ಧಾರವಾಡ ಡಿ.ಸಿ.ಕ್ಯಾಂಟಿನ್ ಮಾಯವಾಗಿದೆ: ಹುಡುಕಿಕೊಡಿ ಎಂದು ಜನಸಾಮಾನ್ಯರ ಕೂಗು!

Published : Jul 19, 2024, 01:36 PM ISTUpdated : Jul 19, 2024, 01:46 PM IST
ಧಾರವಾಡ ಡಿ.ಸಿ.ಕ್ಯಾಂಟಿನ್ ಮಾಯವಾಗಿದೆ: ಹುಡುಕಿಕೊಡಿ ಎಂದು ಜನಸಾಮಾನ್ಯರ ಕೂಗು!

ಸಾರಾಂಶ

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕ ಇರುವ ಡಿಸಿ ಕ್ಯಾಂಟಿನ್ ಕಳೆದ ನಾಲ್ಕು ವರ್ಷಗಳಿಂದ ಕಾಣೆಯಾಗಿದೆ. ಜನಸಾಮಾನ್ಯರು ಕ್ಯಾಂಟಿನ್ ಹುಡುಕಿ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಡಿ.ಸಿ ಕಚೇರಿ, ಎ.ಸಿ. ಕಚೇರಿ ಹಾಗೂ ಜಿಲ್ಲಾ ಪಂಚಾಯತ್‌ನಲ್ಲಿ ನೂರಾರು ಸಿಬ್ಬಂದಿಗಳು ಕೆಲಸವನ್ನ ಮಾಡುತ್ತಿದ್ದಾರೆ. 

ವರದಿ: ಪರಮೇಶ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಜು.19): ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕ ಇರುವ ಡಿಸಿ ಕ್ಯಾಂಟಿನ್ ಕಳೆದ ನಾಲ್ಕು ವರ್ಷಗಳಿಂದ ಕಾಣೆಯಾಗಿದೆ. ಜನಸಾಮಾನ್ಯರು ಕ್ಯಾಂಟಿನ್ ಹುಡುಕಿ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಡಿ.ಸಿ ಕಚೇರಿ, ಎ.ಸಿ. ಕಚೇರಿ ಹಾಗೂ ಜಿಲ್ಲಾ ಪಂಚಾಯತ್‌ನಲ್ಲಿ ನೂರಾರು ಸಿಬ್ಬಂದಿಗಳು ಕೆಲಸವನ್ನ ಮಾಡುತ್ತಿದ್ದಾರೆ. ಆದರೆ ಅವರಿಗೆ ಒಂದು ಡಿ ಸಿ ಕ್ಯಾಂಟಿನ್ ಇಲ್ಲದಂತಾಗಿದೆ. ಕಚೇರಿಗಳ ಆವರಣದಲ್ಲಿ, ಸ್ವಚ್ಛತೆ ಮತ್ತು ಡಿ.ಸಿ. ಕಚೇರಿ ಆವರಣದಲ್ಲಿ ಸರಕಾರಿ ಕ್ಯಾಂಟಿನ್ ಆರಂಭಿಸಿ ನಾಗರಿಕರಿಗೆ ಮತ್ತು ಸಿಬ್ಬಂದಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ. 

ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ 1990 ರಿಂದ ಸರಕಾರಿ ಕ್ಯಾಂಟಿನ್ ಆರಂಭಿಸಿದ್ದು, ಸದರಿ ಕ್ಯಾಂಟಿನ ನಿರ್ವಹಣೆ ಕಂದಾಯ ಇಲಾಖೆ ತಹಶೀಲ್ದಾರ ಮಟ್ಟದ ಅಧಿಕಾರಿಗಳ ಮೇಲಿರುತ್ತದೆ. ಅದರಂತೆ 1990 ರಿಂದ 2020 ರವರೆಗೆ ವ್ಯವಸ್ಥೆ ಚೆನ್ನಾಗಿದ್ದು ಕೋವಿಡ್-19 ಕಾರ್ಯಾಚರಣೆ ಸಂದರ್ಭದಲ್ಲಿ ಈ ಕ್ಯಾಂಟಿನ ಭವನ ವಾರ್ ರೂಮ್ ಎಂದು ಬದಲಾವಣೆ ಮಾಡಿದ್ದಾರೆ.ಇದೀಗ 18 ನೇ ಲೋಕಸಭೆ ಚುನಾವಣೆ ನಿಮಿತ್ಯ ಪುನಃ ಸಾರ್ವಜನಿಕ ಮಾಹಿತಿ ಕಚೇರಿ ಕೇಂದ್ರ ಎಂದು ಪರಿವರ್ತನೆ ಆಗಿತ್ತು ಅದು ಸಹ ಈಗ ಪೂರ್ಣಗೊಂಡಿದೆ‌ ಧಾರವಾಡ ಕಚೇರಿಗೆ ಆಗಮಿಸುವ ಸಾರ್ವಜನಿಕರು ಮತ್ತು ಕಂದಾಯ ಹಾಗೂ ಜಿಲ್ಲಾ ಆವರಣದ ಕಛೇರಿ ಸಿಬ್ಬಂದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿಈ ಕ್ಯಾಂಟಿನ್ ನಿರಂತರವಾಗಿ ಸಾರ್ವಜನಿಕರಿಗೆ ಅಗತ್ಯ ಅನುಕೂಲತೆ ಒದಗಿಸುತ್ತ ಕಾರ್ಯನಿರ್ವಹಿಸಿದೆ. 

ಭಕ್ತಾದಿಗಳೇ ಗಮನಿಸಿ.. ಶೃಂಗೇರಿಯ ಶಾರದಾ ಪೀಠದಲ್ಲಿ ಇನ್ಮುಂದೆ ವಸ್ತ್ರ ಸಂಹಿತೆ ಕಡ್ಡಾಯ: ಆಗಸ್ಟ್ 15ರಿಂದ ಜಾರಿ

ಈ ಹಿಂದಿನ ಹೊಟೆಲ್ ಗುತ್ತಿಗೆ ಪಡೆದ ವ್ಯಕ್ತಿ ಅನಾರೋಗ್ಯದಿಂದ ನಿಧನರಾಗಿದ್ದರು ಸದ್ಯ ಭಾಡಿಗೆ ವಸೂಲಿ ಆಗಿಲ್ಲವೆಂಬ ಕಾರಣಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕ್ಯಾಂಟಿನ್ ಬಂದ್ ಮಾಡಿ,ಜನಸಾಮಾನ್ಯರಿಗೆ ತೊಂದರೆಯಾಗಿದೆ.ಸದ್ಯ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಸಮಸ್ಯೆ ಉಲ್ಬಣಗೊಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಗೆ ಬರುವ ವೃದ್ದರಿಗೆ ಸಾಕಷ್ಟು ತೊಂದರೆ ಯಾಗುತ್ತಿದೆ ಪ್ರತಿನಿತ್ಯ ನೂರಾರು ಜನ ಸಾಮಾನ್ಯರು ಜಿಲ್ಲಾಧಿಕಾರಿಗಳ ಕಚೇರಿಗೆ ತಮ್ಮ ತಮ್ಮ ಕೆಲಸಕ್ಕೆ ಬರುತ್ತಾರೆ ಆದರೆ ಕ್ಯಾಂಟಿನ ಇಲ್ಲದ ಕಾರಣಕ್ಕೆ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. 

