ಭಕ್ತನೋರ್ವ ಕಾಣಿಕೆ ಹುಂಡಿಯಲ್ಲಿ ಮಗ ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು ಭಗವಂತ ಎಂದು ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಏ.01): ಭಕ್ತರು (Devotees) ಕಾಣಿಕೆ ಹುಂಡಿಗೆ ಚಿನ್ನ-ಬೆಳ್ಳಿಯ ಒಡವೆಗಳನ್ನ ಹಾಕಿ ಹರಕೆ ತೀರಿಸುತ್ತಾರೆ. ಆದರೆ, ಭಕ್ತನೋರ್ವ ಕಾಣಿಕೆ ಹುಂಡಿಯಲ್ಲಿ ಮಗ ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು ಭಗವಂತ ಎಂದು ಪತ್ರ (Letter) ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಅಪರೂಪದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಳಸ ತಾಲೂಕಿನ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ (Kalaseshwara Swamy Temple) ನಡೆದಿದೆ.
ಮಗನ ಬದುಕನ್ನೇ ಬದಲಿಸುವಂತೆ ದೇವರಲ್ಲಿ ಕೋರಿಕೆ: ದಕ್ಷಿಣ ಕಾಶಿ ಚಿಕ್ಕಮಗಳೂರು ಜಿಲ್ಲೆಯ ಕಳಸದ ಕಳಸೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಕಾಣಿಕೆ ಹುಂಡಿಯಲ್ಲಿ ಭಕ್ತನೋರ್ವ ಮಗನ ಇಡೀ ಬದುಕನ್ನೇ ಬದಲಿಸಪ್ಪಾ ಎಂದು ಪತ್ರ ಬರೆದು ಬೇಡಿಕೊಂಡಿದ್ದಾನೆ. ಮಗನ ಹೆಸರು ಬರೆದಿರುವ ಅಪ್ಪ, ಮಗನ ಕುಡಿತ ಚಟ ಬಿಡಿಸಿ ಒಳ್ಳೆಯ ಬುದ್ಧಿ ಕೊಡು. ಬೇಗ ಕೆಲಸ ಸಿಗುವಂತೆ ಮಾಡು. ಅವನ ಕುಡಿತದ ಚಟ ಹೋಗಲಾಡಿಸು. ಅವನು ಭಾರೀ ಮುಂಗೋಪಿ. ಅದನ್ನೂ ಕಡಿಮೆ ಮಾಡು. ಚಂಚಲ ಸ್ವಭಾವ ತೊಲಗಿಸು.
ಕರೆ ಮಾಡಿದರೆ 72 ತಾಸಿನಲ್ಲಿ ರೈತರ ಮನೆಗೆ ಪಹಣಿ ರವಾನೆ: ಸಚಿವ ಅಶೋಕ್
ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು, ಅವನಿಗಿರುವ ಭಯವನ್ನ ಹೋಗಲಾಡಿಸಿ ಧೈರ್ಯ ತುಂಬು, ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿಕೊಡು. ಮೊಮ್ಮಕ್ಕಳಿಗೂ ವಯಸ್ಸಿಗೆ ತಕ್ಕಂತೆ ಬುದ್ಧಿ ಕೊಡು. ಮಗಳ ಸಂಸಾರವನ್ನೂ ಚೆನ್ನಾಗಿ ಕಾಪಾಡು ತಂದೆ ಎಂದು ಬರೆದಿದ್ದಾನೆ. ಪತ್ರವನ್ನ ನೋಡಿದ ಅಧಿಕಾರಿಗಳು ನಸುನಕ್ಕು ಪತ್ರವನ್ನ ತೆಗೆದಿಟ್ಟು ಹಣ ಏಣಿಕೆ ಕಾರ್ಯ ಮುಂದುವರೆಸಿದ್ದಾರೆ. ಇದೊಂದು ಅನಾಮಧೇಯ ಪತ್ರವಾಗಿದ್ದು ಮಗನ ಹೆಸರು ಲಕ್ಷ್ಮೀಶ ಎಂದು ಬರೆದು ಅಶ್ವಿನಿ ನಕ್ಷತ್ರವೆಂದು ಪತ್ರದಲ್ಲಿ ಬರೆಲಾಗಿದೆ. ಒಟ್ಟಾರೆ ಕಾಣಿಕೆ ಹುಂಡಿಯಲ್ಲಿ ಸಿಕ್ಕ ಅನಾಮಧೇಯ ಪತ್ರ ಕೆಲ ಹೊತ್ತು ಭಾರೀ ಚರ್ಚೆಗೂ ಕಾರಣವಾಯಿತು.
