ಹೂತಿದ್ದ ಶವ ತೆಗೆಯಲು ಪೊಲೀಸರ ಪರದಾಟ..!

By Web Desk  |  First Published Nov 23, 2019, 2:11 PM IST

ಅಪರಿಚಿತ ಶವವನ್ನು ಹೂತು ಹಾಕಿದ್ದ ಪೊಲೀಸರು ಇದೀಗ ಶವ ಹೊರ ತೆಗೆಯಲು ಹರ ಸಾಹಸ ಪಡುತ್ತಿದ್ದಾರೆ. ಶವ ಹೂತಿಟ್ಟ ಸ್ಥಳ ತಿಳಿಯದೆಯೋ, ಯಾವುದೇ ಗುರುತು ಇಲ್ಲದೇ ಜಮೀನು ತುಂಬೆಲ್ಲ ಹೂತಿದ್ದ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.


ಧಾರವಾಡ(ನ.23): ಅಪರಿಚಿತ ಶವವನ್ನು ಹೂತು ಹಾಕಿದ್ದ ಪೊಲೀಸರು ಇದೀಗ ಶವ ಹೊರ ತೆಗೆಯಲು ಹರ ಸಾಹಸ ಪಡುತ್ತಿದ್ದಾರೆ. ಶವ ಹೂತಿಟ್ಟ ಸ್ಥಳ ತಿಳಿಯದೆಯೋ, ಯಾವುದೇ ಗುರುತು ಇಲ್ಲದೇ ಜಮೀನು ತುಂಬೆಲ್ಲ ಹೂತಿಟ್ಟ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹೂತಿದ್ದ ಶವಕ್ಕಾಗಿ ನವಲಗುಂದ ಪೋಲಿಸರು ಪರದಾಡುತ್ತಿದ್ದು, ನವಲಗುಂದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವ ಎಂದು ಮೃತದೇಹವನ್ನು ಹೂತು ಹಾಕಲಾಗಿತ್ತು. ಡಿಸೆಂಬರ್ 4 , 2018 ರಂದು ಅಪರಿಚಿತ ಶವ ಬೆಣ್ಣಿ ಹಳ್ಳದಲ್ಲಿ  ಪತ್ತೆಯಾಗಿತ್ತು. ಕಿತ್ತೂರು ಸಿಪಿಐ ಶ್ರಿಕಾಂತ ತೋಟಗಿ ಪ್ರಕರಣ ಜಾಲಾಡಿದ್ದರು. ಶಿವಪ್ಪ ಬೀಜನ್ನವರ 24 ಕೊಲೆಯಾಗಿದ್ದ ವ್ಯಕ್ತಿಯಾಗಿದ್ದ.

Tap to resize

Latest Videos

undefined

ಚಾಮರಾಜನಗರ: ನಾಡ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿ ಬಂಧನ

ಶಿವಪ್ಪ ಬೀಜನ್ನವರನನ್ನು ಸಂಭಂದಿಕರೇ ಕೊಲೆ ಮಾಡಿ ಕಾಲುವೆಗೆ ಎಸೆದಿದ್ದರು. ಧಾರವಾಡ ಉಪವಿಭಾಗಾದಿಕಾರಿ ಮಹ್ಮದ್ ಜುಬೇರ್, ತಹಶಿಲ್ದಾರ ನವೀನ ಹುಲ್ಲೂರು ಇದೀಗ ಅದಿಕಾರಿಗಳಿಗಾಗಿ ಹೂತಿದ್ದ ಶವ ತೆಗೆಯಲು ಪರದಾಡುತ್ತಿದ್ದಾರೆ.

MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!

ಪಂಚನಾಮೆ ಮಾಡಿದ್ದ ಪೋಲಿಸರಿಗೆ ಹೂತಿದ್ದ ಶವ ಸಿಗದಿರುವುದು ತಲೆನೋವಾಗಿ ಪರಿಣಮಿಸಿದೆ. ಒಂದು ಬಾರಿ ಪ್ರಯತ್ನ ಮಾಡಿ ಶವ ಸಿಗದೆ ಮತ್ತೆ ಬೇರೆ ಸ್ಥಳದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಪೋಲಿಸರ ನಿರ್ಲಕ್ಷ್ಯದಿಂದಾಗಿ ಪಂಚನಾಮೆ ಮಾಡಿದ್ದ ಜಾಗಕ್ಕೆ ಹುಡುಕಾಡುವಂತಾಗಿದೆ.

ವೈಯಾಲಿಕಾವಲ್‌ ಡ್ರಗ್ಸ್ ಪ್ರಕರಣ , ಮೆಡಿಕಲ್ ಶಾಪ್ ಮಾಲೀಕನ ಬಂಧನ

click me!