* ಕಲಬುರಗಿ ನಗರದ 2 ಅಕ್ರಮ ಕಸಾಯಿಖಾನೆಗಳ ಮೇಲಿನ ದಾಳಿ
* ಭಾರಿ ಪ್ರಮಾಣದಲ್ಲಿ ಗೋಮಾಂಸ- ಗೋವಿನ ಚರ್ಮ ದಾಸ್ತಾನು ಪತ್ತೆ
* ಬಹುದೊಡ್ಡ ಕಸಾಯಿಖಾನೆಗಳು
ಕಲಬುರಗಿ(ಏ.01): ಇಲ್ಲಿನ ಮೋಮಿನಪುರಾ ಹಾಗೂ ರೋಜಾ ಬಡಾವಣೆಯಲ್ಲಿರುವ ಅಕ್ರಮ ಕಸಾಯಿ ಖಾನೆಗಳ(Slaughterhouse) ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ನಡೆದ ದಾಳಿಯಲ್ಲಿ(Raid) ಅಪಾರ ಪ್ರಮಾಣದ (2 ಲಾರಿಯಷ್ಟು) ಗೋಮಾಂಸ(Beef), ಚರ್ಮ, ಅಂಗಾಂಗಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಗೋವಿನ ಎಲುಬು ಇತ್ಯಾದಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ವಧೆ ಮಾಡಲು ತರಲಾಗಿದ್ದ ಗೋವುಗಳ(Cow) ಪೈಕಿ 9 ಗೋವುಗಳನ್ನು ಅಧಿಕಾರಿಗಳು ಕಸಾಯಿ ಖಾನೆಯಿಂದ ರಕ್ಷಿಸಿದ್ದು ಇವುಗಳನ್ನು ಗೋಶಾಲೆಗಳಿಗೆ(Goshale) ರವಾನಿಸಿದ್ದಾರೆ. ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ(Karnataka Animal Welfare Board) ಸದಸ್ಯ ಹುಣಚಿರಾಯ (ಕೇಶವ) ಮೋಟಗಿ ಇವರು ನೀಡಿದ ದೂರಿನ ಮೇರೆಗೆ ಪೊಲೀಸರು(Police), ಮಹಾನಗರ ಪಾಲಿಕೆ, ಪಶು ಸಂಗೋಪನೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡದಿಂದ ನಡೆದ ಈ ದಾಳಿಯಲ್ಲಿ ಕಲಬುರಗಿ(Kalaburagi) ನಗರದಲ್ಲಿ ಹಿಂದೊಂದೂ ದೊರಕದಷ್ಟು ಗೋವಿನ ಚರ್ಮ, ಅಂಗಾಂಗಗಳು, ಮೂಳೆ ರಾಶಿ ದೊರಕಿದೆ.
undefined
ಕಸಾಯಿಖಾನೆಗೆ ಹಸುಗಳ ಸಾಗಾಟ: ಆಹಾರವಿಲ್ಲದೆ ಲಾರಿಯಲ್ಲೇ ಸತ್ತ ಎಮ್ಮೆಗಳು..!
ಪೊಲೀಸ್ ಸೇರಿದಂತೆ ಎಲ್ಲಾ ಇಲಾಖೆಯ 200ರಷ್ಟು ಸಿಬ್ಬಂದಿ ಸದರಿ ದಾಳಿಯಲ್ಲಿ ಭಾಗಿಯಾಗಿತ್ತು. ಕಲಬುರಗಿ ಈಚೆಗಿನ ದಶಕದಲ್ಲಿ ಸಾಕ್ಷಿಯಾದ ಗೋವುಗಳ ಹತ್ಯೆಯ ಭಾರಿ ಪ್ರಮಾಣದ ವಧಾಗಾರದ ಮೇಲಿನ ದಾಳಿ ಇದಾಗಿದ್ದು, ಇಲ್ಲಿ ದೊರಕಿರುವ ಗೋವಿನ ಚರ್ಮ, ಮೂಳೆ ಇತ್ಯಾದಿಗಳನ್ನು ದೇಶದ ವಿವಿಧ ಸ್ಥಳಗಳಿಗೆ ರವಾನಿಸಲಾಗುತ್ತಿತ್ತು ಎಂದು ಗೊತ್ತಾಗಿದೆ.
ಬಹುದೊಡ್ಡ ಕಸಾಯಿಖಾನೆಗಳು:
ಮೋಮಿನಪುರಾದಲ್ಲಿರುವ ಕಸಾಯಿಖಾನೆಯಂತೂ ಬಹು ದೊಡ್ಡದಾಗಿದ್ದು, ಇದು ಒಟ್ಟು 7 ಬಾಗಿಲು ಹೊಂದಿದೆ. ದಾಳಿಯ ಸುಳಿವು ಮೊದಲೇ ಸಿಲುಕಿತ್ತೋ ಏನೋ, ಎಂದಿನಂತೆ ಕಸಾಯಿಖಾನೆಯಲ್ಲಿ ಗೊವುಗಳನ್ನು ವಧೆ ಮಾಡುವ ಕೆಲಸ ಗುರುವಾರ ನಡೆದಿರಿಲ್ಲ. ಆದಾಗ್ಯೂ ಅಲ್ಲಿ ಬೀಗ ಜಡಿಯಲ್ಪಟ್ಟಂತಹ ಕೋಣೆಗಳನ್ನು ಒಂದೊಂದಾಗಿ ತೆರೆದು ನೋಡಿದರೆ ಅಲ್ಲೆಲ್ಲಾ ದಾಸ್ತಾನು ಮಾಡಲಾಗಿದ್ದು ಅಪಾರ ಪ್ರಮಾಣದ ಗೋವಿನ ಚರ್ಮ, ಮೂಳೆ, ಅಂಗಾಂಗಗಳು ಪತ್ತೆಯಾಗಿವೆ.
ಈ ಬೃಹದಾಕಾರದ ಕಸಾಯಿಖಾನೆ ಮಾಳಿಗೆ ಮೇಲೆಯೇ ನೂರಾರು ಕ್ವಿಂಟಲ್ ಮೂಳೆ, ಖುರಾ, ಗೋವಿನ ಚರ್ಮ ಸಂಗ್ರಹಿಸಲಾಗಿತ್ತು. ಇದಲ್ಲದೆ ಕೋಣೆಗಳಲ್ಲೆಲ್ಲಾ ಈ ವಸ್ತುಗಳು ತುಂಬಿ ತುಳುಕುತ್ತಿದ್ದವು ಎಂದು ದಾಳಿಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ’ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಗೋವಿನ ಹತ್ಯೆ ನಿರಂತರ:
ರೋಜಾ ಹಾಗೂ ಮೋಮಿನ ಪುರಾ ಬಡಾವಣೆಯ ಕಸಾಯಿ ಖಾನೆಯಲ್ಲಿ ದೊರಕಿರುವ ವಸ್ತುಗಳನ್ನು ಗಮನಿಸಿದರೆ ಇಲ್ಲೆಲ್ಲಾ ನಿತ್ಯ ಗೋವುಗಳ ವಧೆ ಸಾಗಿತ್ತು ಎಂದು ಹೇಳಬಹುದಾದಂತಹ ನೋಟಗಳು ಅಲ್ಲಿ ಕಂಡಿವೆ. 10 ಸಾವಿರದಷ್ಟು ಗೋವಿನ ಚರ್ಮದ ದಾಸ್ತಾನು ದೊರಕಿದ್ದು ನೋಡಿದರೆ ಈ ಕಸಾಯಿಖಾನೆಗಳೆರಡರಲ್ಲೂ ಗೋವಿನ ವಧೆ ನಿರಂತರ ಸಾಗಿತ್ತು ಎಂಬುದನ್ನು ಸಾರಿ ಹೇಳಿವೆ.
ಕಸಾಯಿಖಾನೆಗೆ ದಾಳಿ: 200 ಚರ್ಮ, 8 ಗೋವು ವಶ
ರಾಜ್ಯದಲ್ಲಿ(Karnataka) ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕಲಬುರಗಿ ನಗರ ಹಾಗೂ ಸುತ್ತಲಿನ ತಾಲೂಕುಗಳಲ್ಲಿ ಗೋವಿನ ಹತ್ಯೆ ನಿರಂತರ ಸಾಗಿದೆ. ಚಿತ್ತಾಪುರ, ವಾಡಿ, ಶಹಾಬಾದ್ ಇಲ್ಲೆಲ್ಲಾ ಗೋವಿನ ಚರ್ಮ, ಮಾಂಸ, ಮೂಳೆ, ಅಂಗಾಂಗಗಳ ಅಕ್ರಮ ದಾಸ್ತಾನು ದೊರಕುತ್ತಲೇ ಇದೆ. ಇದರಿಂದಾಗಿ ಕಲಬುರಗಿ ನಗರ ಸೇರಿದಂತೆ ಸುತ್ತಮುತ್ತ ಗೋವಿನ ಮಾರಣ ಹೋಮ ಸದಾಕಾಲ ಸಾಗಿದೆ. ಸದರಿ ದಾಳಿಗೆ ಸಂಬಂಧ ಪಟ್ಟಂತೆ ಚೌಕ್ ಠಾಣೆಯಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಕಸಾಯಿಖಾನೆ ಪಾಲಾಗ್ತಿದ್ದ 70ಕ್ಕೂ ಹೆಚ್ಚು ಗೋವುಗಳಿಗೆ ಮರುಜನ್ಮ..!
ಚಿಕ್ಕಮಗಳೂರು: ಗೋವುಗಳನ್ನ ಸಾಕೋದು ಏನು ದೊಡ್ಡ ವಿಚಾರವೇನಲ್ಲ. ಆದ್ರೆ, ಇಲ್ಲಿರೋ 70ಕ್ಕೂ ಹೆಚ್ಚು ದನಕರುಗಳು ಒಂದು ದಿನ ಲೇಟಾಗಿದ್ರೂ ನಮ್ಮ ಕಣ್ಣೆದುರು ಇರ್ತಾ ಇರ್ಲಿಲ್ಲ. ಎಲ್ಲವೂ ಕಸಾಯಿ ಖಾನೆಗೆ ಹೋಗಲು ತಯಾರಿ ನಡೆದಿತ್ತು. ಈ ವಿಚಾರವನ್ನ ತಿಳಿದ ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಕಾಮಧೇನು ಗೋ ಗೋಶಾಲೆಯ ಭಗವಾನ್, ಲಕ್ಷ್ಮಣ್ ಸೇರಿ ಮೋಹನ್ ಗೌಡ ಎಂಬುವರ ಸಹಾಯ ಪಡೆದು ಈ ಗೋವುಗಳನ್ನ ಕಾಪಾಡಿದ್ದರು.