ಕರೆ ಮಾಡಿದರೆ 72 ತಾಸಿನಲ್ಲಿ ರೈತರ ಮನೆಗೆ ಪಹಣಿ ರವಾನೆ: ಸಚಿವ ಅಶೋಕ್‌

*  ಮನೆ ಬಾಗಿಲಿಗೆ ರೈತರ ಆಯ್ದ ದಾಖಲೆ ತಲುಪಿಸುವ ಕಾರ್ಯ 
*  ಪಿಂಚಣಿ ಮಂಜೂರಾತಿ ಪತ್ರ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು
*  60 ಲಕ್ಷ ದಾಖಲೆ ವಿತರಣೆ

Pension sanction Letter Will Send to Farmers House Within 72 Hours If Call Helpline Says R Ashok grg

ಬೆಂಗಳೂರು(ಮಾ.31):  ಕಂದಾಯ ಇಲಾಖೆ(Department of Revenue) ಶೀಘ್ರದಲ್ಲಿ ಆರಂಭಿಸಲಿರುವ ಸಹಾಯವಾಣಿಗೆ(Helpline) ಕರೆ ಮಾಡಿದ 72 ಗಂಟೆಯೊಳಗಾಗಿ ಪಿಂಚಣಿದಾರರಿಗೆ ಮಂಜೂರಾತಿ ಪತ್ರ ತಲುಪಿಸುವ ಯೋಜನೆ ಜಾರಿ ತರಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌(R Ashok) ಹೇಳಿದರು.

ಬಿಜೆಪಿಯ(BJP) ಪಿ.ಎಂ. ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿವಿಧ ವರ್ಗಗಳಿಗೆ ನೀಡುವ ಮಾಸಾಶನ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ, ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಯೋಜನೆ(Pension Scheme) ಮಂಜೂರಾತಿ ಪತ್ರ ನೀಡುವ ಯೋಜನೆ ಆರಂಭಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಹೊಸ ಸಾಫ್ಟ್‌ವೇರ್‌(Software) ರೂಪಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ(Karnataka) ಆರಂಭಿಸಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿದ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ರೈತರ ಆಯ್ದ ದಾಖಲೆಗಳನ್ನು ತಲುಪಿಸುವ ಕಾರ್ಯ ಮಾಡಲಾಗಿದೆ. ಮುಂದುವರೆದು ಪಿಂಚಣಿ ಮಂಜೂರಾತಿ ಪತ್ರವನ್ನು ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.

ಕರ್ನಾಟಕದಲ್ಲಿ ಜಾತಿ ಸೂಚಕ ಗ್ರಾಮಗಳ ಹೆಸರು ರದ್ದು

60 ಲಕ್ಷ ದಾಖಲೆ ವಿತರಣೆ:

ಇತ್ತೀಚೆಗೆ ಕಂದಾಯ ದಾಖಲೆಗಳನ್ನು ರೈತರ(Farmers) ಮನೆ ಬಾಗಿಲಿಗೆ ತಲುಪಿಸುವ ಯೋಜನೆಯಡಿ ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಅಟ್ಲಾಸ್‌ ದಾಖಲೆಗಳನ್ನು ನೀಡಲಾಗುತ್ತಿದ್ದು, ಸುಮರು 60 ಲಕ್ಷ ಕುಟುಂಬಗಳಿಗೆ ತಲುಪಿಸಿದ್ದೇವೆ. 5 ವರ್ಷಕ್ಕೊಮ್ಮೆ ಈ ರೀತಿ ದಾಖಲೆ ನೀಡಬೇಕೆಂಬ ನಿಯಮದ ಅನ್ವಯ ಕೊಡಲಾಗಿದೆ. ಇದಕ್ಕೆ ಸುಮಾರು 15 ಕೋಟಿ ರು. ವೆಚ್ಚವಾಗಿದೆ ಎಂದು ಕಾಂಗ್ರೆಸ್‌ ಸದಸ್ಯಕೆ. ಹರೀಶ್‌ಕುಮಾರ್‌ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ದಾಖಲೆಗಳನ್ನು ನೀಡುವುದರಿಂದ ಬಡವರು, ದಲಿತರಿಗೆ ತಮ್ಮ ಆಸ್ತಿಯ ವಿವರ ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದ ಸಚಿವರು, ಪಹಣಿ ದಾಖಲೆಗಳ ಅವಧಿ ಮಾತ್ರ ಒಂದು ವರ್ಷವಾಗಿರುತ್ತದೆ, ಜಾತಿ ಪ್ರಮಾಣ ಪತ್ರ ಶಾಶ್ವತವಾಗಿರುತ್ತದೆ ಎಂದು ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ(CM Ibrahim) ಅವರಿಗೆ ಉತ್ತರಿಸಿದರು.

