 ಕಂಬಗಳಿಗೆ ಟೋಪಿಯನ್ನು ಅಳವಡಿಸಲಾಗಿದೆ. ಟಿನ್‌ ಫ್ಯಾಕ್ಟರಿಯಿಂದ ಹೆಬ್ಬಾಳದ ಮಧ್ಯೆ 376 ಕಂಬಗಳಲ್ಲಿ ಕೇವಲ 7 ಕಂಬಗಳನ್ನು ಅಳವಡಿಸಲಾಗಿದೆ. ನೀಲಿ ಮಾರ್ಗದ 2ಎ ಲೈನ್‌ ಆದ ಸಿಲ್ಕ್‌ ಬೋರ್ಡ್‌ನಿಂದ ಟಿನ್‌ ಫ್ಯಾಕ್ಟರಿಯವರೆಗಿನ ಕಾಮಗಾರಿ ಹೆಚ್ಚು ವೇಗವಾಗಿ ಸಾಗುತ್ತಿದೆ. 

ಟಿನ್‌ ಫ್ಯಾಕ್ಟರಿಯಿಂದ ವಿಮಾನ ನಿಲ್ದಾಣದ ತನಕದ (2ಬಿ) ಕಾಮಗಾರಿ ತಡವಾಗಿ ಪ್ರಾರಂಭವಾಗಿದ್ದು, ನಿರ್ಮಾಣ ಕೆಲಸಗಳು ಪೂರ್ಣಗೊಳ್ಳಬೇಕಿದೆ. ಹಾಗೆಯೇ ಈ ಭಾಗದಲ್ಲಿ ಭೂಮಿ ಹಸ್ತಾಂತರ ಮತ್ತು ಮರ ಕಡಿಯಲು ಅನುಮತಿ ಇನ್ನೂ ಬಾಕಿ ಇರುವುದು ಕೂಡ ಕಾಮಗಾರಿಯ ವೇಗಕ್ಕೆ ತುಸು ಅಡ್ಡಿಯಾಗಿದೆ. 2025ರೊಳಗೆ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಈ ಮಾರ್ಗ ಜನಸಾಮಾನ್ಯರ ಬಳಕೆಗೆ ಲಭ್ಯವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಟ್ರೋ ನಿಗಮಕ್ಕೆ ಗಡುವು ನೀಡಿದ್ದಾರೆ.

ಮೊಬೈಲ್‌ನಲ್ಲೇ ಟಿಕೆಟ್‌ ಖರೀದಿಸಿ ಮೆಟ್ರೋದಲ್ಲಿ ಸಂಚರಿಸಿ

ಟ್ರಾಫಿಕ್‌ ದಟ್ಟಣೆ ನಿವಾರಿಸುವ ಒತ್ತಡ: ಹೊರ ವರ್ತುಲ ರಸ್ತೆಯು ರಾಜ್ಯದ ಐಟಿ ಕಾರಿಡಾರ್‌ ಆಗಿದ್ದು ಮೆಟ್ರೋ ಕಾಮಗಾರಿಯಿಂದ ಟ್ರಾಫಿಕ್‌ ದಟ್ಟಣೆ ಆಗುತ್ತಿರುವುದು ಮತ್ತು ಮೆಟ್ರೋ ಸಂಪರ್ಕ ಇಲ್ಲದಿರುವುದರಿಂದ ಐಟಿ ಉದ್ಯೋಗಿಗಳ ಓಡಾಟಕ್ಕೆ ಸಮಸ್ಯೆ ಆಗುತ್ತಿರುವುದರಿಂದ ಈ ಮಾರ್ಗವನ್ನು ಆದಷ್ಟುಬೇಗ ಪೂರ್ಣಗೊಳಿಸಿ ಜನ ಬಳಕೆಗೆ ಬಿಟ್ಟುಕೊಡಬೇಕು ಎಂಬ ಒತ್ತಡ ಬೆಂಗಳೂರು ಮೆಟ್ರೋ ನಿಗಮದ ಮೇಲಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