ಮೋದಿಗೆ ಐಐಎಂ ವಿದ್ಯಾರ್ಥಿಗಳ ಪತ್ರ: ಇಂಡಿಯನ್ ಇನ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂ) ಬೆಂಗಳೂರಿನ ವಿದ್ಯಾರ್ಥಿಗಳು (Students) ಹಾಗೂ ಸಿಬ್ಬಂದಿ ಸೇರಿದಂತೆ ದೇಶದಲ್ಲಿನ ವಿವಿಧ ಐಐಎಂನವರು, ದೇಶದಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ಹಿಂಸಾಚಾರ, ದ್ವೇಷದ ಭಾಷಣದ ವಿರುದ್ಧ ಮಾತನಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ (Narendra Modi) ಬಹಿರಂಗ ಪತ್ರ (Letter) ಬರೆದಿದ್ದಾರೆ.
‘ಪ್ರಧಾನಿಗಳೇ ನಿಮ್ಮ ಮೌನವು ದ್ವೇಷ ಬಿತ್ತುವ ಧ್ವನಿಗಳಿಗೆ ಧೈರ್ಯ ತುಂಬುತ್ತದೆ. ನಮ್ಮನ್ನು ವಿಭಜಿಸಿ ದೇಶದ ಏಕತೆ ಸಮಗ್ರತೆಗೆ ಧಕ್ಕೆ ತರಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ದೃಢವಾಗಿ ನಿಲ್ಲುವಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ’ ಎಂದು ಪತ್ರದಲ್ಲಿ ಬರೆದಿದ್ದಾರೆ. ಇತ್ತೀಚೆಗೆ ಹರಿದ್ವಾರ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಕೆಲವು ಹಿಂದೂ ನಾಯಕರು ಮುಸ್ಲಿಂರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದರಲ್ಲದೇ ಸಾರ್ವಜನಿಕವಾಗಿ ನರಮೇಧಕ್ಕೆ ಕರೆ ನೀಡಿದ್ದರು.
ಹಿಜಾಬ್‌ಗೆ ಅವಕಾಶ ಕೊಡಿ, ಪಠ್ಯದಲ್ಲಿ ಭಗವದ್ಗೀತೆ ಬೇಡ, ಸಿಎಂಗೆ ಸಾಹಿತಿ,ಬುದ್ಧಿಜೀವಿಗಳಿಂದ ಪತ್ರ!
ಈ ಹಿನ್ನೆಲೆಯಲ್ಲಿ ‘ಸಂವಿಧಾನ ನಮಗೆಲ್ಲ ಧಾರ್ಮಿಕ ಸ್ವಾತಂತ್ರ್ಯ ನೀಡಿದರೂ ಈ ಕುರಿತು ದೇಶದಲ್ಲೀಗ ಭಯದ ಭಾವನೆಯಿದೆ. ಪೂಜಾ ಸ್ಥಳ, ಚಚ್‌ರ್‍ಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಯಾವುದೇ ಭಯವಿಲ್ಲದೇ ಮುಕ್ತವಾಗಿ ಮುಸ್ಲಿಂ ಸಹೋದರ, ಸಹೋದರಿಯರ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಕರೆ ನೀಡಲಾಗಿತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.