ದಲಿತರಿಂದ ಮನುಸ್ಮೃತಿ ಸುಟ್ಟು ಪ್ರತಿಭಟನೆ‌

Published : Aug 27, 2018, 06:54 PM ISTUpdated : Sep 09, 2018, 09:02 PM IST
ದಲಿತರಿಂದ ಮನುಸ್ಮೃತಿ  ಸುಟ್ಟು  ಪ್ರತಿಭಟನೆ‌

ಸಾರಾಂಶ

ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿದಾನವನ್ನು ಸುಟ್ಟಿದ್ದ ದುಷ್ಕರ್ಮಿಗಳು ಆರೆಸ್ಸೆಸ್ ವಿರುದ್ಧ ಧಿಕ್ಕಾರ ಕೂಗಿದ ದಲಿತ ಸಂಘಟನೆಗಳು

ಮಂಗಳೂರು:  ದೆಹಲಿಯಲ್ಲಿ ಸಂವಿಧಾನ ಸುಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ದಲಿತ ಮತ್ತು ಪ್ರಗತಿಪರ ಸಂಘಟನೆಗಳು  ಮನುಸ್ಮೃತಿ ಪುಸ್ತಕಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ  ಮಿನಿವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ದಲಿತ ಸಂಘಟನೆಗಳು ಮನುಸ್ಮೃತಿ ಪುಸ್ತಕ ಹಾಗೂ ಭಿತ್ತಿಪತ್ರಗಳಿಗೆ ಬೆಂಕಿ ಹಚ್ಚಿದ್ದಾರೆ.

ದಲಿತ ಸಂಘರ್ಷ ಸಮಿತಿ [ಡಿಎಸ್ ಎಸ್] ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಆರೆಸ್ಸೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
  
ಆರೆಸ್ಸೆಸ್ ಸಂವಿಧಾನವಿರೋಧಿಯಾಗಿದ್ದು  ಮೀಸಲಾತಿಯನ್ನು ವಿರೋಧಿಸುವ ಮೂಲಕ  ಅಂಬೇಡ್ಕರ್ ರನ್ನು ಅವಮಾನಿಸುತ್ತಿದೆಯೆಂದು ಪ್ರತಿಭಟನಾಕಾರರು ಅದರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಕೆಲ ದುಷ್ಕರ್ಮಿಗಳು ದೆಹಲಿಯ  ಜಂತರ್ ಮಂತರ್ ನಲ್ಲಿ ಇತ್ತೀಚೆಗೆ ಸಂವಿಧಾನವನ್ನು ಸುಟ್ಟಿದ್ದರು.

PREV
click me!

Recommended Stories

ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು
‘ಶಿಕ್ಷಣ ಹಬ್‌’ ಮಂಗಳೂರು ಈಗ ಡ್ರಗ್ಸ್‌ಗೂ ಕುಖ್ಯಾತ: ವಿದ್ಯಾರ್ಥಿಗಳೇ ಬಲಿಪಶು!