Chikkamagaluru: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವ್ಯಾಘ್ರನ ದರ್ಶನ: ವಿಡಿಯೋ ವೈರಲ್‌

By Girish Goudar  |  First Published Apr 1, 2022, 11:50 AM IST

*  ಮರಿಗಳೊಂದಿಗೆ ದರ್ಶನ ನೀಡಿದ ಹುಲಿ
*  ಪ್ರವಾಸಿಗರನ್ನು ಕೈಬೀಸಿ ಕರೆಯುವ ಭದ್ರಾ ಜಲಾಶಯ
*  ಕಾಡು ಪ್ರಾಣಿಗಳ ದರ್ಶನದ ಸಫಾರಿ ಜರ್ನಿ ನಿಜಕ್ಕೂ ಥ್ರಿಲ್ಲಿಂಗ್‌


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಏ.01):  ನೈಸರ್ಗಿಕತೆಯಲ್ಲೇ ಮನೆ ಮಾಡಿರೋ ಕಾಫಿನಾಡು ಚಿಕ್ಕಮಗಳೂರಿಗಿಂತ(Chikkamagaluru) ಪ್ರವಾಸೋದ್ಯಮಕ್ಕೆ ಮತ್ತೊಂದು ತಾಣವಿಲ್ಲ. ಇದು ಪ್ರವಾಸಿಗರ ಹಾಟ್‌ಸ್ಪಾಟ್‌ ಅನ್ನೋದ್ರಲ್ಲಿ ನೋ ಡೌಟ್. ಕರ್ನಾಟಕದ ಊಟಿ(Ooty of Karnataka) ಎಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರನ್ನ ಭೂಲೋಕದ ಸ್ವರ್ಗ ಅಂದ್ರೆ ತಪ್ಪಿಲ್ಲ. ಇಲ್ಲಿನ ಪ್ರಮುಖ ಸ್ಥಳಗಳಲ್ಲಿ ಲಕ್ಕವಳ್ಳಿ ಭದ್ರಾ ಅಭಯಾರಣ್ಯವೂ ಒಂದು. 

Latest Videos

undefined

ಅಳಿವಿನಂಚಿನಲ್ಲಿರೋ ನಾನಾ ರೀತಿಯ ಕಾಡು ಪ್ರಾಣಿಗಳೂ(Wild Animals) ಇಲ್ಲಿ ಉಂಟು. ನಿತ್ಯ ಸುಮಂಗಲಿಯಂತಹ ಹಚ್ಚಹಸಿರಿನ ದಟ್ಟಕಾನನವೂ ಇಲ್ಲಿದೆ. ವೀಕೆಂಡ್‌ನಲ್ಲಿ ಇಲ್ಲಿಗೆ ಬರೋ ಪ್ರವಾಸಿಗರಿಗೆ(Tourists) ಲೆಕ್ಕವಿಲ್ಲ. ಇಲ್ಲಿರೋ ಬೆಟ್ಟಗುಡ್ಡಗಳು, ಪ್ರಾಣಿ-ಪಕ್ಷಿಗಳು, ಭದ್ರಾ ಜಲಾಶಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಭದ್ರಾ ಟೈಗರ್ ರಿಸರ್ವ್ ಫಾರೆಸ್ಟ್‌(Bhadra Tiger Reserve Forest) ಮುತ್ತೋಡಿ ಕಡೆಯಿಂದ ಹೋದ್ರೆ ಒಂದು ಅನುಭವ, ತರೀಕೆರೆಯ ಲಕ್ಕವಳ್ಳಿಯಿಂದ ಹೋದ್ರೆ ಮತ್ತೊಂದು ಅನುಭವ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಪ್ರಾಣಿಯ ವಾಕ್‌... ವಿಡಿಯೋ ವೈರಲ್‌

ಸಫಾರಿಯಲ್ಲಿ ತೆರಳಿದ ಪ್ರವಾಸಿಗರಿಗೆ ವ್ಯಾಘ್ರನ ಕುಟುಂಬದ ದರ್ಶನ 

ಇನ್ನು ಭದ್ರಾ ಟೈಗರ್ ರಿಸರ್ವ್ ಫಾರೆಸ್ಟ್ ನೋಡೋಕೆ ಬರುವಂತಹ ಪ್ರವಾಸಿಗರಿಗೆ ಅರಣ್ಯ ಇಲಾಖೆಯಿಂದಲೇ(Forest Department) ಸಫಾರಿ(Safari) ವ್ಯವಸ್ಥೆ ಮಾಡಲಾಗಿದೆ. ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಅರಣ್ಯ ಸಿಬ್ಬಂದಿಗಳೇ ಸಫಾರಿಗೆ ಕರೆದುಕೊಂಡು ಹೋಗ್ತಾರೆ. 

ದಟ್ಟ ಕಾನನದ ನಡುವೆ ಅರಣ್ಯ ಇಲಾಖೆಯ ಜೀಪ್ ಏರಿ ಸಾಗ್ತಿದ್ರೆ ಮುಂದೇನೋ ಸಿಗುತ್ತೇ ಅನ್ನೋ ಕಾತರ, ಕುತೂಹಲಗಳೇ ಹೆಚ್ಚು. ಅದಕ್ಕೆ ತಕ್ಕಂತೆ ಪ್ರಾಣಿ, ಪಕ್ಷಿಗಳ ದರ್ಶನವಾಗುತ್ತೆ. ಅಪರೂಪಕ್ಕೊಮ್ಮೆ ಕೆಲವರಿಗೆ ವ್ಯಾಘ್ರನ ದರ್ಶನವೂ ಆಗುತ್ತೆ. ಭದ್ರಾ ಟೈಗರ್ ರಿಸರ್ವ್ ಫಾರೆಸ್ಟ್‌ ತರೀಕೆರೆಯ ತಾಲೂಕಿನ ಲಕ್ಕವಳ್ಳಿಯ ಭಾಗದಿಂದ ಸಪಾರಿಯಲ್ಲಿ ತೆರಳಿದ ಪ್ರವಾಸಿಗರಿಗೆ ವ್ಯಾಘ್ರನ ಕುಟುಂಬದ ದರ್ಶನವಾಗಿದೆ. ಎರಡು ಮರಿಗಳೊಂದಿಗೆ ದರ್ಶನ ನೀಡಿರುವ ವ್ಯಾಘ್ರನ(Tiger) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Wildlife: ನೀರು ಕುಡಿಯುತ್ತಿದ್ದ ಕಾಡೆಮ್ಮೆ ಬೆನ್ನಟ್ಟಿ ಹುಲಿ ಬೇಟೆ, ಮೈ ಜುಂ ಎನಿಸುವ ಅಪರೂಪದ ದೃಶ್ಯ

ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿ ಎರಡು ಮರಿಗಳೊಂದಿಗೆ ದರ್ಶನ ನೀಡಿರುವ ಹುಲಿಯ ವಿಡಿಯೋವನ್ನು ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸಫಾರಿ ವೇಳೆ ಅಪರೂಪಕ್ಕೆ ಸಿಗೋ ಹುಲಿಯನ್ನು ನೋಡಿ ಪ್ರವಾಸಿಗರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಇಲ್ಲಿಗೆ ಬರೋ ಪ್ರವಾಸಿಗರು ಇವುಗಳೆಲ್ಲವನ್ನೂ ನೋಡಿ ಮಸ್ತ್ ಎಂಜಾಯ್ ಮಾಡ್ತಾರೆ. ಭದ್ರಾ ಟೈಗರ್ ರಿಸರ್ವ್ ಪಾರೆಸ್ಟ್ನ ಲಕ್ಕವಳ್ಳಿ ರೆಂಜ್‌ಲ್ಲಿ 33 ಹುಲಿ, 100ಕ್ಕೂ ಅಧಿಕ ಆನೆಗಳ ಜೊತೆ ಚಿರತೆಗಳೂ ಇವೆ. ಇಲ್ಲಿನ ಕಾಡು ಪ್ರಾಣಿಗಳ ದರ್ಶನದ ಸಫಾರಿ ಜರ್ನಿ ನಿಜಕ್ಕೂ ಥ್ರಿಲ್ ಆಗಿರುತ್ತೆ. 

ಕಾರ್ಮಿಕನ ಮೇಲೆ ಹುಲಿ ದಾಳಿ: ಸ್ಥಳದಲ್ಲೇ ದುರ್ಮರಣ

ವಿರಾಜಪೇಟೆ: ತೋಟವೊಂದರಲ್ಲಿ ಕಾಳು ಮೆಣಸು ಕುಯ್ಯಲು ಬಂದ ಕಾರ್ಮಿಕನ ಮೇಲೆ ವ್ಯಾಘ್ರ ದಾಳಿ (Tiger Attack) ನಡೆಸಿ ಹತ್ಯೆ ಮಾಡಿದ ಘಟನೆ ವಿರಾಜಪೇಟೆ ತಾಲ್ಲೂಕಿನ ಮೊದಲ ರುದ್ರಗುಪ್ಪೆ ಗ್ರಾಮದಲ್ಲಿ ಮಾ.28 ರಂದು ನಡೆದಿತ್ತು. 

ವಿರಾಜಪೇಟೆ ತಾಲ್ಲೂಕಿನ ಬಿಟ್ಟಾಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಡಂಗಾಲ, ಒಂದನೇ ರುದ್ರಗುಪ್ಪೆ ಕೊಂಗಂಡ ಗಣಪತಿ ಅಯ್ಯಪ್ಪ ಅವರ ಕಾಫಿ ತೊಟದ ಕಾರ್ಮಿಕ ಗಣೇಶ್ ಪುಟ್ಟು (29) ಹುಲಿ ದಾಳಿಗೆ ಬಲಿಯಾದ (Death) ವ್ಯಕ್ತಿ. ವಿರಾಜಪೇಟೆ ತಾಲ್ಲೂಕಿನ ಕಂಡಂಗಾಲ ರುದ್ರಗುಪ್ಪೆ ಕುಂದ ಭಾಗದಲ್ಲಿ ಕೆಲವು ತಿಂಗಳಿನಿಂದ ಹುಲಿಯಿಂದ ಜಾನುವಾರುಗಳ ಮೇಲೆ ದಾಳಿ ನಡೆದಿರುವ ಘಟನೆಯು ಮಾಸುವ ಮುನ್ನವೇ ಹುಲಿ ದಾಳಿಗೆ ಕಾರ್ಮಿಕನೊರ್ವನ ಮೇಲೆ ದಾಳಿ ‌ನಡೆದು ಮೃತನಾದ ಘಟನೆ ನಡೆದಿದೆ.
 

click me!