ಕಂದಾಯ ದಾಖಲೆ ಮನೆ ಬಾಗಿಲಿಗೆ ಶೇ. 96ರಷ್ಟು ಸಾಧನೆ

ಧಾರವಾಡ: ಪಹಣಿ ಸೇರಿದಂತೆ ತಮ್ಮ ಜಮೀನಿನ ಇತರೆ ದಾಖಲೆಗಳನ್ನು ಪಡೆದುಕೊಳ್ಳಲು ರೈತರು ನಿತ್ಯ ಪರದಾಡುತ್ತಿರುವುದು ಸಾಮಾನ್ಯವಾಗಿತ್ತು. ಈ ಬಗ್ಗೆ ಸಾಕಷ್ಟುದೂರುಗಳೂ ಸಹ ಇದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಕಂದಾಯ ದಾಖಲೆ ಮನೆ ಬಾಗಿಲಿಗೆ ನೂತನ ಯೋಜನೆ ಜಿಲ್ಲೆಯಲ್ಲಿ ಯಶಸ್ವಿ ಕಂಡಿದೆ.

ಕಳೆದ ಮಾ. 12ರಿಂದ ಆರಂಭವಾದ ಯೋಜನೆ ಮಾ. 28ರೊಳಗೆ ಶೇ. 96ರಷ್ಟು ಸಾಧನೆ ಮಾಡಿದೆ. ರೈತ ಕುಟುಂಬಗಳಿಗೆ ಅಂದರೆ 1,58,575 ರೈತ ಕುಟುಂಬಗಳ ಪೈಕಿ 1,52,394 ರೈತ ಕುಟುಂಬಗಳಿಗೆ ಮನೆ-ಮನೆಗೆ ಹೋಗಿ ಆಯಾ ರೈತನ ಜಮೀನಿನ ಪಹಣಿ, ಜಮೀನಿನ(Land) ನಕಾಶೆ (ಅಟ್ಲಾಸ್‌ ) ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಪ್ರತಿಯನ್ನು ಮುಟ್ಟಿಸಲಾಗಿದೆ. ಇನ್ನುಳಿದ ಆರು ಸಾವಿರ ರೈತರು (ಶೇ.4ರಷ್ಟು) ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿಯಾಗದೆ ಇದ್ದಾರೆ. ಅವರು ಸಹ ನಾಡಕಚೇರಿಗೆ ಹೋಗಿ ದಾಖಲೆ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ರಾಜ್ಯ ಸರ್ಕಾರವು(Government of Karnataka) ಕಂದಾಯ ಇಲಾಖೆಯ ಪಹಣಿ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ತಹಸೀಲ್ದಾರ್‌ ಕಚೇರಿಯಲ್ಲಿ ಶುಲ್ಕ ಕಟ್ಟಿಸಿಕೊಂಡು ವಿತರಣೆ ಮಾಡುತ್ತಿತ್ತು. ಪಹಣಿ ಪಡೆಯಲು ರೈತರು ಸರದಿ ನಿಂತು ಹೈರಾಣಾಗಿದ್ದರು. ಇನ್ನು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿ ಏಳೆಂಟು ದಿನಗಳ ನಂತರ ದಾಖಲೆ ಪಡೆಯಬೇಕಾಗಿತ್ತು. ಇದಲ್ಲದೇ, ನಕಾಶೆಗೆ ಭೂಮಾಪನ ಇಲಾಖೆಗೆ ಅಲೆಯಬೇಕಿತ್ತು. ಈ ಕಾರಣದಿಂದ ರೈತರಿಗೆ ಒಂದು ಬಾರಿ ಈ ದಾಖಲೆಗಳನ್ನು ಉಚಿತವಾಗಿ ನೀಡುವುದು ಹಾಗೂ ಇನ್ಮುಂದೆ ನಾಡಕಚೇರಿ ಹಾಗೂ ಗ್ರಾಮಗಳಲ್ಲಿ ಆರಂಭಿಸುತ್ತಿರುವ ಕೇಂದ್ರಗಳಲ್ಲಿ ಸುಲಭವಾಗಿ ದೊರಕುವಂತೆ ಮಾಡಲು ಈ ಯೋಜನೆ ಜಾರಿ ಮಾಡಿತ್ತು.

