ಕೋಲಾರಕ್ಕೆ ಕಂಟಕವಾದ ಬೆಂಗಳೂರು!

By Kannadaprabha News  |  First Published Apr 16, 2021, 2:11 PM IST

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಪ್ರಕರಣಗಳು ದಿನದಿನವೂ ಏರಿಕೆಯಾಗುತ್ತಲೇ ಇದ್ದು ಆತಂಕದ ಪ್ರಮಾಣಕ್ಕೆ ತಲುಪಿವೆ. ಇದೇ ವೇಳೆ ಕೋಲಾರ ಜಿಲ್ಲೆಗೆ ಬೆಂಗಳೂರೇ ಕಮಟಕವಾಗುತ್ತಿದೆ. 


ಕೋಲಾರ (ಏ.16) :  ಜಿಲ್ಲೆಯ ಮೇಲೆ ಎರಡನೇ ಅಲೆಯ ಕೊರೋನಾ ಕರಿನೆರಳು ಬಿದ್ದಿದೆ. ರಾಜಧಾನಿ ಬೆಂಗಳೂರಿನಿಂದ ಬರುವವರಿಂದ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ ಅನ್ನೋ ಆತಂಕಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.

ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ   ಡಿಎಚ್‌ಒ ವಿಜಯ್‌ಕುಮಾರ್‌ ಈ ವಿಷಯವನ್ನು ಹೇಳಿದರು.

Latest Videos

undefined

ಬೆಂಗಳೂರು ಕೂಗಳತೆ ದೂರದಲ್ಲಿರುವ ಕಾರಣದಿಂದಾಗಿ ಕೋಲಾರ ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿದೆ. ಹಾಗಾಗಿ ಜಿಲ್ಲೆಯ ಜನ ಅತ್ಯಂತ ಜಾಗರೂಕರಾಗಿರಬೇಕೆಂದು ತಿಳಿಸಿದರು.

ಲಾಕ್‌ಡೌನ್ ಕೊರೊನಾಗಿಂತಲೂ ಭೀಕರವಾದುದು; ಸರ್ಕಾರದ ಕಿವಿಹಿಂಡಿದ ಕಾಂಗ್ರೆಸ್ ...

ಕಳೆದ ವರ್ಷಕ್ಕಿಂತಲೂ ಕೊರೋನಾ ಎರಡನೇ ಅಲೆ ಪ್ರಕರಗಳು ಹೆಚ್ಚಾಗುತ್ತಿವೆ, ಬೆಂಗಳೂರಿನಿಂದ ಕೋಲಾರಕ್ಕೆ ಹೆಚ್ಚು ಒಡನಾಟವಿರುವ ಕಾರಣ ಪ್ರಕರಣಗಳ ಸಂಖ್ಯೆ ಕಳೆದ ಬಾರಿಗಿಂತಲೂ ಹೆಚ್ಚಾಗುತ್ತಿದೆ. ಹಬ್ಬ ಹರಿದಿನಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜೊತೆಗೆ ಗುಂಪು ಗೂಡುವಿಕೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಕೊರೋನಾದ ತೀವ್ರತ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೆ ಜಿಲ್ಲೆಯಾದ್ಯಂತ ಎಲ್ಲಾ ವರ್ಗದವರು ಸೇರಿದಂತೆ ಇದುವರೆಗೂ ಸುಮಾರು 1 ಲಕ್ಷ 40 ಸಾವಿರ ಜನರು ಲಸಿಕೆಯನ್ನ ಪಡೆದಿದ್ದು, ಲಸಿಕೆ ಹಾಕುವುದನ್ನ ಮುಂದುವರೆಸಿದ್ದೇವೆ ಎಂದರು.

ಬೆಂಗಳೂರೊಂದರಲ್ಲೇ ಆತಂಕದ ಪ್ರಮಾಣದ ಕೇಸ್ : ಸಾವೂ ಹೆಚ್ಚಳ- ಎಚ್ಚರ! ...

104 ಕೊರೋನಾ ಪ್ರಕರಣಗಳು:  ಜಿಲ್ಲೆಯಲ್ಲಿ ಗುರುವಾರ 104 ಪ್ರಕರಣಗಳು ವರದಿಯಾಗಿದ್ದು ಒಬ್ಬರು ಮೃತಪಟ್ಟಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಆದವರು 94 ಮಂದಿ ಇದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 11548 ಸೋಂಕಿತ ಪ್ರಕರಣಗಳು ವರದಿಯಾಗಿದ್ದು 10900 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ, 187 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣ ಸಂಖ್ಯೆ 461 ಕ್ಕೆ ಏರಿಕೆಯಾಗಿದೆ.

click me!