* ಅತಿವೃಷ್ಟಿ; ನೋಡಲ್ ಅಧಿಕಾರಿಗಳ ನೇಮಕ,
* ಅತೀವೃಷ್ಟಿ ನಿವಾರಣೆಗೆ ನೋಡಲ್ ಅಧಿಕಾರಿಗಳ ನೇಮಕ
* ಮನೆ ಮತ್ತಿತರ ಹಾನಿ ಸಂಭವಿಸಿದರೆ ತುರ್ತು ಪರಿಹಾರ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ, (ಮೇ.19): ಧಾರವಾಡ ಜಿಲ್ಲೆಯಲ್ಲೂ ಸಹ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಅನಾಹುತಗಳನ್ನ ಸೃಷ್ಟಿಸಿದೆ. ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾಧಿಕಾರಿ ಗುರುದತ್ತ ಹೇಗಡೆ ಅವರು ಅತೀವೃಷ್ಟಿ ನಿವಾರಣೆಗೆ ನೋಡಲ್ ಅಧಿಕಾರಿಗಳನ್ನ ತಾಲೂಕಾವಾರು ನಿಯೋಜನೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಅತಿವೃಷ್ಠಿಯಿಂದ ಪ್ರವಾಹ ಉಂಟಾಗಬಹುದಾದ ಸಂಭವ ಇದೆ. ಜನ ಜಾನುವಾರು,ಮನೆ ಮತ್ತಿತರ ಹಾನಿ ಸಂಭವಿಸಿದರೆ ತುರ್ತು ಪರಿಹಾರ ಕ್ರಮಗಳನ್ನು ಜರುಗಿಸಲು ಪ್ರತಿ ತಾಲ್ಲೂಕಿಗೆ ಓರ್ವ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಅಬ್ಬರಿಸಿದ ವರುಣ: ಓರ್ವ ಸಾವು, ಧರೆಗುರುಳಿದ ಮರಗಳು..!
ನಿಯೋಜಿಸಲಾದ ತಾಲ್ಲೂಕುಗಳ ನೋಡಲ್ ಅಧಿಕಾರಿಗಳು ಅತಿವೃಷ್ಠಿ ಹಾನಿಯ ಪ್ರಮಾಣ ತಗ್ಗಿಸುವುದು, ಹಾನಿಯ ಮಾಹಿತಿ, ವಿವರಗಳನ್ನು ಒದಗಿಸುವುದು.ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವುದು. ತಾಲ್ಲೂಕು ಮಟ್ಟದ ವಿಪತ್ತು ನಿರ್ವಹಣೆ ಸಮಿತಿಯ ಕಾರ್ಯ ಪರಿಶೀಲಿಸುವುದು. ಕೆರೆಗಳು ಭರ್ತಿಯಾಗಿ ಕೋಡಿ ಹರಿದು ಅಥವಾ ಹಳ್ಳಗಳು ತುಂಬಿ ಪ್ರವಾಹ ಉಂಟಾಗುವ ಸಂಭವನೀಯತೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುವುದು ಸೇರಿದಂತೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಖಡಕ್ ಎಚ್ಚರಿಕೆ ಸೂಚಿಸಲಾಗಿದೆ.
ನೋಡಲ್ ಅಧಿಕಾರಿಗಳ ವಿವರ
ಧಾರವಾಡ ತಾಲೂಕು , ಅಶೋಕ ತೇಲಿ, ಉಪವಿಭಾಗಾಧಿಕಾರಿಗಳು-8123295366, ಹುಬ್ಬಳ್ಳಿ ತಾಲೂಕು,ಮಂಜುನಾಥ ಅಂತರವಳ್ಳಿ,ಉಪಕೃಷಿನಿರ್ದೇಶಕರು,8277931272, ಹುಬ್ಬಳ್ಳಿ ನಗರ, ಅಜೀಜ್ ದೇಸಾಯಿ,ಜಂಟಿ ಆಯುಕ್ತರು,ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ,7019764507 ನವಲಗುಂದ ತಾಲೂಕು,ಸುಧೀರ್ ಸಾವ್ಕಾರ್,ಹಿರಿಯ ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 9845297783, ಕುಂದಗೋಳ ತಾಲೂಕು, ರೇಖಾ ಡೊಳ್ಳಿನವರ,ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ, -9480864001,
ಕಲಘಟಗಿ ತಾಲೂಕು,ಗೋಪಾಲ ಲಮಾಣಿ,ಜಿಲ್ಲಾ ಅಧಿಕಾರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ 8748067302, ಅಳ್ನಾವರ ತಾಲೂಕು ಡಾ.ಉಮೇಶಕೊಂಡಿ,ಉಪನಿರ್ದೇಶಕರು,ಪಶು ವೈದ್ಯಕೀಯ ಸೇವೆಗಳ ಇಲಾಖೆ 9900675607, ಅಣ್ಣಿಗೇರಿ ತಾಲೂಕು, ಮಮತಾ ನಾಯಕ್,ನಿರ್ದೆಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ -9591539062 ಅವರನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿಲಾಗಿದೆ.
ತಮಗೆ ವಹಿಸಲಾದ ಕರ್ತವ್ಯಗಳನ್ನು ನೋಡಲ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಮಾಡಿದ್ದಾರೆ.