Chikkamagaluru: ಕಾಡಂಚಿನ ಕುಗ್ರಾಮಕ್ಕೆ ನಕ್ಸಲರ ಭೇಟಿ: ಎಎನ್ಎಫ್-ಪೊಲೀಸರು ಹೈ ಅಲರ್ಟ್

By Govindaraj S  |  First Published Nov 14, 2024, 10:58 PM IST

ಕಳೆದೊಂದು ದಶಕದಲ್ಲಿ ಏಳೆಂಟು ವರ್ಷದಲ್ಲಿ ಕಾಫಿನಾಡ ಮಲೆನಾಡು ಭಾಗದಲ್ಲಿ ನಕ್ಸಲರು ಬಂದಿದ್ರಂತೆ, ಬಂದೋದ್ರಂತೆ, ಕರಪತ್ರ-ಬ್ಯಾನರ್-ಲೇಟರ್ ಅನ್ನೋದು ಇರ್ಲೇ ಇಲ್ಲ. 2014-05 ರಿಂದ 2014-15ರವರೆಗೂ ಅವರ ಓಡಾಟ, ಬ್ಯಾನರ್-ಕರಪತ್ರ-ಲೆಟರ್ ಎಲ್ಲವೂ ಇತ್ತು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.14): ಕಳೆದ ಒಂದೂವರೆ ದಶಕದಿಂದ ಮಲೆನಾಡಿಗರ ಬದುಕಿಗೆ ಸಂಚಕಾರ ಬಂದಾಗಲೆಲ್ಲಾ ಸರ್ಕಾರದ ಧೋರಣೆಗಳ ಬಗ್ಗೆ ಅಲ್ಲಲ್ಲೇ ನಕ್ಸಲ್ ಬ್ಯಾನರ್, ಕರಪತ್ರ, ಲೆಟರ್ಗಳು ಹೊರಬರ್ತಿದ್ವು. ಆದ್ರೀಗ, ನಕ್ಸಲರೇ ಹಳ್ಳಿಗಳಿಗೆ ಭೇಟಿ ಕೊಟ್ಟಿರೋದು ಗಮನಿಸಿದ್ರೆ ಸರ್ಕಾರದ ಆ ಎರಡು ಯೋಜನೆಗಳ ವಿರುದ್ಧ ನಕ್ಸಲರು ಮಲೆನಾಡಿಗರ ಪರ ಹೋರಾಟಕ್ಕಿಳಿದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. 

Tap to resize

Latest Videos

ಸರ್ಕಾರದ ಯೋಜನೆ ಬಗ್ಗೆ ಚರ್ಚೆ?: ಕಳೆದೊಂದು ದಶಕದಲ್ಲಿ ಏಳೆಂಟು ವರ್ಷದಲ್ಲಿ ಕಾಫಿನಾಡ ಮಲೆನಾಡು ಭಾಗದಲ್ಲಿ ನಕ್ಸಲರು ಬಂದಿದ್ರಂತೆ, ಬಂದೋದ್ರಂತೆ, ಕರಪತ್ರ-ಬ್ಯಾನರ್-ಲೇಟರ್ ಅನ್ನೋದು ಇರ್ಲೇ ಇಲ್ಲ. 2014-05 ರಿಂದ 2014-15ರವರೆಗೂ ಅವರ ಓಡಾಟ, ಬ್ಯಾನರ್-ಕರಪತ್ರ-ಲೆಟರ್ ಎಲ್ಲವೂ ಇತ್ತು. ಆದ್ರೀಗ, ಮತ್ತೆ ಮಲೆನಾಡಲ್ಲಿ ನಕ್ಸಲರು ಪತ್ತೆಯಾಗಿರೋದು ಗಮನಿಸಿದ್ರೆ ಮಲೆನಾಡಿಗರ ಬದುಕಿಗೆ ಸಂಚಕಾರ ಬಂದಿದ್ದಕ್ಕೆ ಬಂದ್ರಾ ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ, ಸರ್ಕಾರ ಮಲೆನಾಡಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಿ, ಅಕ್ರಮ ಒತ್ತುವರಿಯನ್ನ ತೆರವು ಮಾಡೋದಕ್ಕೆ ಮುಂದಾಗಿರೋದು ಮಲೆನಾಡಿಗರ ಬದುಕಿಗೆ ಮರಣಶಾಸನವಾಗಿದೆ. 

108 ಸಿಬ್ಬಂದಿಗಳಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ಸಚಿವ ದಿನೇಶ್ ಗುಂಡೂರಾವ್

