ಜಾಗೃತಿ ಮೂಡಿಸಿದರೂ ನಿಲ್ಲದ ರಸ್ತೆ ಬದಿ ಕಸದ ರಾಶಿ

By Kannadaprabha NewsFirst Published Aug 18, 2022, 8:13 AM IST
Highlights

ಗ್ರಾಪಂ ವತಿಯಿಂದ ಮನೆ ಮನೆಗೆ ಬಂದು ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ಕೊಡಿ ಎಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದರೂ ತಾಲೂಕಿನ ಬನವಾಸಿ ರಸ್ತೆಯ ಕೆಲವು ಭಾಗಗಳಲ್ಲಿ ಕಸ ರಾಶಿ ಹಾಕಲಾಗುತ್ತಿದೆ.

ಶಿರಸಿ (ಆ.18) ಗ್ರಾಪಂ ವತಿಯಿಂದ ಮನೆ ಮನೆಗೆ ಬಂದು ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ಕೊಡಿ ಎಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದರೂ ತಾಲೂಕಿನ ಬನವಾಸಿ ರಸ್ತೆಯ ಕೆಲವು ಭಾಗಗಳಲ್ಲಿ ಕಸ ರಾಶಿ ಹಾಕಲಾಗುತ್ತಿದೆ. ಕಸದ ರಾಶಿ ಮೇಲೆ ಮಳೆ ನೀರು ಬಿದ್ದಾಗ ಅಲ್ಲಿ ರೋಗಗಳನ್ನು ಸೃಷ್ಟಿಸುವ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕಾದ ಸಂಬಂಧಪಟ್ಟಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಕಸದ ರಾಶಿಯಿಂದ ವ್ಯಾಪಿಸಿದ ಬೆಂಕಿ : ದೆಹಲಿಯಲ್ಲಿ ಶಾಲೆ ಬಂದ್‌

ಸ್ವಚ್ಛತೆ ಹೆಸರಿನಲ್ಲಿ ಲಕ್ಷಾಂತರ ರು. ವ್ಯಯಿಸಿದರೂ ಯಾವ ಪ್ರಯೋಜನ ಆಗಿಲ್ಲ. ಸಾರ್ವಜನಿಕರು ಮನೆಗೆ ಬರುವ ಕಸ ವಿಲೇವಾರಿ ವಾಹನಗಳಿಗೆ ಹೆಚ್ಚಾಗಿ ಕಸ ನೀಡುತ್ತಾರೆ. ಆದರೆ ಹೊಟೇಲ…, ಅಂಗಡಿ, ಮಾರುಕಟ್ಟೆವ್ಯಾಪಾರಿಗಳು ಎಲ್ಲಾದರೂ ರಸ್ತೆ ಬದಿಯಲ್ಲಿ ಕಸ ಎಸೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಗ್ರಾಪಂ ಅಧಿಕಾರಿಗಳು ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗಿದೆ. ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಇನ್ನಷ್ಟುಗಮನಹರಿಸಬೇಕಾಗಿದೆ. ಪಟ್ಟಣದಲ್ಲಿ ತ್ಯಾಜ್ಯ ರಾಶಿ ದುರ್ವಾಸನೆ ಬೀರುತ್ತಿದ್ದರೂ ಗ್ರಾಪಂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿನಿತ್ಯ ಐತಿಹಾಸಿಕ ಬನವಾಸಿಗೆ ಬರುವ ನೂರಾರು ಪ್ರವಾಸಿಗರು ಒಮ್ಮೆ ಈ ಕಸದ ರಾಶಿ ನೋಡಿದರೆ ಪಟ್ಟಣದ ಗೌರವ ಘನತೆಯನ್ನು ಗೇಲಿ ಮಾಡುವ ಪರಿಸ್ಥಿತಿ ಎದುರಾಗಿದೆ ಎಂಬುದು ನೊಂದ ನಾಗರಿಕರ ಅಭಿಮತ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡುವ ಇಂತಹ ಸಮಯದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಕಸದ ರಾಶಿಯನ್ನು ವಿಲೇವಾರಿ ಮಾಡುವ ಕಾರ್ಯ ಆಗಿಂದಾಗ್ಗೆ ನಡೆಯುತ್ತಿರಬೇಕು. ಗ್ರಾಪಂ ಎಚ್ಚೆತ್ತು ಗಮನಹರಿಸಿ ಮುಂದೆ ಇಂತಹ ತ್ಯಾಜ್ಯ ಬೀಳದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಬಿದ್ದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.\

ಪ್ರವಾಸಿಗರಿಂದ ಕಸದ ರಾಶಿಯಾಗಿದೆ ಬಲ್ಲಾಳರಾಯನ ದುರ್ಗ, ಸ್ಥಳೀಯರ ಆಕ್ರೋಶ

ಶಿರಸಿ ಪಟ್ಟಣದ ರಸ್ತೆಯ ಅಕ್ಕಪಕ್ಕದಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ. ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ರಸ್ತೆಯ ಅಕ್ಕಪಕ್ಕದಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು.

ಶಿವಾಜಿ ಕಾಳೇರಮನೆ ಸಾಮಾಜಿಕ ಹೋರಾಟಗಾರ

click me!