6 ಜೋಡಿಗಳಿಗೆ ಕಣಭ್ಯಾಗ, ಕೇವಲ 10 ನಿಮಿಷದಲ್ಲಿ ಮುಗಿದ ಮದ್ವೆ

By Suvarna News  |  First Published May 19, 2022, 2:06 PM IST

* ಗಿರಿಜನರಿಗೆ ಮೂಲಭೂತ ಸವಲತ್ತು ವಿತರಣೆ. 
* 6 ಜೋಡಿಗಳಿಗೆ ಕಣಭ್ಯಾಗ. 
* ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಉಚಿತ ಸಾಮೂಹಿಕ ವಿವಾಹದ ಸಂಭ್ರಮ,
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
 

ಚಿಕ್ಕಮಗಳೂರು, (ಮೇ.19) : ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವತಿಯಿಂದ ಸಾಮೂಹಿಕ ವಿವಾಹದಲ್ಲಿ 6 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 10 ನಿಮಿಷದಲ್ಲಿ ಮುಗಿದ ಸರಳ ವಿವಾಹದಲ್ಲಿ ವಧು ವರರು ಪರಸ್ಪರ ಕೆನ್ನಗೆ ಜೀರಿಗೆ-ಬೆಲ್ಲ ಸವರಿ ಹೂವಿನ ಹಾರ ಬದಲಾಯಿಸಿಕೊಂಡು ಸತಿ ಪತಿಗಳಾದರು. ದೇವಸ್ಥಾನದ ವತಿಯಿಂದ ನೀಡಿದ ಮಾಂಗಲ್ಯವನ್ನು ವಧುವಿಗೆ ಕಟ್ಟಿದ ನಂತರ ವಧು ವರರಿಗೆ ದಾಂಪತ್ಯ ವಚನ ಬೋಧಿಸಲಾಯಿತು.

Tap to resize

Latest Videos

ಹೊರನಾಡಿನಲ್ಲಿ ಸಾಮೂಹಿಕ ವಿವಾಹ 
ಶ್ರೀ ಕ್ಷೇತ್ರ ಹೊರನಾಡಿನ ಆದಿಶಕ್ತಿಯ ಸನ್ನಿದಿಯಲ್ಲಿ 6 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಂಪೂರ್ಣ ವಿವಾಹದ ಏರ್ಪಡನ್ನು ಶ್ರೀ ಕ್ಷೇತ್ರದವತಿಯಿಂದ ಆಯೋಜಿಸಲಾಗಿತ್ತು. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ , ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡು ಆರ್ಸಿರ್ವದಿಸಿದ್ರು. ಅಲ್ಲದೇ ಗಿರಿಜನರಿಗೆ ಮೂಲಭೂತ ಸವಲತ್ತುಗಳನ್ನು ವಿತರಿಸಲಾಯಿತು. 

ಗಿರಿಜನರಿಗೆ ಮೂಲಭೂತ ಸವಲತ್ತುಗಳ ವಿತರಣೆ 
ಪ್ರತಿವರ್ಷದಂತೆ ಈ ಭಾರಿಯೂ ಆದಿಶಕ್ತಿ ಅನ್ನಪೂರ್ಣೆಶ್ವರಿ ಸುಕ್ಷೇತ್ರ ಹೊರನಾಡಿನಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಯಿತು. ಮಲೆನಾಡಿನ ಆರ್ಥಿಕವಾಗಿ ಹಿಂದುಳಿದ ಗಿರಿಜನರ ವಿವಾಹಕ್ಕೆ ವೇದಿಕೆ ನಿರ್ಮಿಸುವ ಕ್ಷೇತ್ರದ ದೇವಾಲಯದ ವತಿಯಿಂದ ಸಂಪೂರ್ಣ  ಖರ್ಚು ವೆಚ್ಚವನ್ನು ಭರಿಸಿ, ವಧು ವರರಿಬ್ಬರಿಗೂ ವಸ್ತ್ರ ಆಭರಣ ಸೇರಿದಂತೆ ಸವಲತ್ತುಗಳನ್ನು ಸಹಾ ನೀಡಲಾಯಿತು. ಒಟ್ಟು 6 ಜೋಡಿಗಳಿಗೆ ಈ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ರು.ದೇವಸ್ಥಾನದ ಮುಖ್ಯಸ್ಥ ಜಿ ಭೀಮೇಶ್ವರ ಜೋಷಿ ಮತ್ತು  ರಾಜಲಕ್ಷ್ಮಿ ವಧು ವರರಿಗೆ ಮಾಂಗಲ್ಯ ವಿತರಿಸಿ ಶುಭ ಕೋರಿದರು. 

ಶುಭ ಮುಹೊರ್ತದಲ್ಲಿ ವೇದ ಘೋಷ ಮಂತ್ರಗಳೊಂದಿಗೆ ವಿವಾಹ ನಡೆಯಿತು. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿನೂತನ ದಂಪತಿಗಳಿಗೆ ಆರ್ಶಿರ್ವಧಿಸಿ ಹಿತವಚನ ಹೇಳಿದ್ರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸಾಮೂಹಿಕ ವಿವಾಹಕ್ಕೆ ಬಂದಿದ್ದ ಜೋಡಿಗಳ ಸಂಖ್ಯೆ ಕಡಿಮೆ ಇತ್ತು.ದೇವಸ್ಥಾನದ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ 68 ಮನೆಗಳಿಗೆ ಹಂಚು ವಿತರಿಸಲಾಯಿತು. ಆನಂದ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕದ ಪ್ರಮಾಣ ಪತ್ರ ವಿತರಿಸಲಾಯಿತು. ಸಮೃದ್ಧಿ ಯೋಜನೆಯಲ್ಲಿ ಕೃಷಿಕರಿಗೆ ಕೃಷಿ ಉಪಕರಣ ಮತ್ತು ಸಸಿಗಳನ್ನು ದೇವಸ್ಥಾನದ ವತಿಯಿಂದ ವಿತರಿಸಲಾಯಿತು. ಮಹಿಳಾಭಿವೃದ್ಧಿ ಯೋಜನೆಯಲ್ಲಿ 25 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.ಮಾಜಿ ಸಚಿವರಾದ ಮೋಟಮ್ಮ, ಬಿ.ವಿ. ನಿಂಗಯ್ಯ ಇದ್ದರು.

click me!