ಧಾರವಾಡ ಡಿ.ಸಿ.ಕಛೇರಿಗೆ ಆಗಮಿಸುವ ಸಾರ್ವಜನಿಕರು ಮತ್ತು ಸಿಬ್ಬಂದಿಗಳು, ಸ್ವಲ್ಪ ವಿಶ್ರಾಂತಿ ಪಡೆದು ಒಂದು ಕಪ್ ಚಹಾ, ಅಥವಾ ತಿಂಡಿ ತಿನಿಸು ತೆಗೆದುಕೊಳ್ಳಬೇಕಾದಲ್ಲಿ ಇಲ್ಲಿಂದ ಸುಮಾರು ದೂರವಿರುವ, ಬೃಂದಾವನ ಹೊಟೆಲ್/ಹೊಯ್ಸಳ ಹೊಟೆಲೆ ತೆರಳಬೇಕುಇಲ್ಲವಾದರೆ, ಪಕ್ಕದಲ್ಲಿರುವ ತೀರ ಚಿಕ್ಕದಾಗಿದ್ದ ಮಯೂರ ಹೊಟೆಲ್ ಸೆಲ್ಫ್ ಸರ್ವಿಸ್ ಕ್ಯಾಂಟಿನ್ ಸಿ.ಟಿ, ಅಡ್ಡಾದಲ್ಲಿ ನಿಂತುಕೊಂಡೇ ಸರದಿಯಲ್ಲಿ ಚಹ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಅಲ್ಲದೇ ನಿಸರ್ಗ ಕರೆಗೆ ಸ್ಪಂದಿಸಲು ಸೂಕ್ತ ಶೌಚಾಲಯದ ಕೊರತೆ ತೀವ್ರವಾಗಿದೆ ಸದರಿ ಸಮಸ್ಯೆ ಎ.ಸಿ. ಕಛೇರಿ ತಹಶೀಲ್ದಾರ ಕಚೇರಿಗಳಲ್ಲಿಯೂ ಕೂಡ ಸಾಕಷ್ಟು ಸಮಸ್ಯಗಳು ಇವೆ. ಹಿಂದಿನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಡವರು ಕೋವಿಡ್ ಸಮಯದಲ್ಲಿ ಕ್ಯಾಂಟಿನನ್ನ ಕೋವಿಡ್ ವಾರ ರೂಂ ಎಂದು ಮಾಡಿದ್ದಾರೆ.

Tumakuru: ಹೆಲ್ಮೆಟ್ ಹಾಕಿಲ್ಲ ಎಂದು ಯುವಕನಿಗೆ ಮನಸೋ ಇಚ್ಚೆ ಥಳಿಸಿದ ಪೊಲೀಸರು

ಸದ್ಯ ಅದನ್ನ ಬೇರೆ ಭೆರೆ ಕಾರಣಕ್ಕೆ ಬಳಕೆ ಮಾಡಿಕ್ಕೊಳ್ಳಲಾಗುತ್ತಿದೆ ಆದರೆ ಧಾರವಾಡ ಡಿ.ಸಿ. ಕಚೇರಿ, ಎ.ಸಿ. ಕಚೇರಿ, ತಹಶೀಲ್ದಾರ ಕಚೇರಿ, ಹಾಗೂ ಸಿ.ಎಸ್. ಝಡ್.ಪಿ. ಕಚೇರಿಗಳ ಆವರಣದಲ್ಲಿ, ಸ್ವಚ್ಛತೆ ಮತ್ತು ಡಿ.ಸಿ. ಕಚೇರಿ ಆವರಣದಲ್ಲಿ ಸರಕಾರಿ ಕ್ಯಾಂಟಿನ್‌ ಆವರಣಗಳಲ್ಲಿಯ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಟೆಂಡರ್ ಕರೆದು, ನಾಗರಿಕ ಸವಲತ್ತುಗಳನ್ನು ಸಾರ್ವಜನಿಕರಿಗೆ ಒದಗಿಸಿಕೊಡಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ. ಸದ್ಯ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಈ ಬಂದ ಆಗಿರುವ ಡಿ ಸಿ ಕ್ಯಾಂಟಿನನ್ನ ಮತ್ತೆ ಆರಂಭ ಮಾಡಿ ಜನಸಾಮಾನ್ಯರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.

PREV
Read more Articles on
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!