ಜಾರಕಿಹೊಳಿ ಸಹೋದರರ ಸ್ಪರ್ಧೆ: ಯಾರಿಗೆ ಸಪೋರ್ಟ್ ಮಾಡೋಣ ಅಂತಿದ್ದಾರೆ ಬೆಂಬಲಿಗರು!

By Web DeskFirst Published Nov 23, 2019, 12:47 PM IST
Highlights

ಗೋಕಾಕ್‌ ಉಪಚುನಾವಣೆ| ಜಾರಕಿಹೊಳಿ ಸಹೋದರರ ಸ್ಪರ್ಧೆಯಿಂದ ಬೆಂಬಲಿಗರಲ್ಲಿ ಗೊಂದಲ| ಜಾರಕಿಹೊಳಿ ಬೆಂಬಲಿಗರು ಮಾತ್ರ ಇನ್ನೂ ತಟಸ್ಥರಾಗಿ ಉಳಿದಿದ್ದಾರೆ |ಬಿಜೆಪಿ ಪರ ಮೂವರು ಸಹೋದರರು| ಕಾಂಗ್ರೆಸ್ ಪರ ಇಬ್ಬರು ಜಾರಕಿಹೊಳಿ ಸಹೋದರರು ಕೆಲಸ ಮಾಡುತ್ತಿದ್ದಾರೆ| ಬೆಂಬಲಿಗರು ಮಾತ್ರ ಯಾರ ಪರ ಗುರುತಿಸಕೊಳ್ಳಬೇಕು ಎಂಬುದೇ ಗೊಂದಲಕ್ಕೆ ಕಾರಣ| 

ಬೆಳಗಾವಿ(ನ.23): ಗೋಕಾಕ್‌ ಉಪಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಸ್ಪರ್ಧೆಯಿಂದ ಬೆಂಬಲಿಗರಲ್ಲಿ ಗೊಂದಲ ಉಂಟಾಗಿದೆ. ಡಿಸೆಂಬರ್ 5ಕ್ಕೆ ಉಪಚುನಾವಣೆ ನಡೆಯುತ್ತಿದೆಯಾದರೂ ಜಾರಕಿಹೊಳಿ ಬೆಂಬಲಿಗರು ಮಾತ್ರ ಇನ್ನೂ ತಟಸ್ಥರಾಗಿ ಉಳಿದಿದ್ದಾರೆ. 

ಈ ಉಪಚುನಾವಣೆ ನಮಗೆ ನುಂಗಲಾರದ ಬಿಸಿತುಪ್ಪವಾಗಿದೆ ಎಂದ ಬೆಂಬಲಿಗರು ಹೇಳುತ್ತಿದ್ದಾರೆ. ಯಾಕೆಂದರೆ ಬಿಜೆಪಿಯಿಂದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್‌ನಿಂದ ಲಖನ್ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿ ಪರ ಮೂವರು ಸಹೋದರರು, ಕಾಂಗ್ರೆಸ್ ಪರ ಇಬ್ಬರು ಜಾರಕಿಹೊಳಿ ಸಹೋದರರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬೆಂಬಲಿಗರು ಮಾತ್ರ ಯಾರ ಪರ ಗುರುತಿಸಕೊಳ್ಳಬೇಕು ಎಂಬುದೇ ಗೊಂದಲಕ್ಕೆ ಕಾರಣವಾಗಿದೆ. 

ನಾವು ಜಾರಕಿಹೊಳಿ ಸಹೋದರರ ಬೆಂಬಲಿಗರಾಗಿದ್ದೇವೆ. ಎಲ್ಲ ಜಾರಕಿಹೊಳಿ ಸಹೋದರರು ನಮಗೆ ಬೇಕು. ಈಗ ನಾವು ಯಾರ ಪರ ಮತಯಾಚನೆ ಮಾಡಬೇಕು ಎಂಬುದೇ ಗೊಂದಲವಾಗಿದೆ ನಮಗೆ ಈ ಚುನಾವಣೆ ನುಂಗಲಾರದ ತುತ್ತಾಗಿದೆ ಎಂದು ಜಿ.ಪಂ.ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಅವರು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2008ರಲ್ಲಿಯೂ ಜಾರಕಿಹೊಳಿ ಬ್ರದರ್ಸ್ ಪರಸ್ಪರ ಸ್ಪರ್ಧಿಸಿದ್ದರು. ಆದ್ರೆ 2008ರಲ್ಲಿದ್ದ ಪರಿಸ್ಥಿತಿ, ಈಗಿನ ಪರಿಸ್ಥಿತಿ ಬೇರೆಯಾಗಿದೆ.ಈಗ ಕಾಂಗ್ರೆಸ್ ಪರ ಇಬ್ಬರು ಸಹೋದರು ಗುರುತಿಸಿಕೊಂಡಿದ್ದಾರೆ. ಬಿಜೆಪಿ ಪರ ಮೂವರು ಸಹೋದರರು ಗುರುತಿಸಿಕೊಂಡಿದ್ದಾರೆ. ಜಾರಕಿಹೊಳಿ ಸಾಮ್ರಾಜ್ಯ ನಿರ್ಮಾಣಕ್ಕೆ ಕಾರ್ಯಕರ್ತರು ಅಷ್ಟೇ ಕಾರಣರಾಗಿದ್ದಾರೆ. ಸದ್ಯ ಹೇಗೆ ನಿರ್ಣಯ ತೆಗೆದುಕೊಳ್ಳಬೇಕೆಂಬ ಗೊಂದಲದಲ್ಲಿ ನಾವಿದ್ದೇವೆ ಎಂದು ಅವರು ತಿಳಿಸಿದ್ದಾರೆ. 

ಯಾರನ್ನು ಬೆಂಬಲಿಸಬೇಕು ಎನ್ನುವುದು ನಮಗೆ ಸಮಸ್ಯೆಯಾಗಿದೆ. ಇಷ್ಟು ದಿನ ಅಧಿಕಾರ ಸಿಗುತ್ತದೆ ಎಂದು ಸಹೋದರರನ್ನು ಬೆಂಬಲಿಸಿಲ್ಲ. ನಮಗೆ ಜಾರಕಿಹೊಳಿ ಸಹೋದರರ ನಾಯಕತ್ವ ಬೇಕು ಎಂದು ಬೆಂಬಲಿಸಿದ್ದೇವೆ. ಗೋಕಾಕ್ ನಲ್ಲಿ ಪಕ್ಷಕ್ಕಿಂತ ವ್ಯಕ್ತಿಗಳ ಸಂಘಟನೆಗಳು ಹೆಚ್ಚು ಪ್ರಭಾವಿದೆ. ಜಾರಕಿಹೊಳಿ ಪರ ಗುಂಪು, ಜಾರಕಿಹೊಳಿ ವಿರೋಧಿ ಗುಂಪು ಎರಡೇ ಪ್ರಭಾವಿಯಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಪಕ್ಷಗಳ ಆಧಾರ ಮೇಲೆ ನಿರ್ಣಯ ಆಗುತ್ತವೆ. ಆದರೇ ಗೋಕಾಕ್ ಕ್ಷೇತ್ರದಲ್ಲಿ ವ್ಯಕ್ತಿಗತ ಆಧಾರದ ಮೇಲೆ ಚುನಾವಣೆ ಆಗುತ್ತವೆ ಎಂದಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

ನವೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!