ಅದಕ್ಕೆ ನಕ್ಸಲರು ಬಂದಿದ್ದಾರಾ ಎಂಬ ಅನುಮಾನ ಬಲವಾಗಿದೆ. ಕಳೆದೊಂದು ತಿಂಗಳಲ್ಲಿ ಎರಡ್ಮೂರು ಬಾರಿ ಬಂದಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಕೊಪ್ಪ ತಾಲೂಕಿನ ಕಾಡಂಚಿನ ಕುಗ್ರಾಮ ಕಡೇಗುಂದಿ ಸುಬ್ಬೇಗೌಡ ಮನೆಗೆ ಬಂದಿದ್ದ ನಕ್ಸಲರು ಅಲ್ಲಿ ಸರ್ಕಾರದ ಜನವಿರೋಧಿ ನೀತಿ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗ್ತಿದೆ. ಪೊಲೀಸರ ತನಿಖೆ ವೇಳೆ ಸುಬ್ಬೇಗೌಡ ಮನೆಯಲ್ಲಿ ಮೂರು ಬಂದೂಕು, ಮದ್ದುಗುಂಡುಗಳು ಪತ್ತೆಯಾಗಿವೆ. ಆದರೆ, ಪರವಾನಗಿ ಇಲ್ಲದೆ ಮೂರು ಬಂದೂಕು ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಎ.ಎನ್.ಎಫ್ ಹಾಗೂ ಪೊಲೀಸರು ಹೈ ಅಲರ್ಟ್: ಸುಬ್ಬೇಗೌಡ ಮನೆಗೆ ಮುಂಡಗಾರು ಲತಾ ಹಾಗೂ ಜಯಣ್ಣ ಬಂದೋದ ಬಳಿಕ ಎ.ಎನ್.ಎಫ್ ಹಾಗೂ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಆದ್ರೆ, ಕೇರಳದಿಂದ ಮತ್ತಿಬ್ಬರು ನಕ್ಸಲರಾದ ವನಜಾಕ್ಷಿ ಹಾಗೂ ವಿಕ್ರಂಗೌಡ ಕೂಡ ಬಂದಿದ್ದಾರೆ ಎಂದು ಹೇಳಲಾಗಿದೆ. ಆದ್ರೆ, ಕಾಡಲ್ಲಿ ಎ.ಎನ್.ಎಫ್. ನಿರಂತರ ಕೂಂಬಿಂಗ್ ಮಾಡ್ತಿದ್ರೆ, ಚೆಕ್ಪೋಸ್ಟ್ನಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟು ಪ್ರತಿಯೊಂದು ಗಾಡಿಯನ್ನೂ ಹುಡುಕುತ್ತಿದ್ದಾರೆ. ಆದ್ರೆ, ನಕ್ಸಲರು ಬಂದು ಊಟ ಮಾಡಿ ಹೋದರೆಂಬ ಕಾರಣಕ್ಕೆ ಸುಬ್ಬೇಗೌಡ ಕುಟುಂಬಸ್ಥರನ್ನ ವಿಚಾರಣೆಗೊಳಪಡಿಸಿರೋ ಪೊಲೀಸರು ಪ್ರಶ್ನೆ ಮೇಲೆ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಎಷ್ಟು ಜನ ಬಂದಿದ್ರು. ಯಾರ್ಯಾರು ಬಂದಿದ್ರು. ಏನು ಕೇಳುದ್ರು, ಏನು ಹೇಳುದ್ರು. ನೀವು ಅಡಿಗೆ ಎಷ್ಟು ಜನಕ್ಕೆ ಮಾಡಿದ್ರಿ. 

ಅಪರೂಪದ ಕಾಯಿಲೆಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಸರ್ಕಾರ ಬದ್ಧ: ಸಚಿವ ಶರಣ ಪ್ರಕಾಶ್ ಪಾಟೀಲ್

ಏನು ಮಾಡಿದ್ರಿ. ಅವರ ಬಳಿ ಏನೇನು ಇತ್ತು ಎಂಬೆಲ್ಲಾ ರೀತಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕ್ತಿದ್ದಾರೆ. ಅವರ ಮಾಹಿತಿ ಆಧಾರದ ಮೇಲೆ ತನಿಖೆಯನ್ನ ಪೊಲೀಸರು ಕೂಡ ಚುರುಕುಗೊಳಿಸಲಿದ್ದಾರೆ. ಆದರೆ, ಎ.ಎನ್.ಎಫ್. ಸಿಬ್ಬಂದಿ ಹಾಗೂ ಪೊಲೀಸರು ಮಾತ್ರ ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಹುಡುಕಾಡ್ತಿದ್ದಾರೆ. ಆದ್ರೆ, 10 ವರ್ಷದಿಂದ ಇಲ್ಲದ ನಕ್ಸಲರು ಹೆಜ್ಜೆಗಳು ಈಗ ಮತ್ತೆ ಶುರುವಾಗಲು ಸರ್ಕಾರದ ಯೋಜನೆಗಳೇ ಕಾರಣ ಎಂದು ಹೇಳಲಾಗುತ್ತಿದೆ. ಒಟ್ಟಾರೆ, 2014-15ರ ಹಿಂದೆ ಸರ್ಕಾರದ ಯೋಜನೆಗಳ ವಿರುದ್ಧ ಅಲ್ಲಲ್ಲೇ ಬ್ಯಾನರ್, ಕರಪತ್ರಗಳು ಪತ್ತೆಯಾಗ್ತಿತ್ವು. ಇತ್ತೀಚಿನ ವರ್ಷಗಳಲ್ಲಿ ಇರಲಿಲ್ಲ. ಆದರೆ, ಕೆಲವರು ಶರಣಾಗತಿ, ಮತ್ತಲವರು ಬಂಧನದ ಬಳಿಕ ಮಲೆನಾಡಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣ ಕ್ಷೀಣಿಸಿತ್ತು. ಆದ್ರೀಗ, ಕಸ್ತೂರಿ ರಂಗನ್ ವರದಿ ಹಾಗೂ ಅಕ್ರಮ ಒತ್ತುವರಿ ತೆರವು ವಿಚಾರ ಮಲೆನಾಡಿಗರಿಗೆ ಮರಣಶಾಸನವಾಗಿದ್ದು ನಕ್ಸಲರು ಮತ್ತೆ ಸರ್ಕಾರದ ವಿರುದ್ಧ ಹೋರಾಡೋದಕ್ಕೆ ಸಜ್ಜಾಗ್ತಿದ್ದಾರಾ ಎಂಬ ಪ್ರಶ್ನೆ ಹಾಗೂ ಅನುಮಾನ ಕೂಡ ಬಲವಾಗಿದೆ.

click me!