Revenue Documents ಒಂದೇ ದಿನ 5 ಕೋಟಿ ದಾಖಲೆಗಳ ವಿತರಣೆ!

ಸರ್ಕಾರದ ನಿರ್ಧಾರದಂತೆ ಜಿಲ್ಲಾಡಳಿತವು ಮಾ. 12ರಂದು ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಜಿಲ್ಲೆಯ ಎಲ್ಲ ಹಳ್ಳಿ, ಪಟ್ಟಣ, ಶಹರಗಳಲ್ಲಿನ ಎಲ್ಲ ರೈತ, ಕಂದಾಯ ಕುಟುಂಬಗಳ ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸುವ ಕಾರ್ಯಕ್ರಮ ಆಯೋಜಿಸಿ ಯಶಸ್ವಿಯಾಗಿದೆ. ಇದಕ್ಕಾಗಿ ಕಂದಾಯ ಸಿಬ್ಬಂದಿಗಳಾದ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಉಪ ತಹಸೀಲ್ದಾರ್‌, ತಹಸೀಲ್ದಾರರು, ಇತರ ಇಲಾಖೆಗಳ ಸಿಬ್ಬಂದಿ, ಅ​ಧಿಕಾರಿಗಳನ್ನು ಉಪಯೋಗಿಸಿಕೊಂಡು ಜಿಲ್ಲೆಯಲ್ಲಿರುವ ಎಲ್ಲ ರೈತ ಕುಟುಂಬಗಳಿಗೆ ಕಂದಾಯ ದಾಖಲೆಗಳನ್ನು ತಲುಪಿಸಲಾಗಿದೆ. ಜತೆಗೆ ಸ್ವೀಕೃತಿ, ಮೊಬೈಲ್‌ ಸಂಖ್ಯೆ ಸಹ ಪಡೆಯಲಾಗಿದೆ. ಇದರೊಂದಿಗೆ ಸಾರ್ವಜನಿಕರಿಂದ ದೂರುಗಳು ಬಂದರೆ ಸ್ಥಳೀಯ ಗ್ರಾಮ ಲೆಕ್ಕಾಧಿ​ಕಾರಿಗಳನ್ನು ಹೊಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಯೋಜನೆ ಜಾರಿಯಾಗಿದೆ.

ಒಂದು ವೇಳೆ ದಾಖಲೆಗಳು ಮುದ್ರಣವಾಗದೆ ರೈತರಿಗೆ ದಾಖಲೆಗಳನ್ನು ಮುದ್ದಾಂ ತಲುಪಿಸಲು ಸಾಧ್ಯವಾಗದೇ ಇದ್ದರೆ ಅಂತಹ ರೈತರಿಗೆ ಮಾ. 21ರಿಂದ 26ರ ವರೆಗೆ ನಾಡಕಚೇರಿಯಲ್ಲಿ ಉಚಿತವಾಗಿ ದಾಖಲೆ ವಿತರಿಸಲು ಅವಕಾಶ ನೀಡಲಾಗಿತ್ತು. ಅಂತೆಯೇ, ಅಂತಹ ರೈತರು ಸಹ ನಾಡಕಚೇರಿಗಳಲ್ಲಿ ಪಡೆದುಕೊಂಡಿದ್ದಾರೆ.

ಕಾರ್ಯಕ್ರಮ ಯಶಸ್ವಿ

ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕಾಗಿ ಪಹಣಿ, ಅಟ್ಲಾಸ್‌(Atlas), ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಮುದ್ರಣ ಮಾಡಿ ಕುಟುಂಬವಾರು ಮತ್ತು ಗ್ರಾಮವಾರು ವಿಂಗಡಿಸಿ ಪೂರ್ವ ಮುದ್ರಿತ ಫೋಲ್ಡರ್‌ನಲ್ಲಿ ಹಾಕಿ ಒಂದೇ ದಿನದಲ್ಲಿ ಪರಿಶೀಲಿಸಿ ಸಿದ್ಧಪಡಿಸಿಟ್ಟುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಪೂರ್ವಸಿದ್ಧತೆಗಾಗಿ ಹಲವು ಸಭೆ ನಡೆಸಿ ಈ ಸೂಚನೆ ನೀಡಲಾಗಿತ್ತು. ಜಿಲ್ಲೆಯ ಎಲ್ಲ ಅಧಿ​ಕಾರಿಗಳು, ಸಿಬ್ಬಂದಿ ಶ್ರಮವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಅಂತ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios