'ನಮ್ಮ ಜಿಲ್ಲೆ ಜೈಲಿಗೆ ದರ್ಶನ್‌ ಕಳಿಸ್ಬೇಡಿ..' ಅಂತಾ ಜೈಲಧಿಕಾರಿಗಳೇ ಬೇಡಿಕೊಳ್ತಿದ್ದಾರೆ: ಕಿಲ್ಲಿಂಗ್‌ ಸ್ಟಾರ್‌ ವಕೀಲರ ಸ್ಪೋಟಕ ಹೇಳಿಕೆ

Published : Sep 03, 2025, 05:35 PM IST
darshan thoogudeepa

ಸಾರಾಂಶ

ನಟ ದರ್ಶನ್‌ರವರ ಬಳ್ಳಾರಿ ಜೈಲು ವರ್ಗಾವಣೆಗೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ, ಅವರ ಪರ ವಕೀಲರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಜೈಲು ಅಧಿಕಾರಿಗಳ ಒತ್ತಡ ಹಾಗೂ ಕಾನೂನು ದುರುಪಯೋಗದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವರ್ಗಾವಣೆಯ ಹಿಂದಿನ ನಿಜವಾದ ಉದ್ದೇಶವೇನು?

ಬೆಂಗಳೂರು (ಸೆ.3): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡುವಂತೆ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದರ ವಿಚಾರಣೆಯ ವೇಳೆ ದರ್ಶನ್‌ ಪರ ವಕೀಲ ಸುನೀಲ್‌ ಕುಮಾರ್‌ ಸಾಲು ಸಾಲು ಆರೋಪ ಮಾಡಿದ್ದಾರೆ. 'ಪರಪ್ಪನ ಅಗ್ರಹಾರದಲ್ಲಿ 2000ಕ್ಕಿಂತ ಹೆಚ್ಚು ಖೈದಿಗಳು ಇದ್ದಾರೆ. ಯಾರ ವರ್ಗಾವಣೆಗೂ ಇಲ್ಲದ ಇಂಟ್ರೆಸ್ಟ್ ಇವರ ವರ್ಗಾವಣೆ ಬಗ್ಗೆ ಯಾಕೆ? ತಮ್ಮನ್ನ ತಾವು ಸೇಫ್ ಆಗಲು ದರ್ಶನ್ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಬೇರೆ ಜಿಲ್ಲೆ ಜೈಲು ಅಧಿಕಾರಿಗಳೂ ಕೂಡ ದರ್ಶನ್ ಬೇಡ ಅಂತಿದ್ದಾರೆ. ಈ ಕೇಸ್ ತನಿಖೆ ನಡೆದಾಗ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಈಗ ಕಾರಾಗೃಹ ಡಿಜಿಪಿ. ಅವರ ಸೂಚನೆ ಮೇರೆಗೆ ಶಿಫ್ಟ್ ಗೆ ಅರ್ಜಿ ಹಾಕಲಾಗಿದೆ. ಜೈಲು ಅಧಿಕಾರಿಗಳಿಗೆ ಅವಾರ್ಡ್ ಕೊಡಿಸ್ತಿನಿ ಅಂತ ಹೇಳಿ ಈ ಅರ್ಜಿ ಹಾಕಿಸಿದ್ದಾರೆ ಎಂದು ಸುನೀಲ್‌ ಕುಮಾರ್‌ ಆರೋಪ ಮಾಡಿದ್ದಾರೆ.

ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರದಲ್ಲಿ ದರ್ಶನ್ ಸೇರಿ ಐವರು ಆರೋಪಿಗಳ ಜೈಲು ಶಿಫ್ಟ್ ಕೋರಿದ್ದ ಅರ್ಜಿಯನ್ನು 64ನೇ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ದರ್ಶನ್, ನಾಗರಾಜ್ ಹಾಗೂ ಲಕ್ಷ್ಮಣ್ ಪರ ವಕೀಲ ಸುನಿಲ್ ಕುಮಾರ್ ವಾದ ಮಾಡಿದ್ದರು.

‘ಅಷ್ಟೊಂದು ಇಂಟ್ರಸ್ಟ್‌ ಯಾಕೆ’: ಪ್ರಶ್ನೆ ಮಾಡಿದ ದರ್ಶನ್‌ ಪರ ವಕೀಲ

ವಿಚಾರಣೆ ನಡೆಯುವಾಗ ವೀಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಯನ್ನು ಹಾಜರು ಮಾಡಲು ಸಾಧ್ಯವಿಲ್ಲ. ಬೇಲ್ ಮೇಲೆ ಇದ್ದವರಿಗೆ ವೀಡಿಯೋ ಕಾನ್ಫರೆನ್ಸ್ ಗೆ ಅವಕಾಶ ಕೊಡುತ್ತಾರಾ? ಆರೋಪಿ ಜೊತೆ ವಕೀಲರು ವೀಡಿಯೋ ಕಾನ್ಫರೆನ್ಸ್ ಮಾತಾಡಲು ಸಾಧ್ಯವಿಲ್ಲ. ಕೇಸ್ ನಡೆಯುವಾಗ ವಕೀಲರು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಅನುಮಾನ ಪರಿಹರಿಸಿಕೊಳ್ಳಲು ಸಾಧ್ಯವೇ? ಯಾಕೆ ಇವರನ್ನ ಶಿಫ್ಟ್ ಮಾಡಬೇಕು? ಯಾಕೆ ಇಷ್ಟೊಂದು ಇಂಟ್ರೆಸ್ಟ್‌ ಅನ್ನೋದೇ ಯಕ್ಷಪ್ರಶ್ನೆ ಎಂದು ವಕೀಲರು ಪ್ರಶ್ನೆ ಮಾಡಿದ್ದಾರೆ.

‘ಜೈಲಿಗೆ ಹೋದ ಎರಡೇ ದಿನಕ್ಕೆ ಶಿಫ್ಟಿಂಗ್‌ಗೆ ಅರ್ಜಿ ಸಲ್ಲಿಸಿದ್ದಾರೆ’

ಆರೋಪಿಗಳು ಜೈಲಿಗೆ ಹೋದ 2 ದಿನದಲ್ಲಿ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆಡಳಿತ ಮತ್ತು ಭದ್ರತೆ ಆಧರಿಸಿ ಖೈದಿಗಳ ವರ್ಗಾವಣೆಗೆ ಅವಕಾಶವೇ ಇಲ್ಲ. 2024ರಲ್ಲಿ ಶಿಫ್ಟ್ ಮಾಡಲು ಆಂದು ಬೆಳಕಿಗೆ ಬಂದ ರಾಜಾತಿಥ್ಯ ಕಾರಣ ಆಗಿತ್ತು. ರೌಡಿ ಶೀಟರ್ ಗಳ ಜೊತೆ ಸೇರಿದ್ದರು ಎನ್ನುವ ಕಾರಣಕ್ಕೆ ಶಿಫ್ಟ್‌ ಮಾಡಲಾಗಿತ್ತು. ಆ ಸಮಯದಲ್ಲಿ ಕೇವಲ ಆರೋಪಿಗಳ ಮೇಲೆ ಮಾತ್ರ ಕೇಸ್ ಆಗಿಲ್ಲ. ಜೈಲು ಅಧಿಕಾರಿಗಳ ಮೇಲೂ ಕೇಸ್ ಆಗಿತ್ತು. ಆ ವಿಷಯ ಮುಚ್ಚಿಟ್ಟಿದ್ದಾರೆ. ಆಗ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿತ್ತು. 2024ರ ಆಗಸ್ಟ್‌ 8 ರಂದು ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದಾಗ ಜೈಲು ಅಧಿಕಾರಿಗಳು ಜೈಲಿನಿಂದ ಕೆಲ ವಸ್ತು ಸಾಗಿಸಿದ್ದಾರೆ. ಈ ಆರೋಪದಿಂದ ಜೈಲು ಅಧಿಕಾರಿಗಳನ್ನ ಅಮಾನತು ಆಗಿದ್ದಾರೆ. ಜೈಲು ಅಧಿಕಾರಿಗಳು ಸೇಫ್ ಆಗಲು ದರ್ಶನ್ ಸೇರಿ ಈ ಆರೋಪಿಗಳ ವರ್ಗಾವಣೆಗೆ ಮುಂದಾಗಿದ್ದಾರೆ. ದರ್ಶನ್ ಜೊತೆ ಪೋಟೋದಲ್ಲಿ ಕಾಣಿಸಿಕೊಂಡವರ ಕೇಸಿಗೆ ಹೈಕೋರ್ಟ್ ಸ್ಟೇ ಕೊಟ್ಟಿದೆ ಎಂದು ಹೇಳಿದ್ದಾರೆ.

ಪ್ರಿಸನರ್ಸ್ ಕಾಯಿದೆ 1963 ಪ್ರಕಾರ ಕೇವಲ ನಾಲ್ಕು ರೀತಿ ಖೈದಿಗಳು ಮಾತ್ರ ಶಿಫ್ಟ್ ಮಾಡಬಹುದು. ಪ್ರಿಸನರ್ಸ್ ಕಾಯಿದೆ 1963 ಸೆ.8ರ ಪ್ರಕಾರ ಡೆತ್ ಸೆಂಟೆನ್ಸ್, ಜೀವಾವಧಿ ಶಿಕ್ಷೆ ಆದವರು, ದಂಡ ಪಾವತಿ ಮಾಡದವರು ಹಾಗೂ ಒಳ್ಳೆಯ ವರ್ತನೆ ಇಲ್ಲವರನ್ನ ಮಾತ್ರ ವರ್ಗಾವಣೆ ಮಾಡಬಹುದು. ಜೈಲಿನಲ್ಲಿ ಶಾಂತಿ ಹಾಳು ಮಾಡಿದವರು, ಒಳ್ಳೆಯ ವರ್ತನೆ ಇಲ್ಲದವರನ್ನ ಶಿಫ್ಟ್ ಮಾಡಬಹುದು. ಆದರೆ, ದರ್ಶನ್ ಸೇರಿ ಈ ಅರ್ಜಿದಾರರು ವರ್ತನೆ ಸರಿಯಿಲ್ಲ ಅನ್ನೋದಕ್ಕೆ ಕಾರಣಗಳಿಲ್ಲ. ಜೈಲು ಅಧಿಕಾರಿಗಳಿಗೆ ವಿಚಾರಾಣಾಧೀನ ಖೈದಿ ವರ್ಗಾವಣೆ ಕೋರಲು ಅಧಿಕಾರವೇ ಇಲ್ಲ ಎಂದು ವಾದ ಮಾಡಿದ್ದಾರೆ.

‘ಆರೋಪಿಗಳು ಕೋರ್ಟ್‌ ಕಸ್ಟಡಿಯಲ್ಲಿದ್ದಾರೆ’

ಆರೋಪಿಗಳು ಪೊಲೀಸರು ಹಾಗೂ ಜೈಲು ಅಧಿಕಾರಿಗಳ ಕಸ್ಟಡಿಯಲ್ಲಿ ಇಲ್ಲ, ಅವರು ಇರೋದು ಕೋರ್ಟ್ ಕಸ್ಟಡಿಯಲ್ಲಿ. ಕೇವಲ ಆಡಳಿತಾತ್ಮಕ ಹಾಗೂ ಭದ್ರತೆ ಕಾರಣ ನೀಡಿ ವರ್ಗಾವಣೆ ಕೋರಿದ್ದಾರೆ. ಜೈಲು ಅಧಿಕಾರಿಗಳು ಸಲ್ಲಿಸಿರುವ ಅರ್ಜಿ ಊರ್ಜಿತವಲ್ಲ. ದರ್ಶನ್ ಸೆಲೆಬ್ರಿಟಿ ಆಗಿರೋದ್ರಿಂದ ಪೊಲೀಸರು, ಜೈಲು ಅಧಿಕಾರಿಗಳು ಕಾನೂನನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಸ್‌ಎಸ್‌ಪಿ ಅವರು ತೀರಾ ಮುತುವರ್ಜಿ ವಹಿಸಿ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ಫೇರ್ ಆಗಿರಬೇಕು. ಆದರೆ, ಎಸ್ಪಿಪಿ ಅವರು ದರ್ಶನ್ ಸೇರಿ ಈ ಕೇಸಿನ ಆರೋಪಿಗಳಿಗೆ ಶಿಕ್ಷೆ ಕೊಡಿಸೋಕೆ ಹೆಚ್ಚು ಶ್ರಮಿಸ್ತಾ ಇದ್ದಾರೆ ಎಂದು ದೂರಿದರು.

 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